ಮೂಗಿನ ಸರ್ಜರಿಯಿಂದ ತನ್ನೆರಡು ಕಾಲುಗಳನ್ನು ಕಳೆದುಕೊಂಡ ಯುವತಿ

ಅಂಕಾರಾ, ಡಿ. 29: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತಾವು ಅಂದವಾಗಿ ಕಾಣಬೇಕೆಂದು ಬೇಡವಾದ ವಸ್ತುಗಳನ್ನು ಬಳಸಿ ಇರುವ ಸೌಂದರ್ಯವನ್ನು ಕಳೆದುಕೊಳ್ಳುತ್ತಾರೆ. ಆದರೆ ಈ ವಿಷಯದಲ್ಲಿ ಬೇರೆ ರೀತಿಯಲ್ಲೇ ಆಗಿದೆ. ಅದು ಮೂಗನ್ನು ಸಣ್ಣ ಮಾಡಿಕೊಂಡು ಅಂದವಾಗಿ ಕಾಣಲು ಸರ್ಜರಿ ಮಾಡಿಸಿಕೊಂಡ ಯುವತಿ ತನ್ನ ಎರಡು ಕಾಲನ್ನು ಕಳೆದುಕೊಂಡಿದೆ.ಈ ಘಟನೆ ಟರ್ಕಿಯಲ್ಲಿ ನಡೆದಿದೆ. 25 ವರ್ಷದ ಸೆವಿಂಕ್ ಯುವತಿ 2014ರಲ್ಲಿ ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದಳು. ದಪ್ಪ ಇದ್ದ ಮೂಗನ್ನು ಸಣ್ಣ ಮಾಡಲು ಎರಡು ಗಂಟೆಗಳಲ್ಲಿ ಸರ್ಜರಿ ಮಾಡಲಾಗಿತ್ತು.

ಹಲವು ದಿನಗಳಿಂದ ಸೆವಿಂಕ್‍ಗೆ ಕಾಲುಗಳ ನೋವು ಆರಂಭವಾಗಿದೆ. ಅದರಿಂದ ಬೇರೆ ಆಸ್ಪತ್ರೆಗೆ ತೋರಿಸಿದಾಗ ಅಲ್ಲಿನ ವೈದ್ಯರು ಈ ರೀತಿ ತಿಳಿಸಿದ್ದಾರೆ ಈ ರೀತಿ ಆಗುವುದಕ್ಕೆ ಹಿಂದೆಯಾಗಿದ್ದ ಮೂಗಿನ ಸರ್ಜರಿ ಕಾರಣ. ಈ ಸರ್ಜರಿಯಿಂದ ಸೆವಿಂಕ್‍ಗೆ ಕಾಲುಗಳು ಕಪ್ಪಾಗಲಾರಂಭಿಸಿವೆ. ಅದರಿಂದ ವಿಪರೀತ ನೋವು ಶುರುವಾಗಿ ನಡೆಯುವುದಕ್ಕೂ, ಆಗದೆ ಆಕೆ ಆಸ್ಪತ್ರೆ ಸೇರಿದ್ದಾಳೆ. ಅದನ್ನು ಗಮನಿಸಿ ಅಲ್ಲಿನ ವೈದ್ಯರು ಸೆವಿಂಕ್‍‍ಗೆ ತಿಳಿಸಿದ್ದರು, ಬ್ಲಡ್ ಪಾಯಿಸನ್ ಆಗಿರುವ ಕಾರಣದಿಂದ  ಎರಡು ಕಾಲುಗಳ ಮೊಣಕಾಲಿನ ಕೆಳಗೆ ಕತ್ತರಿಸದಿದ್ದರೆ ಪ್ರಾಣಕ್ಕೆ ಅಪಾಯವೆಂದು ಹೇಳಿದ್ದಾರೆ. ಇದರಿಂದ ಸೆವಿಂಕ್‍ ಈಗ ಎರಡು ಕಾಲುಗಳನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಸೆವಿಂಕ್ ಈಗ ಆಸ್ಪತ್ರೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ. ಅದಕ್ಕೆ 1 ಕೋಟಿ ರೂ.ಪರಿಹಾರ ಹಣ ನೀಡಬೇಕೆಂದು ಕೋರಿದ್ದಾಳೆ.

Exit mobile version