ಬೇಸಿಗೆಯಲ್ಲಿ ಕೂಲ್ ಆಗಿರಲು ಕರ್ಬೂಜದ ಹಣ್ಣು ತಿನ್ನಿ!

Health Benefits of Muskmelon: ಬಿರುಬೇಸಿಗೆಯಿಂದ ಹೇಗಪ್ಪಾ ಪಾರಾಗೋದು ಅಂತ ಯೋಚಿಸಿದ್ದೀರಾ? ದೇಹ ಮಾತ್ರವಲ್ಲ ಹೊಟ್ಟೆ ಸಹ ಬಿಸಿಲಿನ ಬೇಗೆಗೆ ಸುಡುವಂತೆ ಅನಿಸುತ್ತಿದೆಯೇ? ಹಾಗಿದ್ದರೆ ಬೇಸಿಗೆಯಲ್ಲಿ ಸಿಗುವ ಈ ಹಣ್ಣಿನ ಸೇವನೆ ಮಾಡೋದು ಬೆಸ್ಟ್. ದೇಹವನ್ನು ತಂಪಾಗಿರಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ಹಣ್ಣುಗಳು ಲಭ್ಯವಿದ್ದು, ಅದರಲ್ಲಿ ಈ ಕರಬೂಜ ಹಣ್ಣು (Muskmelon) ಕೂಡ ಒಂದು. ನಮ್ಮಲ್ಲಿ ಹೆಚ್ಚಿನವರಿಗೆ ಈ ಹಣ್ಣಿನ ಬಗ್ಗೆ ಅದರ ಉಪಯೋಗದ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ.

ಕರಬೂಜ ಹಣ್ಣಿನಲ್ಲಿ ಪೋಷಕಾಂಶಗಳು ಮಾತ್ರವಲ್ಲದೆ ಅನೇಕ ವಿಟಮಿನ್ಗಳು, ಖನಿಜಗಳು, ಆಂಟಿಆಕ್ಸಿಡೆಂಟ್ಗಳು (Vitamins, Minerals, Antioxidants) ಕಂಡುಬರುತ್ತವೆ, ಇದು ದೇಹವನ್ನು ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತದೆ. ಇನ್ನು ಇದರಲ್ಲಿರುವ ವಿಟಮಿನ್ ಸಿ (Vitamin C) ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಈ ಹಣ್ಣಿನಲ್ಲಿ ಆಕ್ಸಿಟೋಸಿನ್ ಸಮೃದ್ಧವಾಗಿದೆ.

ಆದ್ದರಿಂದ ಮೂತ್ರಪಿಂಡದ ಕಲ್ಲುಗಳು ಉಂಟಾಗುವುದನ್ನು ತಪ್ಪಿಸಿ ಸುಲಭವಾಗಿ ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ. ಇದು ಮೂತ್ರಪಿಂಡಗಳಿಗೆ ಬಲವನ್ನು ಹೆಚ್ಚಿಸುವ ಹಣ್ಣಾಗಿದೆ. ಸೌತೆಕಾಯಿ, ಕಲ್ಲಂಗಡಿ, ಕುಂಬಳಕಾಯಿ ಜಾತಿಗೆ ಸೇರಿದ ಈ ಹಣ್ಣನ್ನು ಕೆಲ ದೇಶಗಳ ಕಡೆ ತರಕಾರಿ ಗುಂಪಿಗೆ ಸೇರಿಸುತ್ತಾರೆ. ಮೊದಲು ಪರ್ಷಿಯಾ ದೇಶದಲ್ಲಿ ರೈತರ ಜೀವನೋಪಾಯಕ್ಕೆ ಎಂದು ಬೆಳೆದ ಈ ಹಣ್ಣುಗಳು ನಂತರ ಕ್ರಮೇಣವಾಗಿ ಬ್ರೆಜಿಲ್, ಅಮೇರಿಕಾ (America) ದೇಶಗಳಿಗೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡವು.

ಈಗ ನಮ್ಮ ಭಾರತದಲ್ಲೇ ಪಂಜಾಬ್ ಪ್ರಾಂತ್ಯದಲ್ಲಿ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ (Tamilnadu, Maharashtra, Uttara Pradesh) ಮತ್ತು ಆಂಧ್ರ ಪ್ರದೇಶಗಳಲ್ಲಿ ಹೆಚ್ಚಾಗಿ ಈ ಹಣ್ಣುಗಳನ್ನು ಬೆಳೆಯುತ್ತಾರೆ ಮತ್ತು ಬೇಸಿಗೆಗಾಲದಲ್ಲಿ ದೇಹ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಲು ಸೇವಿಸುತ್ತಾರೆ. ಹಾಗಾಗಿ ಈ ಬೇಸಿಗೆ ಸಮಯದಲ್ಲಿ ಕರಬೂಜದ ಹಣ್ಣಿನ ಸೇವಿಸಿ. ನಿಮ್ಮ ದೇಹಕ್ಕೆ ಆಗುವ ಆರೋಗ್ಯ ಚಮತ್ಕಾರಗಳನ್ನು ನೀವೇ ನೋಡಿ.

Exit mobile version