ಪೊಲೀಸ್‌ ಠಾಣೆಯೊಳಗೆ ವಿಡಿಯೋ ಚಿತ್ರೀಕರಣ ಮಾಡಬಹುದು: ಬಾಂಬೆ ಹೈಕೋರ್ಟ್‌ ಮಹತ್ವದ ತೀರ್ಪು

Mumbai : ದೇಶದ ಎಲ್ಲ ಪೊಲೀಸ್‌ ಠಾಣೆಯೊಳಗೆ ಸಾರ್ವಜನಿಕರು (Mumbai high court judgment) ವಿಡಿಯೋ ಚಿತ್ರೀಕರಣವನ್ನು ಮಾಡಬಹುದು. ಅಧಿಕೃತ ರಹಸ್ಯ ಕಾಯ್ದೆ ಪ್ರಕಾರ, ಪೊಲೀಸ್‌ಠಾಣೆಯು ನಿಷೇಧಿತ ಪ್ರದೇಶವಲ್ಲ.

ಅಲ್ಲಿ ನಡೆಯುವ ಘಟನೆಗಳ ಕುರಿತು ಸಾರ್ವಜನಿಕರು ವಿಡಿಯೋ ಚಿತ್ರೀಕರಿಸುವುದು ಅಪರಾಧವಲ್ಲ ಎಂದು ಬಾಂಬೆ ಹೈಕೋರ್ಟ್‌ನ (High court) ನಾಗ್ಪುರ್‌ಪೀಠ ಅಭಿಪ್ರಾಯಪಟ್ಟಿದೆ.

ಪೊಲೀಸ್‌ ಠಾಣೆಯೊಳಗೆ ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕಾಗಿ ರವೀಂದ್ರ ಉಪಾಧ್ಯಾಯ (Ravindra Upadhyaya) ಎಂಬುವವರ ಮೇಲೆ ವಾದ್ರಾ(Vadra) ಪೊಲೀಸರು ಅಧಿಕೃತ ರಹಸ್ಯ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ರದ್ದು ಪಡಿಸುವಂತೆ ಕೋರಿ ರವೀಂದ್ರ ಉಪಾಧ್ಯಾಯ ಅವರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಮೆಸ್ಸಿ, ರೊನಾಲ್ಡೊ ಭೇಟಿ ಮಾಡಿದ ಅಮಿತಾಭ್ ಬಚ್ಚನ್ ; ದಿಗ್ಗಜರ ಭೇಟಿಗೆ ಅಭಿಮಾನಿಗಳ ಶ್ಲಾಘನೆ

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮನೀಶ್‌ ಪಿತಳೆ ಮತ್ತು ನ್ಯಾಯಮೂರ್ತಿ ವಾಲ್ಮಿಕಿ ಮೆನೆಜಿಸ್‌(Valmiki menejis) ಅವರಿದ್ದ ದ್ವಿಸದಸ್ಯ ಪೀಠವು, ಅಧಿಕೃತ ರಹಸ್ಯ ಕಾಯ್ದೆಯ ಪ್ರಕಾರ ಪೊಲೀಸ್‌ ಠಾಣೆಯು ನಿಷೇಧಿತ ಪ್ರದೇಶವಲ್ಲ.

ಈ ಕಾಯ್ದೆಯ ಸೆಕ್ಷನ್ 2(8) ಪ್ರಕಾರ ನಿಷೇಧಿತ ಪ್ರದೇಶಗಳ ಪಟ್ಟಿಯಲ್ಲಿ ಪೊಲೀಸ್‌ಠಾಣೆ (Mumbai high court judgment) ಬರುವುದಿಲ್ಲ. ‌ಹೀಗಾಗಿ ಅರ್ಜಿದಾರರ ಮೇಲೆ ದಾಖಲಿಸಿರುವ ಪ್ರಕರಣವನ್ನು ಕೈಬಿಟ್ಟು ಅವರ ಮೇಲೆ ದಾಖಲಾಗಿರುವ ಎಫ್‌ಐಆರ್‌(FIR) ಅನ್ನು ಬಾಂಬೆ ಹೈಕೋರ್ಟ್‌ ರದ್ದುಪಡಿಸಿದೆ.

ಪ್ರಕರಣದ ಹಿನ್ನಲೆ : ಮುಂಬೈ ನಗರದ ವಾದ್ರಾ ನಿವಾಸಿಯಾದ ರವೀಂದ್ರ ಅವರು 2018ರ ಮಾರ್ಚ್‌ನಲ್ಲಿ ತಮ್ಮ ನೆರೆಮನೆಯ ವ್ಯಕ್ತಿಯೊಂದಿಗಿನ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಗೆ (Police station) ದೂರು ದಾಖಲಿಸಿದ್ದರು.

ಅದಕ್ಕೆ ಪ್ರತಿಯಾಗಿ ನೆರೆಮನೆಯ ವ್ಯಕ್ತಿಯೂ ಪೊಲೀಸ್‌ಠಾಣೆಗೆ ದೂರು ದಾಖಲಿಸಿದ್ದನು. ಈ ವಿವಾದವನ್ನು ಬಗೆಹರಿಸಲು ಇಬ್ಬರನ್ನು ಠಾಣೆಗೆ ಕರೆಸಿ ಪೊಲೀಸರು ಮಾತು ನಡೆಸಿದರು.

ಈ ಮಾತಕತೆಯನ್ನು ರವೀಂದ್ರ ಉಪಾಧ್ಯಾಯ ಅವರು ವಿಡಿಯೋ ಚಿತ್ರೀಕರಣ (Video shoot) ಮಾಡುತ್ತಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೊಲೀಸ್‌ ಠಾಣಾಧಿಕಾರಿ, ರವೀಂದ್ರ ಅವರ ಮೇಲೆ ಅಧಿಕೃತ ರಹಸ್ಯ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ನಂತರ ರವೀಂದ್ರ ಅವರು ತಮ್ಮ ಮೇಲೆ ದಾಖಲಾಗಿರುವ ಎಫ್‌ಐಆರ್‌ ಮತ್ತು ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದು ಮಾಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯ ಪ್ರಕರಣವನ್ನು ರದ್ದುಗೊಳಿಸಿ ತೀರ್ಪು ನೀಡಿದೆ.
Exit mobile version