ಅನಾರೋಗ್ಯದ ಕಾರಣ ಒಂದಿಷ್ಟು ಸಮಯದ ಬಳಿಕ ಶರಣಾಗುವೆ : ನವಜೋತ್ ಸಿಧು!

Navjot singh sidhu

ಹೊಸದಿಲ್ಲಿ: 1988ರ ರಸ್ತೆ ಅಪಘಾತದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ಕೊಂದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್(Supreme Court) ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಒಂದು ದಿನದ ನಂತರವೇ, ಕಾಂಗ್ರೆಸ್ ನಾಯಕ(Congress Leader) ನವಜೋತ್ ಸಿಂಗ್ ಸಿಧು(Navjot Singh Sidhu) ವೈದ್ಯಕೀಯ ಕಾರಣಗಳಿಗಾಗಿ ಜೈಲುವಾಸಕ್ಕೆ ತೆರಳಲು ಇನ್ನೂ ಕೆಲವು ವಾರಗಳ ಕಾಲಾವಕಾಶ ಕೋರಿದ್ದಾರೆ.


ಸುಪ್ರೀಂ ಕೋರ್ಟ್‌ನಲ್ಲಿ ನವಜೋತ್ ಸಿಧು ಪರ ಹಾಜರಾದ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರನ್ನು ಸಂಪರ್ಕಿಸಲು ಹೇಳಿದರು. ನವಜೋತ್ ಸಿಧು ನಿನ್ನೆ ಕಾನೂನಿನ ಗಾಂಭೀರ್ಯಕ್ಕೆ ಶರಣಾಗುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಆದ್ರೆ, ಇಂದು ಬೆಳಗ್ಗೆ ಅವರು ಪಂಜಾಬ್‌ನ ಪಟಿಯಾಲದ ನ್ಯಾಯಾಲಯದಲ್ಲಿ ಶರಣಾಗಲಿದ್ದಾರೆ ಎಂದು ವರದಿಗಳು ಸೂಚಿಸಿವೆ.

ಇತ್ತೀಚೆಗಷ್ಟೇ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಕ್ರಿಕೆಟಿಗ,ರಾಜಕಾರಣಿ ನವಜೋತ್ ಸಿಧುಗೆ ಸದ್ಯ ಗುರುವಾರ ಸುಪ್ರೀಂ ಕೋರ್ಟ್ ಒಂದು ವರ್ಷದ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ. ಈ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಮತ್ತು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿದೆ.

Exit mobile version