“ದೇಶದ ಉಜ್ವಲ ಭವಿಷ್ಯಕ್ಕಾಗಿ ನನ್ನ ಜೀವನದ ಪ್ರತಿ ಕ್ಷಣವನ್ನೂ ಕಳೆದಿದ್ದೇನೆ” : ಲೋಕಸಭೆಯಲ್ಲಿ ಮೋದಿ ಮಾತು

New Delhi : ನನ್ನ ಮೇಲಿನ ನಂಬಿಕೆ ಪತ್ರಿಕೆ-ಟಿವಿ ಮುಖ್ಯಾಂಶಗಳಿಂದಲ್ಲ. 140 ಕೋಟಿ ಭಾರತೀಯರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರು ನನ್ನ ರಕ್ಷಣಾ (Modi’s speech Lok Sabha) ಕವಚ.

ದೇಶದ ಜನರಿಗಾಗಿ, ದೇಶದ ಉಜ್ವಲ ಭವಿಷ್ಯಕ್ಕಾಗಿ ಪ್ರತಿ ಕ್ಷಣದ ನನ್ನ ಜೀವನವನ್ನೂ ಕಳೆದಿದ್ದೇನೆ  ಎಂದು ಪ್ರಧಾನಿ ನರೇಂದ್ರ  ಮೋದಿ(Narendra Modi) ಅವರು ಲೋಕಸಭೆಯಲ್ಲಿ ಪ್ರತಿಪಕ್ಷಗಳ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅದಾನಿ(Adani) ಕಂಪನಿ ವಿಷಯವನ್ನಿಟ್ಟುಕೊಂಡು ಪ್ರಧಾನಿ ಮೋದಿ ವಿರುದ್ದ ಟೀಕಾಪ್ರಹಾರ ನಡೆಸಿದ್ದ ಕಾಂಗ್ರೆಸ್‌(Congress) ಪಕ್ಷಕ್ಕೆ ತಿರುಗೇಟು ನೀಡಿರುವ ಮೋದಿ,

ಆಯುಷ್ಮಾನ್ ಭಾರತ್(Ayushman Bharath) ಫಲಾನುಭವಿಗಳು,

ವಸತಿ ಯೋಜನೆಯಡಿ ಮನೆ ಪಡೆದ ಜನರು, ಆಯುಷ್ಮಾನ್ ಫಲಾನುಭವಿಗಳು, ವಿಪಕ್ಷಗಳ ಸುಳ್ಳನ್ನು ಹೇಗೆ ನಂಬುತ್ತಾರೆ ? ಹಿಂದಿನ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ದೇಶವ್ಯಾಪಿಯಾಗಿ ಭಯೋತ್ಪಾದನೆ ಹಬ್ಬಿತ್ತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಧ್ವನಿ ಅಡಗಿಹೋಗಿತ್ತು. ನಮ್ಮ ದೇಶದ ಮಾತಿಗೆ ಕಿಮ್ಮತ್ತು ಇರಲಿಲ್ಲ. ಇಂದು ಭಾರತದ ಶಕ್ತಿಗೆ ವಿಶ್ವಕ್ಕೆ ಪರಿಚಯ ಆಗುತ್ತಿದೆ.

ಸೋತಾಗ ಚುನಾವಣಾ ಅಧಿಕಾರಿಗಳನ್ನು ದೂರುವುದು, ಸುಪ್ರೀಂ ಕೋರ್ಟ್(Supreme Court) ಅನ್ನು ದೂರುವುದು,  ಸೈನಿಕರ ಮೇಲೆ ಆರೋಪ ಮಾಡುವುದು,

ಭ್ರಷ್ಟಾಚಾರ ನಿಗ್ರಹ ಸಂಸ್ಥೆ, ಆರ್‌ಬಿಐ(RBI)ಅಧಿಕಾರಿಗಳನ್ನು ದೂರುವುದು ಹೀಗೆ ಕಳೆದ 9 ವರ್ಷಗಳಿಂದ ವಿಪಕ್ಷಗಳು ಆರೋಪಗಳನ್ನಷ್ಟೇ ಮಾಡುತ್ತಿವೆ.

ನಮ್ಮ ದೇಶವು ಮೊದಲು ನಮ್ಮ ಸಮಸ್ಯೆಗಳಿಗೆ ಉಳಿದ ರಾಷ್ಟ್ರಗಳ ಜೊತೆಗೆ ಪರಿಹಾರ ಕೇಳುತ್ತಿತ್ತು.

ಇಂದು ಅನೇಕ ದೇಶಗಳು ನಮ್ಮ ಬಳಿ ಸಮಸ್ಯೆ ಹೇಳಿಕೊಳ್ಳುತ್ತಿವೆ. ಜೊತೆಗೆ ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಸರ್ಕಾರಿ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರಕ್ಕೆ ಮುಕ್ತಿ ದೊರಕಿದೆ ಎಂದಿದ್ದಾರೆ.

ಇಂದು ದೇಶದ ಪ್ರತಿಯೊಂದು ಕ್ಷೇತ್ರ, ಪ್ರತೀ ವ್ಯಕ್ತಿಗಳಲ್ಲಿ ಆಶಾವಾದ ಮೂಡಿದೆ. ಹೀಗಿದ್ದರೂ ಕೆಲವರಿಗೆ ಮಾತ್ರ ನಿರಾಸೆಯೇ ಕಾಣುತ್ತಿರುವುದು ದುರಂತ.

2004 ರಿಂದ 2014 ರವರೆಗೆ  ಕುಸಿದು ಹೋಗಿದ್ದ ದೇಶದ ಆರ್ಥಿಕತೆ ಇಂದು ಚೇತರಿಸಿಕೊಂಡಿದೆ. 

ಹೀಗಾಗಿ, ಅವರಿಗೆ ನಿರಾಸೆಯಾಗದೇ ಇರುವುದೇ? ಈ 9 ವರ್ಷಗಳಲ್ಲಿ ದೇಶದಲ್ಲಿ 60 ಸಾವಿರ ಸ್ಟಾರ್ಟ್ ಆಪ್‌ಗಳು ಆರಂಭಗೊಂಡಿವೆ.  ಸ್ಟಾರ್ಟ್ ಅಪ್ ನಲ್ಲಿ ಭಾರತಕ್ಕೆ ಜಗತ್ತಿನಲ್ಲೇ 3 ನೇ ಸ್ಥಾನ.

ಮೊಬೈಲ್ ಉತ್ಪಾದನೆಯಲ್ಲಿ 2ನೇ ಸ್ಥಾನ. ಸಮರ್ಪಕ ಇಂಧನ ಬಳಕೆಯಲ್ಲಿ3ನೇ ಸ್ಥಾನ ಎನ್ನುವುದು ಎಲ್ಲರೂ ಹೆಮ್ಮೆಪಡಬೇಕಾದ ವಿಚಾರ. 

ಕೊರೋನಾ(Corona) ಕಾಲದಲ್ಲಿ ಭಾರತದಲ್ಲಿಅತಿ ದೊಡ್ಡ ವ್ಯಾಕ್ಸಿನ್(Vaccine) ಅಭಿಯಾನ ನಡೆಯಿತು.

150 ದೇಶಗಳಿಗೆ ವ್ಯಾಕ್ಸಿನ್ ತಲುಪಿಸಲಾಯಿತು. ಇಂಥ ಸಂಕಷ್ಟ ಕಾಲದಲ್ಲಿ ಮುಂದುವರಿದ ದೇಶಗಳು ಕೂಡ ಜನರ (Modi’s speech Lok Sabha) ಸಂರಕ್ಷಣೆಗಾಗಿ ಒದ್ದಾಡಿತು ಎಂದು ಹೇಳಿದ್ದಾರೆ.

ಭಾರತಕ್ಕೆ ಜಿ- ೨೦(G 20) ನಾಯಕತ್ವ ದೊರಕಿರುವುದು ದೇಶಕ್ಕೆ ಹೆಮ್ಮೆ ಹಾಗೂ ಸಂತೋಷದ ವಿಷಯ. ಆದರೆ ಕೆಲವರಿಗೆ ಇದು ದುಃಖ ತರಿಸಿದೆ.

ಭಾರತದಲ್ಲಿ ಇಂದು ಸ್ಥಿರ ಸರ್ಕಾರವಿದೆ. ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಘನ ತೀರ್ಮಾನ ತೆಗೆದುಕೊಳ್ಳಬಲ್ಲ ಸಾಮರ್ಥ್ಯವಿರುವ ಸರ್ಕಾರವಿದೆ. 

ಇಂದು ಪ್ರಪಂಚದ ಎಷ್ಟೋ ದೇಶಗಳಲ್ಲಿ ನಿರುದ್ಯೋಗ, ಹಸಿವು, ಯುದ್ಧಗಳಿಂದಾಗಿ ಆರ್ಥಿಕ ದುಸ್ಥಿತಿಯಿದೆ. ನಮ್ಮದೇ ಪಕ್ಕದ ದೇಶ ಇವುಗಳಿಂದ ನಲುಗಿಹೋಗುತ್ತಿದೆ. 

ಇಂಥ ಸಂದಿಗ್ದ ಸನ್ನಿವೇಶದಲ್ಲೂ ಭಾರತ ಜಗತ್ತಿನ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಇದು ಹೆಮ್ಮೆಯ ವಿಷಯ.

ಕಳೆದ 100 ವರ್ಷಗಳಲ್ಲಿ ದೇಶದ ಮೇಲೆ ಎರಗಿದ ಸಾಂಕ್ರಾಮಿಕ ರೋಗಗಳು, ಅದರಿಂದ ಉಂಟಾದ ಆತಂಕ ಹಾಗೂ ಅದನ್ನು ನಿಭಾಯಿಸಿದ ರೀತಿಯಿಂದ ದೇಶ ಇಂದು ಆತ್ಮವಿಶ್ವಾಸದಿಂದ ಬೀಗುತ್ತಿದೆ. 

ದೊಡ್ಡ ದೊಡ್ಡ ಭ್ರಷ್ಟಾಚಾರಗಳಿಂದ ದೇಶಕ್ಕೆ ಮುಕ್ತಿ ಬೇಕಿತ್ತು. ಅದು ಈಗ ದೊರೆತಿದೆ. 

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ದೇಶದ ಮಹಿಳೆಯರ ಘನತೆಯನ್ನು ಮಾತ್ರವಲ್ಲದೆ, ಆದಿವಾಸಿ ಹೆಣ್ಣುಮಕ್ಕಳ ಘನತೆಯನ್ನೂ ಹೆಚ್ಚಿಸಿದ್ದಾರೆ ಎಂದು ಲೋಕಸಭೆಯಲ್ಲಿ ಹೇಳಿದ್ದಾರೆ.

Exit mobile version