ಪಟಿಯಾಲ ಜೈಲಿನಲ್ಲಿ ಗುಮಾಸ್ತನಾಗಿ 90 ರೂ. ದಿನಗೂಲಿಗಾಗಿ ಕೆಲಸ ಮಾಡಬೇಕು ನವಜೋತ್ ಸಿಧು!

Navjot singh sidhu

1988ರ ರೋಡ್ ರೇಜ್(Road Raze) ಪ್ರಕರಣದಲ್ಲಿ ಶಿಕ್ಷೆಗೊಳಗಾದ ಪಂಜಾಬ್(Punjab) ಕಾಂಗ್ರೆಸ್(Congress) ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು(Navjoth Singh Sidhu) ಅವರು ಪಟಿಯಾಲ ಸೆಂಟ್ರಲ್ ಜೈಲಿನಲ್ಲಿ(Patiala Central Jail) ಗುಮಾಸ್ತರಾಗಿ(Clerk) ಕೆಲಸ ಮಾಡುತ್ತಿದ್ದಾರೆ.

ಸಿಧುಗೆ ಮೂರು ತಿಂಗಳ ಕಾಲ ತರಬೇತಿ(Training) ನೀಡಲಾಗುವುದು ಮತ್ತು ಸುದೀರ್ಘ ನ್ಯಾಯಾಲಯದ ತೀರ್ಪುಗಳನ್ನು ಸಂಕ್ಷಿಪ್ತಗೊಳಿಸುವುದು ಮತ್ತು ಜೈಲು ದಾಖಲೆಗಳನ್ನು ಹೇಗೆ ಸಂಗ್ರಹಿಸುವುದು ಎಂಬುದನ್ನು ಕಲಿಸಲಾಗುತ್ತದೆ. ಸಿಧು, ಜೈಲು ಕೈಪಿಡಿಯಂತೆ ಮೊದಲ 90 ದಿನಗಳವರೆಗೆ ಸಂಬಳ ಪಡೆಯುವುದಿಲ್ಲ. ಅವರ ತರಬೇತಿ ಮುಗಿದ ನಂತರ, ಅವರು ದಿನಕ್ಕೆ 40 ರಿಂದ 90 ರೂಪಾಯಿಗಳವರೆಗೆ ಕೂಲಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.

ಅವರ ಕೌಶಲ್ಯದ ಆಧಾರದ ಮೇಲೆ ಅವರ ವೇತನವನ್ನು ನಿರ್ಧರಿಸಲಾಗುತ್ತದೆ ಮತ್ತು ಗಳಿಕೆಯನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ನವಜೋತ್ ಸಿಧು ಅವರ ಜೈಲು ಅಧಿಕಾರಿಯ ಮಾಹಿತಿ ಅನುಸಾರ, ಉನ್ನತ ಮಟ್ಟದ ಕೈದಿಯಾಗಿರುವುದರಿಂದ ಬ್ಯಾರಕ್‌ನಿಂದಲೇ ಕೆಲಸ ಮಾಡುತ್ತಾರೆ. ಜೈಲಿನ ಕಡತಗಳನ್ನು ಬ್ಯಾರಕ್‌ನಲ್ಲಿ ಅವರಿಗೆ ಕಳುಹಿಸಲಾಗುವುದು, ಏಕೆಂದರೆ ಅವರನ್ನು ತನ್ನ ಸೆಲ್‌ನಿಂದ ಹೊರಗೆ ಕದಲಲು ಬಿಡುವುದಿಲ್ಲ.

ಸಿಧು ಮಂಗಳವಾರ ಗುಮಾಸ್ತನಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಎರಡು ವೇಳೆಯಲ್ಲಿ ಕೆಲಸ ಮಾಡುತ್ತಾರೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ ಮತ್ತು 3 ರಿಂದ ಸಂಜೆ 5 ರವರೆಗೆ. ಈ ಮಧ್ಯೆ ಸಿದ್ದು ಇರುವ ಬ್ಯಾರಕ್‌ನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಐವರು ವಾರ್ಡನ್‌ಗಳು ಮತ್ತು ನಾಲ್ವರು ಜೈಲು ಕೈದಿಗಳಿಗೂ ಸಿಧು ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ. 1988 ರ ರೋಡ್ ರೇಜ್ ಪ್ರಕರಣದಲ್ಲಿ ಕ್ರಿಕೆಟಿಗ, ರಾಜಕಾರಣಿಗೆ ಮೇ 19 ರಂದು ಸುಪ್ರೀಂ ಕೋರ್ಟ್ ಒಂದು ವರ್ಷದ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿತು. ಅವರು ಮೇ 20 ರಂದು ಪಟಿಯಾಲದ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾದರು.

ಈ ನಡುವೆ ಸ್ಥೂಲಕಾಯತೆ ಮತ್ತು ಚಯಾಪಚಯ ಅಸ್ವಸ್ಥತೆಯಿಂದ ಬಳಲುತ್ತಿರುವ ನವಜೋತ್ ಸಿಂಗ್ ಸಿಧುಗಾಗಿ ವೈದ್ಯಕೀಯ ಮಂಡಳಿಯು ಡಯಟ್ ಚಾರ್ಟ್ ಅನ್ನು ತಯಾರಿಸಿದೆ. ಡಯಟ್ ಚಾರ್ಟ್ ಇನ್ನೂ ಜೈಲಿಗೆ ತಲುಪಿಲ್ಲ. ಸದ್ಯ ಮೊದಲ ದಿನದ ಅವಧಿಯಲ್ಲಿ, ಸಿಧು ಪರ ವಕೀಲ, ಸಿಧು ಅವರಿಗೆ ಸಲಾಡ್ ಮತ್ತು ಹಣ್ಣಿನ ಆಹಾರದಿಂದ ಬದುಕುತ್ತಿದ್ದಾರೆ.

ಅವರಿಗೆ ಗೋಧಿ ಅಲರ್ಜಿ ಯಾಕಂದರೆ ಸಕ್ಕರೆ ಖಾಯಿಲೆ ಇರುವುದಿಂದ ದಾಲ್ ರೋಟಿ ತಿನ್ನಲು ನಿರಾಕರಿಸದರು. ಹೀಗಾಗಿ ಮೊದಲ ದಿನದಲ್ಲಿ ಅವರು ಊಟವೇ ಮಾಡಿಲ್ಲ ಎಂದು ಹೇಳಿದರು.

Exit mobile version