ನಂದಿನಿ ಉತ್ಪನ್ನಗಳ ದರ ಏರಿಕೆ ಚಿಂತನೆಯಿಂದ ಹೊರರಾಜ್ಯಗಳಲ್ಲಿ ನಂದಿನಿಗೆ ಹೊಡೆತ ಬೀಳಲಿದೆ : ಬಿಜೆಪಿ ಆರೋಪ

ಬೆಂಗಳೂರು: ನಂದಿನಿ ಉತ್ಪನ್ನಗಳ ದರ ಏರಿಕೆಯ ಕೆಎಂಎಫ್‌ ಚಿಂತನೆಗೆ ಭಾರೀ ವಿರೋಧ ವ್ಯಕ್ತವಾಗಿದೆ. (Nandini products price hike) ಪ್ರತಿಪಕ್ಷ ಬಿಜೆಪಿಯಂತು ಕಾಂಗ್ರೆಸ್‌ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದೆ.

ಪರಂಪರೆ, ಇತಿಹಾಸ ಇರುವ ಏನನ್ನೇ ಆದರೂ ವ್ಯವಸ್ಥಿತವಾಗಿ ನಾಶಪಡಿಸುವುದು ಕಾಂಗ್ರೆಸ್ ಸರ್ಕಾರದ ಅಸ್ತಿತ್ವವಾದ. ಆ ಸ್ವಾರ್ಥಕ್ಕೆ ದುರಾದೃಷ್ಟವಶಾತ್ ಬಲಿಯಾಗಬೇಕಾಗಿ ಬಂದಿರುವುದು ನಮ್ಮ ರಾಜ್ಯದ ಹೆಮ್ಮೆಯ

ನಂದಿನಿ. ತನಗೆ ಸುದ್ದಿಯ ಕೊರತೆಯಾದಾಗ ಅಮುಲ್ ವಿರುದ್ಧ ಎತ್ತಿಕಟ್ಟಿ ನಂದಿನಿ ಬ್ರ್ಯಾಂಡನ್ನು ಸಂಕುಚಿತಗೊಳಿಸಿತು. ಪರಿಣಾಮವಾಗಿ ಇಂದು ಹೊರ ರಾಜ್ಯಗಳಲ್ಲಿ ನಂದಿನಿ ಬ್ರ್ಯಾಂಡ್ಗೆ ಹೊಡೆತ ಬೀಳುತ್ತಿದೆ ಎಂದು

ರಾಜ್ಯ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ (Nandini products price hike,) ನಡೆಸಿದೆ.

ಇದನ್ನು ಓದಿ: ವಿಷದ ಬಾಟಲಿಯನ್ನು 6ನೇ ಗ್ಯಾರಂಟಿಯಾಗಿ ನೀಡಲು ಆಟೋ, ಟೆಂಪೋ ಚಾಲಕರ ಆಗ್ರಹ

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ನಿಮಗೆ ನಿಜಕ್ಕೂ ಹೈನುಗಾರರ ಮೇಲೆ ಕಾಳಜಿ ಇದ್ದರೆ ಪಶು ಆಹಾರವನ್ನು ಅಗ್ಗವಾಗಿ ಒದಗಿಸಿ, ಅಥವಾ ಹಾಲಿನ ಪ್ರೋತ್ಸಾಹ ಧನ ಹೆಚ್ಚಳ ಮಾಡಿ.

ಲಕ್ಷಾಂತರ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಹುನ್ನಾರವೇಕೆ? ಆದರೆ ನೀವು ಈಗಾಗಲೇ ನಿಮ್ಮ ಹೈಕಮಾಂಡ್ ಪಾಲಿನ ಎಟಿಎಂ ಸರ್ಕಾರ ಆಗಿ ಕೆಲಸ ಶುರು ಮಾಡಿರುವ ಕಾರಣ ಯಾರು ಏನೇ ಹೇಳಿದರೂ

ಅದು ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ. ಈಗಾಗಲೇ ನಂದಿನಿಯ ಬಗ್ಗೆ ಕೇರಳ ಅಪಸ್ವರ ಎತ್ತಿದೆ. ಇಡೀ ದೇಶದ ಬಗ್ಗೆಯೇ ಮಾತನಾಡುವ ಕೇರಳದ ವಯನಾಡು ಸಂಸದ ರಾಹುಲ್ ಗಾಂಧಿ ಈ ಬಗ್ಗೆ

ತುಟಿಪಿಟಿಕ್ ಎನ್ನುತ್ತಿಲ್ಲ ಯಾಕೆ? ಕೇರಳದ ಶಾಸಕರು ನಂದಿನಿಯ ಗುಣಮಟ್ಟವನ್ನೇ ಪ್ರಶ್ನಿಸುತ್ತಿರುವಾಗ ರಾಜ್ಯ ಸರ್ಕಾರವೇಕೆ ಆ ಬಗ್ಗೆ ಮೌನವಾಗಿದೆ ಸಿದ್ದರಾಮಯ್ಯರವರೇ? ಎಂದು ಪ್ರಶ್ನಿಸಿದೆ.

ಇನ್ನೊಂದು ಟ್ವೀಟ್ನಲ್ಲಿ, ಬಡ ವರ್ಗದವರು ದುಡಿಯುವ ಒಂದೊಂದೇ ಕ್ಷೇತ್ರವನ್ನು ಕಾಂಗ್ರೆಸ್ ಸರ್ಕಾರ ನಿರ್ನಾಮ ಮಾಡುತ್ತಿದೆ. ಇದರಿಂದಾಗಿ ರಾಜ್ಯದಲ್ಲೀಗ ಹೈನುಗಾರರು ಹೈರಾಣಾಗಿದ್ದಾರೆ, ನೇಕಾರರು ನಲುಗಿದ್ದಾರೆ,

ಚಾಲಕರು ಸೊರಗಿದ್ದಾರೆ. ಬಡ ರಿಕ್ಷಾ ಚಾಲಕರೊಬ್ಬರು ಹಸಿದ ಹೊಟ್ಟೆಯಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ. ಕೇಳುವ ವ್ಯವಧಾನ ತಮಗೆ ಇದೆಯೇ ಸಿದ್ದರಾಮಯ್ಯನವರೇ? ರಾಜ್ಯದಲ್ಲಿ ಕಾಂಗ್ರೆಸ್

ಸರ್ಕಾರದ ಗೊಂದಲದ ಗ್ಯಾರಂಟಿಗಳ ಪರಿಣಾಮವಾಗಿ ಬೆಲೆ ಏರಿಕೆಗೆ ಜನ ತತ್ತರಿಸಿದ್ದಾರೆ. ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಜನ ಬೇಸತ್ತು ಭುಗಿಲೇಳುವ ರೀತಿ ಮಾಡಿದ ಕೀರ್ತಿ

ಜನವಿರೋಧಿ ಎಟಿಎಂ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದು ಲೇವಡಿ ಮಾಡಿದೆ.

Exit mobile version