ನಾಡಹಬ್ಬ ದಸರಾ ಉದ್ಘಾಟನೆಗೆ ಕ್ಷಣಗಣನೆ : ಇಲ್ಲಿದೆ ಕರ‍್ಯಕ್ರಮಗಳ ಸಂಪೂರ್ಣ ವಿವರ

dussera

Mysore: ವಿಶ್ವಪ್ರಸಿದ್ದ ಮೈಸೂರು ದಸರಾ (Mysore Dussera 2022) ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಇಂದು ಮೈಸೂರು ದಸರಾಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

Mysore Dussera 2022

ಈ ಐತಿಹಾಸಿಕ (Mysore Dussehra 2022) ಕ್ಷಣಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ನಡೆಯಲಿರುವ ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ.

• ಬೆಳಗ್ಗೆ 9 ಗಂಟೆಗೆ ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣದದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ (Bommai)

ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸ್ವಾಗತ ಕೋರಲಿದ್ದಾರೆ.

ಅಲ್ಲಿಂದ ರಾಷ್ಟ್ರಪತಿ ಜೊತೆ ಚಾಮುಂಡಿ ಬೆಟ್ಟಕ್ಕೆ ತೆರಳಲಿದ್ದಾರೆ.

https://vijayatimes.com/health-tips-for-hair-dandruff/

ಚಾಮುಂಡಿ ಬೆಟ್ಟದಲ್ಲಿ (Chamundi temple) ಬೆಳಿಗ್ಗೆ 9 ಗಂಟೆ 45 ನಿಮಿಷದಿಂದ 10 ಗಂಟೆ 5 ನಿಮಿಷದೊಳಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ದೇವಿಗೆ ಪುಷ್ಪರ‍್ಚನೆ ಮಾಡುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆ ನೀಡಲಾಗುತ್ತದೆ.

• ದಸರಾ ಆರಂಭದ ಮೊದಲ ದಿನ (First Day) ಚಾಮುಂಡೇಶ್ವರಿ ತಾಯಿಗೆ ಬ್ರಾಹ್ಮಿ ಅಲಂಕಾರ ಮಾಡಿ ವಜ್ರಾಭರಣಗಳಿಂದ ಸಿಂಗರಿಸಲಾಗುತ್ತದೆ.

Mysore Dussera

• ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಡದೇವತೆ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದು ಅಗ್ರಪೂಜೆ ಸಲ್ಲಿಸುತ್ತಾರೆ. ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್,

ಸಿ ಎಂ ಬೊಮ್ಮಾಯಿ (Chief Minister)ಸೇರಿದಂತೆ ಹಲವು ಗಣ್ಯರು ಹಾಜರಿರಲಿದ್ದಾರೆ.

• ಬಳಿಕ ಬುಡಕಟ್ಟು (tribe) ಜನರೊಂದಿಗೆ ರಾಷ್ಟ್ರಪತಿಗಳಿಂದ ಫೋಟೊ (Photo) ಸೆಷನ್ ನಡೆಯಲಿದೆ. ಹುಣಸೂರು ಹಾಗೂ ಎಚ್.ಡಿ ಕೋಟೆಯ ಆಯ್ದ 14 ಜನರೊಂದಿಗೆ ಫೋಟೊ ಸೆಷನ್ ನಡೆಯಲಿದೆ.

https://vijayatimes.com/music-heals-mental-stress/

• ಇಂದು ದಸರಾ ಆಹಾರ ಮೇಳ, (Food Camp) ರೈತ ದಸರಾ, ದಸರಾ ಮ್ಯಾರಥಾನ್, ಯುವ ದಸರಾ, ದಸರಾ ಕ್ರೀಡಾಕೂಡ, ದಸರಾ ಚಲನಚಿತ್ರೋತ್ಸವ, ದಸರಾ ಕುಸ್ತಿ, ಉದ್ಘಾಟನೆಗೊಳ್ಳಲಿದೆ.

ಅರಮನೆಯಲ್ಲಿ (Palace) ಬೆಳಗ್ಗೆ 6.15ಕ್ಕೆ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಗುತ್ತೆ. ಬೆಳಗ್ಗೆ 9.45ಕ್ಕೆ ಯದುವೀರ ಒಡೆರ‍್ಗೆ ಕಂಕಣಧಾರಣೆ.

10.45ಕ್ಕೆ ಅರಮನೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಆಗಮಿಸುತ್ತೆ. 11.15ಕ್ಕೆ ಸಿಂಹಾರೋಹಣ ಪೂಜಾ ಕಾರ್ಯ, ಕಳಸ ಪೂಜೆ ನಡೆಯುತ್ತವೆ.

• ರಾಜವಂಶಸ್ಥ ಯದುವೀರ್ ಒಡೆಯರ್‌ಅವರು ರ‍್ಬಾರ್ ಹಾಲ್ನಲ್ಲಿ ಬೆಳಿಗ್ಗೆ 11 ಗಂಟೆಗೆ ಖಾಸಗಿ ರ‍್ಬಾರ್ ನಡೆಸಲಿದ್ದಾರೆ.

-ಮಹೇಶ್.ಪಿ.ಎಚ್

Exit mobile version