2019 ರಿಂದ ಪ್ರಧಾನಿ ಮೋದಿಯ 21 ವಿದೇಶ ಪ್ರವಾಸಗಳಿಗೆ ಖರ್ಚು ಮಾಡಿದ ಹಣ 22.76 ಕೋಟಿ ರೂ!

New delhi : ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು 2019 ರಿಂದ ಮಾಡಿದ 21 ವಿದೇಶ ಪ್ರವಾಸಗಳಿಗೆ ಮಾಡಿದ ಒಟ್ಟು ಖರ್ಚು 22.76 ಕೋಟಿ ರೂ. ಎಂಬುದನ್ನು ಸರ್ಕಾರ ಪ್ರಕಟಿಸಿದ(Modi’s foreign trips cost) ಮಾಹಿತಿಯಲ್ಲಿ ತಿಳಿದುಬಂದಿದೆ. ಈ ಮಾಹಿತಿಯನ್ನು ಇಂಡಿಯಾ ಟುಡೇ(India Today) ಪ್ರಕಟಿಸಿದೆ.

2019 ರಿಂದ ಪ್ರಧಾನಿಯವರು 21 ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದಾರೆ, ಈ ಭೇಟಿಗಳಿಗಾಗಿ 22.76 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಸರ್ಕಾರ ಗುರುವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ರಾಷ್ಟ್ರಪತಿಗಳು ಎಂಟು ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದಾರೆ ಮತ್ತು 2019 ರಿಂದ ಈ ಪ್ರವಾಸಗಳಿಗೆ 6.24 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ

ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್(V Muralidharan) ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ರಾಷ್ಟ್ರಪತಿಗಳ ಭೇಟಿಗಾಗಿ 6,24,31,424 ರೂ., ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಗಾಗಿ 22,76,76,934 ರೂ.

ಮತ್ತು ವಿದೇಶಾಂಗ ಸಚಿವರ ಭೇಟಿಗಾಗಿ 2019 ರಿಂದ 20,87,01,475 ರೂ. ಖರ್ಚು ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಾಷ್ಟ್ರಪತಿಗಳು ಎಂಟು ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದರೆ, ಪ್ರಧಾನಿ 2019 ರಿಂದ 21 ಪ್ರವಾಸಗಳನ್ನು (Modi’s foreign trips cost) ಕೈಗೊಂಡಿದ್ದಾರೆ.

ಈ ಅವಧಿಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್(Jai Shankar) ಅವರು 86 ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದಾರೆ.

2019 ರಿಂದ, ಪ್ರಧಾನಿ ಅವರು ಜಪಾನ್‌(Japan) ದೇಶಕ್ಕೆ ಮೂರು ಬಾರಿ ಮತ್ತು ಯುನೈಟೆಡ್‌ ಸ್ಟೇಟ್ಸ್(United states) ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌(United Arab Emirates) ದೇಶಕ್ಕೆ ಎರಡು ಬಾರಿ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಮತದಾರರಿಗೆ ವಿವಿಧ ಉಡುಗೊರೆಗಳ ಆಮಿಷ : ಕಾನುನೂ ಕ್ರಮಕ್ಕೆ ಚುನಾವಣೆ ಆಯೋಗ ಸೂಚನೆ

ರಾಷ್ಟ್ರಪತಿಗಳ ಭೇಟಿಗಳಲ್ಲಿ, ಎಂಟು ಪ್ರವಾಸಗಳಲ್ಲಿ ಏಳನ್ನು ರಾಮ್ ನಾಥ್ ಕೋವಿಂದ್ ಅವರು ಕೈಗೊಂಡಿದ್ದರೆ,

ಪ್ರಸ್ತುತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು(Draupadi Murmu) ಅವರು ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಯುಕೆಗೆ ಭೇಟಿ ನೀಡಿದ್ದರು ಎಂದು ಹೇಳಿದೆ.

ಇಂಡಿಯಾ ಟುಡೇ ಪ್ರಕಟಿಸಿದ ಈ ವರದಿಯ ಬೆನ್ನಲ್ಲೇ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು,

ಸದ್ಯ ಚುನಾವಣೆ ಮುಂಬರುತ್ತಿರುವ ಕಾರಣ ಈ ಒಂದು ಮಾಹಿತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ ಎಂಬುದು ಗಮನಾರ್ಹ!

Exit mobile version