PSD ಅಳವಡಿಸಿ ಜನರ ಪ್ರಾಣ ರಕ್ಷಿಸಿ ಎಂದು ಕೋರಿಕೆ ಸಲ್ಲಿಸಿದ ನಮ್ಮ ಮೆಟ್ರೋ ಪ್ರಯಾಣಿಕರು.

Bengaluru : ನಮ್ಮ ಮೆಟ್ರೋ (Namma Metro Update) ರೈಲು ಲಕ್ಷಾಂತರ ಜನರಿಗೆ ಪ್ರತಿನಿತ್ಯ ಸೇವೆ ಸಲ್ಲಿಸುತ್ತದೆ. ಇನ್ನು ಮೆಟ್ರೋ ಸಂಚಾರ ವಿದ್ಯುತ್‌ ಸಂಪರ್ಕದಿಂದಲೇ ನಡೆಯುತ್ತದೆ.

ಹೀಗಾಗಿ, ಮೆಟ್ರೋ ಹಳಿಗಳಲ್ಲಿ ಅಪಾಯಕಾರಿ ವಿದ್ಯುತ್ ತಂತಿಯ ಸಂಪರ್ಕ ಮಾಡಿದ್ದರಿಂದ ಯಾವುದೇ ಸಾರ್ವಜನಿಕರನ್ನು ಹಾಗೂ ಪ್ರಯಾಣಿಕರನ್ನು ಮೆಟ್ರೋ ಹಳಿಯ ಬಳಿ ಹೋಗಲು ಬಿಡುವುದಿಲ್ಲ.

ಅಪಾಯಕಾರಿ ವಿದ್ಯುತ್ ಸ್ಪರ್ಶದಿಂದ ಸಾವು ಸಂಭವಿಸುವ (Namma Metro Update) ಸಾಧ್ಯತೆಯೂ ಹೆಚ್ಚಾಗಿರುತ್ತದೆ.

ಇನ್ನು ಮೆಟ್ರೋ ಹಳಿಯ ಬಳಿಯೂ ಜನರು ಹೋಗದಂತೆ ತಡೆಯಲು ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿರುತ್ತದೆ. ಆದರೆ, ಅವರ ಕಣ್ತಪ್ಪಿಸಿ ಸಾವಿಗೆ ಶರಣಾಗುತ್ತಿರುವುದು ಖೇದಕರ

ಸಂಗತಿಯಾಗಿದೆ. ನಿನ್ನೆಯಷ್ಟೇ ನಮ್ಮ ಮೆಟ್ರೋ ಟ್ರ್ಯಾಕ್ (Metro Track) ಮೇಲೆ ಜಿಗಿದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ನಡೆದಿತ್ತು. ಈ ರೀತಿ ಮೆಟ್ರೋ ನಿಲ್ದಾಣದಲ್ಲಿ

ಆತ್ಮಹತ್ಯೆ ಮಾಡಿಕೊಂಡಿರುವುದು ಇದೇ ಮೊದಲ ಪ್ರಕರಣವಾದರೂ ಮೆಟ್ರೋ ಟ್ರ್ಯಾಕ್​ಗೆ ಪ್ರಯಾಣಿಕರು ಜಿಗಿದಿರುವ ಅನೇಕ ಘಟನೆಗಳು ನಡೆದಿವೆ.

ಕಳೆದ ಮೂರು ತಿಂಗಳಲ್ಲಿ ಇಂತಹ ಐದು ಘಟನೆಗಳು ನಡೆದಿವೆ.ಪ್ರಯಾಣಿಕರು ಪದೇ ಪದೇ ಮೆಟ್ರೋ ಟ್ರ್ಯಾಕ್​ಗೆ ಜಿಗಿಯುತ್ತಿರುವುದರಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇದರಿಂದಾಗಿ

ಪ್ರಯಾಣಿಕರು ಪರದಾಡುವಂತಾಗುತ್ತದೆ. ಸೆಕ್ಯುರಿಟಿಗಳ ನಿರ್ಲಕ್ಷ್ಯದಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಈಗಾಗಲೇ ದೆಹಲಿ, ಚೆನ್ನೈ (Delhi, Chennai) ಮೆಟ್ರೋದಲ್ಲಿ PSD ಡೋರ್ ಅಳವಡಿಸಲಾಗಿದೆ. ಆದರೆ ನಮ್ಮ ಮೆಟ್ರೋದಲ್ಲಿ ಮಾತ್ರ ಇನ್ನೂ ಪಿಎಸ್​ಡಿ (Platform Screen Doors ) ಅಳವಡಿಸಿಲ್ಲ.

ಪಿಎಸ್​ಡಿ ಅಳವಡಿಸುವುದರಿಂದ ಟ್ರ್ಯಾಕ್​ಗೆ ಪ್ರಯಾಣಿಕರು ಜಿಗಿಯುವ ಪ್ರಕರಣಗಳು ತಪ್ಪುತ್ತವೆ. ಮೆಟ್ರೋ ರೈಲು ನಿಲ್ದಾಣಕ್ಕೆ ಬಂದಾಗ ಮಾತ್ರ ಈ ಪಿಎಸ್​ಡಿ ಡೋರ್​ಗಳು ಓಪನ್ ಆಗುತ್ತವೆ. ಮೆಟ್ರೋ

ಆರಂಭವಾಗಿ ಹದಿಮೂರು ವರ್ಷಗಳು ಕಳೆದಿವೆ. ಆದರೂ ಪ್ರಯಾಣಿಕರು ಟ್ರ್ಯಾಕ್​ಗೆ ಇಳಿಯದಂತೆ ನೋಡಿಕೊಳ್ಳಲು ಟ್ರ್ಯಾಕ್​ಗೆ ಇದುವರೆಗೆ ಯಾವುದೇ ಭದ್ರತೆ ಕಲ್ಪಿಸಿಲ್ಲ. ಮುಂದಿನ ದಿನಗಳಲ್ಲಾದರೂ

PSD Doors ಅಳವಡಿಸಲು ಕೋರಿಕೆ ಸಲ್ಲಿಸಲಾಗಿದೆ.

Exit mobile version