ಶ್ವಾಸಕೋಶ ಭಾಗಕ್ಕೆ ತೀವ್ರ ಪೆಟ್ಟು ; ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಮೈಸೂರಿನ ಕುಸ್ತಿಪಟು ನಿಖಿಲ್

Mysuru Kick boxer

ಮೈಸೂರಿನ(Mysuru) ಹೊಸಕೇರಿ ನಿವಾಸಿ ನಿಖಿಲ್(23) ಕಿಕ್ ಬಾಕ್ಸಿಂಗ್(Mysuru kickboxer nikil death) ಪಂದ್ಯದಲ್ಲಿ ಶ್ವಾಸಕೋಶ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಕಾರಣ ಇಂದು ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ(Bengaluru) ಆಯೋಜಿಸಲಾಗಿದ್ದ ಕಿಕ್ ಬಾಕ್ಸಿಂಗ್ ಪಂದ್ಯದಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಹೊಸಕೇರಿ ನಿವಾಸಿ ನಿಖಿಲ್(Mysuru kickboxer nikil death), ಬಹಳ ಪರಿಶ್ರಮದಿಂದ, ಸತತ ಪ್ರಯತ್ನಗಳಿಂದ ಪಂದ್ಯದಲ್ಲಿ ಭಾಗವಹಿಸಿದ್ದರು.

ಕಿಕ್ ಬಾಕ್ಸಿಂಗ್ ಪಂದ್ಯದಲ್ಲಿ ಭಾಗವಹಿಸಿದ ನಿಖಿಲ್, ಎದುರಾಳಿಯೊಡನೆ ಆಡುವಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ.

ನಿಖಿಲ್ ಶ್ವಾಸಕೋಶ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಕಾರಣ ಪಂದ್ಯದ ಮಧ್ಯೆ ಕುಸಿದು ಬಿದ್ದಿದ್ದಾರೆ. ಶೀಘ್ರವೇ ಅಂಪೈರ್ ಹಾಗೂ ಸ್ಥಳದಲ್ಲಿದ್ದ ಮೆಡಿಕಲ್ ಅಸಿಸ್ಟೆನ್ಸ್‍ನವರು ಗಮನಹರಿಸಿದ್ದಾರೆ.

https://vijayatimes.com/psuedo-belief-in-snake-nature/

ನಿಖಿಲ್ ಅವರನ್ನು ಬೆಂಗಳೂರಿನ ಮಣಿಪಾಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸಂಘಟಕರನ್ನು ದೂಷಿಸಿದ ನಿಖಿಲ್ ತಂದೆ : ಈ ದುರ್ಘಟನೆಯ ನಂತರ, ಅವರ ತಂದೆ ಕಾರ್ಯಕ್ರಮದಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯಗಳು ಲಭ್ಯವಿಲ್ಲ ಮತ್ತು ನನ್ನ ಮಗನ ಅಕಾಲಿಕ ಮರಣಕ್ಕೆ ಸಂಘಟಕರೇ ಕಾರಣ ಎಂದು ಆರೋಪಿಸಿದ್ದಾರೆ. 

ನಿಖಿಲ್ ತರಬೇತುದಾರ ವಿಕ್ರಂ ಮೈಸೂರು ನಾಗರಾಜ್ ಅವರು ಫೇಸ್‌ಬುಕ್‌ ಪುಟದಲ್ಲಿ ಈ ರೀತಿ ಬರೆದುಕೊಂಡಿದ್ದಾರೆ, “ಸ್ಥಳದಲ್ಲಿ ಆಂಬ್ಯುಲೆನ್ಸ್, ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿ ಮತ್ತು ಗುಣಮಟ್ಟದ ವೇದಿಕೆ ಇದ್ದಿದ್ದರೆ, ದುರಂತ ಸಂಭವಿಸಿದಾಗ ಅವರು ಆಸ್ಪತ್ರೆ ಕರೆದೊಯ್ದು ಸಮಯ ವ್ಯರ್ಥ ಮಾಡುವ ಅವಶ್ಯಕತೆ ಇರಲಿಲ್ಲ.

ನಾವು ನಿಖಿಲ್ ಅನ್ನು ಉಳಿಸಿಕೊಳ್ಳಬಹುದಿತ್ತು. ಕಾರ್ಯಕ್ರಮದ ಆಯೋಜಕರ ವಿರುದ್ಧ ಕುಟುಂಬ ಸದಸ್ಯರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಕೋಚ್ ತಿಳಿಸಿದ್ದಾರೆ.
Exit mobile version