ಫ್ಯಾನ್ ರಿಪೇರಿ ಮಾಡಲು ಬರಲಿಲ್ಲ ಎಂದು ಮಗನ ಇಂಜಿನಿಯರಿಂಗ್ ಸರ್ಟಿಫಿಕೇಟನ್ನು ಹರಿದ ತಾಯಿ!

Son

ಮನೆಯಲ್ಲಿ ಫ್ಯಾನ್ ಹಾಳಾಗಿದೆ ಎಂದು ತಾಯಿಯೊಬ್ಬರು ತಮ್ಮ ಮಗನ ಬಳಿ ಫ್ಯಾನ್ ರಿಪೇರಿ ಮಾಡುವಂತೆ ಹೇಳಿದರು.

ಮಗ ತಾಯಿಯ ಮಾತಿನ ಬಗ್ಗೆ ಗಮನ ಕೊಡದಿದ್ದಾಗ ತಾಯಿ ಮಗನಿಗೆ ಹೇಗೆ ಪಾಠ ಕಲಿಸಿದ್ದಾರೆ ಗೊತ್ತಾ? ಇದೊಂದು ರೀತಿ ವಿಚಿತ್ರವಾದರೂ, ಸತ್ಯ!

ಅಷ್ಟಕ್ಕೂ ತಾಯಿ ಮಗನ ಸರ್ಟಿಫಿಕೇಟ್ ಹರಿದು ಹಾಕಲು ಕಾರಣವೇನು ಎಂಬುದನ್ನು ತಿಳಿಯಲು ಮುಂದೆ ಓದಿ.


ತನ್ನ ಮಗನನ್ನು ಒಳ್ಳೆಯ ರೀತಿಯಲ್ಲಿ ಇಂಜಿನಿಯರಿಂಗ್ ಪದವಿ ಓದಿಸಿದ್ದರು ತಾಯಿ. ಎಲ್ಲರಂತೆ ನನ್ನ ಮಗ ಕೂಡ ಒಬ್ಬ ದೊಡ್ಡ ವ್ಯಕ್ತಿ ಆಗಬೇಕು ಎನ್ನುವುದು ಆಕೆಯ ಕನಸು.

ಆದರೆ ಏನು ಮಾಡುವುದು ಭಾರತದ ಅಮ್ಮಂದಿರೆ ಹೀಗೆ ನೋಡಿ. ತನ್ನ ಮಗ ಕಲಿತದ್ದು ಎಲೆಕ್ಟ್ರಿಕ್ ಎಂಜಿನಿಯರಿಂಗ್. ಹಾಗಾಗಿ, ಮನೆಯಲ್ಲಿ ಫ್ಯಾನ್ ಹಾಳಾಗಿದೆ ಸರಿ ಮಾಡು ಎಂದಿದ್ದಾಳೆ.

https://vijayatimes.com/actor-chethan-ahimsa-allegation/

ಮಗ ಮಾತ್ರ ಅದನ್ನು ಕಿವಿಗೆ ಹಾಕಿಕೊಳ್ಳದೆ ಸೋಂಬೇರಿ ಹಾಗೆ ವರ್ತನೆ ಮಾಡಿದ್ದಾನೆ. ಆಗ ಕೋಪಗೊಂಡ ತಾಯಿ “ನಿನ್ನನ್ನು ಓದಿಸಿದ್ದು ವ್ಯರ್ಥ, (Mother tore son engineering certificate) ಎಲೆಕ್ಟ್ರಿಕ್ ಎಂಜಿನಿಯರಿಂಗ್ ಪದವಿ ಪಡೆದಿದ್ದರೂ ಒಂದು ಫ್ಯಾನ್ ರಿಪೇರಿ ಮಾಡಲು ಆಗುವುದಿಲ್ಲ” ಎಂದು ಬೈದಿದ್ದಾರೆ.


ಆದರೂ ಆತ ತಾಯಿಯ ಮಾತನ್ನು ಗಂಭೀರವಾಗಿ ಪರಿಗಣಿಸದೆ ಸುಮ್ಮನಿದ್ದ, ಅದೇ ಆತ ಮಾಡಿದ ತಪ್ಪು.

ಈತನ ನಿರ್ಲಕ್ಷ್ಯದಿಂದ ತೀವ್ರ ಕೋಪಗೊಂಡ ತಾಯಿ “ಮನೆಯಲ್ಲಿ ಹಾಳಾಗಿರುವ ಒಂದು ಫ್ಯಾನ್ ಸರಿ ಮಾಡಲು ಆಗದವನಿಗೆ ಎಲೆಕ್ಟ್ರಿಕ್ ಇಂಜಿನಿಯರಿಂಗ್ ಪದವಿ ಯಾಕೆ” (Mother tore son engineering certificate) ಎಂದು ಹೇಳಿ ಆತನ ಡಿಗ್ರಿ ಸರ್ಟಿಫಿಕೇಟ್ ಅನ್ನು ಹರಿದು ಹಾಕಿದ್ದಾರೆ.

https://youtu.be/-umt5mYHZT4

ಹೌದು, ಈ ಘಟನೆಯ ಬಗ್ಗೆ ಕೇಳಿದಾಗ ನಮಗೆ ತಮಾಷೆ ಎನಿಸುತ್ತದೆ. ಆದರೆ ತನ್ನ ತಪ್ಪಿನಿಂದಾಗಿ ಈ ಹುಡುಗ ತನ್ನ ಸರ್ಟಿಫಿಕೇಟ್ ಅನ್ನೇ ಕಳೆದುಕೊಳ್ಳಬೇಕಾಯಿತು.

ಹಾಗಾಗಿಯೇ ಅಮ್ಮಂದಿರ ಮಾತನ್ನು ಸದಾ ಪಾಲಿಸಿ, ಅವರ ಕೋಪಕ್ಕೆ ತುತ್ತಾದರೆ ದೊಡ್ಡ ಸಮಸ್ಯೆಯಾಗುತ್ತದೆ ಎಂಬುದಕ್ಕೆ ಇದೇ ಅಚ್ಚರಿಯ ನಿದರ್ಶನ.
Exit mobile version