ಡ್ಯಾಮ್‌ಗೆ ಹಾರಿ ತಾಯಿ ಮಗ ಆತ್ಮಹತ್ಯೆ

ಚಾಮರಾಜನಗರ, ಫೆ. 04: ಹನೂರು ತಾಯಿ ಹಾಗೂ ಮಗ ಡ್ಯಾಮ್ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಯಾರಂಬಾಡಿ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟವರನ್ನು ಚಿನ್ನಮ್ಮ (39) ಹಾಗೂ ಆಕೆಯ ಪುತ್ರ ಮಹದೇವಸ್ವಾಮಿ (14)ಆತ್ಮಹತ್ಯೆ ಮಾಡಿ ಕೊಂಡವರು ಕಾಡಂಚಿನ ಗ್ರಾಮ ಹೂಗಾಯಮ್ ಗ್ರಾಮದಲ್ಲಿ ವಾಸವಾಗಿದ್ದ ಚಿನ್ನಮ್ಮ ಕೌಟಂಬಿಕ ಕಲಹದಿಂದ ಬೇಸತ್ತು ಮಗನ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ  ಭೇಟಿ ನೀಡಿದ ರಾಮಪುರ ಪೊಲೀಸ್ ಸಿಬ್ಬಂದಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version