ಶೇಕಡಾ 90 ರಷ್ಟು ಟ್ವಿಟರ್ ಇಂಡಿಯಾ ಉದ್ಯೋಗಿಗಳನ್ನು ವಜಾಗೊಳಿಸಿದ ಎಲೋನ್ ಮಸ್ಕ್!  

Delhi : ಬಿಲಿಯನೇರ್ ಎಲೋನ್ ಮಸ್ಕ್ ಟ್ವಿಟ್ಟರ್ (Musk Sacked Indian Employees) ಅನ್ನು ವಹಿಸಿಕೊಂಡಾಗಿನಿಂದ ಅವರು ಉದ್ಯೋಗಿಗಳ ವಜಾ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಭಾರತ ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ಟ್ವಿಟರ್ ಅಪ್ಲಿಕೇಶನ್ ತುಂಬಾ ನಿಧಾನವಾಗಿದೆ ಎಂದು ಮಸ್ಕ್ ಹೇಳಿದ್ದಾರೆ.

ಹೀಗಾಗಿ ಈ ದೇಶಗಳಲ್ಲಿನ ಉದ್ಯೋಗಿಗಳ ಕಡಿತಕ್ಕೂ ಎಲೋನ್ ಮಸ್ಕ್ ಮುಂದಾಗಿದ್ದಾರೆ. ಅದರ ಭಾಗವಾಗಿ ಶೇಕಡಾ 90ರಷ್ಟು  ಟ್ವಿಟರ್ ಇಂಡಿಯಾ ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ ಎನ್ನಲಾಗಿದೆ.

ಇತರರಿಗೆ ಹೋಲಿಸಿದರೆ ಕೆಲವು ಪ್ರದೇಶಗಳಲ್ಲಿ ಟ್ವಿಟರ್ ಅಪ್ಲಿಕೇಶನ್ ನಿಧಾನ (Musk Sacked Indian Employees) ಎಂದು ಮಸ್ಕ್ ಬಳಕೆದಾರರಿಗೆ ಕ್ಷಮೆಯಾಚಿಸಿದರು.

https://vijayatimes.com/facts-about-shraddha-murder/

ಹಲವು ದೇಶಗಳಲ್ಲಿ ಟ್ವಿಟರ್ ತುಂಬಾ ನಿಧಾನವಾಗಿದ್ದಕ್ಕಾಗಿ ನಾನು ಕ್ಷಮೆಯಾಚಿಸಲು ಬಯಸುತ್ತೇನೆ. ಹೋಮ್ ಟೈಮ್‌ಲೈನ್ ಅನ್ನು ರೆಂಡರ್ ಮಾಡಲು ಅಪ್ಲಿಕೇಶನ್ 1000 ಕಳಪೆ  ಆರ್‌ಪಿಸಿಗಳನ್ನು ಮಾಡುತ್ತಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಇನ್ನು ಕೆಲವು ಟ್ವಿಟರ್ ಉದ್ಯೋಗಿಗಳು ಮಸ್ಕ್‌ನ ಮೌಲ್ಯಮಾಪನವು ತಪ್ಪಾಗಿದೆ.

https://youtu.be/-vaB267p8Tc COVER STORY PROMO | ಪೆಟ್ರೋಲ್‌ ಕಳ್ಳರು!

ಎಲೋನ್‌ ಮಸ್ಕ್‌ ಟೀಕೆ ಅಥವಾ ಸಲಹೆಗಳನ್ನು ತೆಗೆದುಕೊಳ್ಳುವ ಮನಸ್ಥಿತಿಯಲ್ಲಿಲ್ಲ ಎಂದು ತೋರುತ್ತದೆ. ಟ್ವಿಟರ್‌ನಲ್ಲಿ ಮಸ್ಕ್ ವಿರುದ್ಧ ಮಾತನಾಡುವ ಎಂಜಿನಿಯರ್‌ಗಳನ್ನು ವಜಾಗೊಳಿಸಿದ್ದಾರೆ. ಆಂತರಿಕ ಸ್ಲಾಕ್ ಗುಂಪುಗಳಲ್ಲಿ ತನ್ನ ವಿರುದ್ಧ ಮಾತನಾಡಿದ ಕೆಲವು ಉದ್ಯೋಗಿಗಳನ್ನು ಇತ್ತೀಚೆಗೆ ಮಸ್ಕ್ ವಜಾ ಮಾಡಿದ್ದರು.

ಇನ್ನು ಮಸ್ಕ್ ಪ್ರಕಾರ, ಟ್ವಿಟರ್ ಅಪ್ಲಿಕೇಶನ್ ಭಾರತ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.

ಯುಎಸ್‌ನಲ್ಲಿ ಟ್ವಿಟರ್ ಸುಮಾರು 2 ಸೆಕೆಂಡುಗಳಲ್ಲಿ ರಿಫ್ರೆಶ್ ಆಗುತ್ತದೆ. ಆದರೆ ಭಾರತ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಇದು ಸುಮಾರು 10 ರಿಂದ 20 ಸೆಕೆಂಡುಗಳನ್ನು ತೆಗೆದುಕೊಳ್ಳಬಹುದು.

ಇನ್ನು ಟ್ವಿಟರ್ ರಿಫ್ರೆಶ್ ಮಾಡಲು 30 ಸೆಕೆಂಡುಗಳನ್ನು ತೆಗೆದುಕೊಳ್ಳುವ ಪ್ರಪಂಚದ ಕೆಲವು ಭಾಗಗಳಿವೆ ಎಂದು ಮಸ್ಕ್ ಎಂಜಿನಿಯರ್‌ಗಳ ಕಾರ್ಯವೈಖರಿಯ ಕುರಿತು ಅಸಮಾಧಾನ ಹೊರಹಾಕಿದ್ದಾರೆ.
Exit mobile version