ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಖಂಡಿಸಿ ಸದ್ಭಾವ ವೇದಿಕೆಯಿಂದ ಬೃಹತ್​ ಪಂಜಿನ ಮೆರವಣಿಗೆ

Hubballi: ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆ (Neha Hiremath Murder Case) ತನಿಖೆ ನಡೆಸುತ್ತಿದ್ದು, ಆರೋಪಿ ಫಯಾಜ್​ನನ್ನು

ವಶಕ್ಕೆ ಪಡೆದುಕೊಂಡಿದೆ. ಈ ಮಧ್ಯೆ ಹುಬ್ಬಳ್ಳಿಯ ಸದ್ಭಾವ ವೇದಿಕೆ ನೇಹಾ ಹತ್ಯೆ ಖಂಡಿಸಿ ನಾಳೆ (ಏ.27) ರಂದು ನಗರದಲ್ಲಿ ಮೌನವಾಗಿ ಪಂಜಿನ ಮೆರವಣಿಗೆ ಮಾಡಲು ನಿರ್ಧರಿಸಿದೆ.

ಹುಬ್ಬಳ್ಳಿಯ (Hubballi) ಬಿವಿಬಿ ಕಾಲೇಜು ಆವರಣದಲ್ಲಿ (ಏ.18) ರಂದು ಮಧ್ಯಾಹ್ನ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ, ವಿದ್ಯಾರ್ಥಿನಿ ನೇಹಾ

ಕೊಲೆಯಾಗಿತ್ತು. ಕರಣದ ತನಿಖೆಯನ್ನು ರಾಜ್ಯ ಸರ್ಕಾರ ಅಪರಾಧ ತನಿಖಾ ಇಲಾಖೆಗೆ ನೀಡಿದೆ. ಈ ಮಧ್ಯೆ ಹುಬ್ಬಳ್ಳಿಯ ಸದ್ಭಾವ ವೇದಿಕೆಯಿಂದ ಬೃಹತ್ ಪಂಜಿನ ಮೆರವಣಿಗೆ ನಡೆಸಲು ನಿರ್ಧರಿಸಿದೆ.

ರಾಷ್ಟ್ರ ವಿರೋಧಿ ಹಾಗೂ ಜಿಹಾದಿ ಮಾನಸಿಕತೆ ವಿರೋಧಿಸಿ, ಅಮಾಯಕ ನೇಹಾ ಹಿರೇಮಠ ಬರ್ಬರ ಹತ್ಯೆ (Neha Hiremath Murder) ಖಂಡಿಸಿ ಹಾಗೂ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಮತ್ತು

ಸರ್ಕಾರದ ತುಷ್ಠೀಕರಣದ ನೀತಿಯನ್ನು ವಿರೋಧಿಸಿ ಬೃಹತ ಪ್ರತಿಭಟನಾ ಮೆರವಣಿಗೆಗೆ ಸದ್ಭಾವ ವೇದಿಕೆ ಕರೆ ನೀಡಿದೆ. “ಲವ್​ ಜಿಹಾದ್​ಗೆ ಬಲಿಯಾಗುತ್ತಿದ್ದಾರೆ ಮನೆಯ ಹೆಣ್ಣುಮಕ್ಕಳು ನಿನ್ನೆ ನೇಹಾ ನಾಳೆ ನಮ್ಮ

ಮಗಳು!” ಎಂಬ ಘೋಷ ವಾಕ್ಯದೊಂದಿಗೆ ಸದ್ಭಾವ ವೇದಿಕೆ ಮೌನಯುತವಾಗಿ ಪಂಜಿನ (Neha Hiremath Murder Case) ಮೆರವಣಿಗೆ ನಡೆಸಲಿದೆ.

ಈ ಬೃಹತ್​ ಪ್ರತಿಭಟನಾ ಮೆರವಣಿಗೆ ಕುರಿತಾಗಿ ಸದ್ಭವ ವೇದಿಕೆ ಸದಸ್ಯ, ಕಾರ್ಯಕ್ರಮ ಸಂಯೋಜಕ ಸುಭಾಷ್​ ಸಿಂಗ್ (Subhash Singh)​ ಜಮಾದಾರ ಮಾತನಾಡಿ, “ನೇಹಾ ಹತ್ಯೆ ಪ್ರಕರಣ ಮುನ್ನಲೆ

ಮಾಡಿಕೊಂಡು, ಇದುವರೆಗೆ ಲವ್​ ಜಿಹಾದ್​ಗೆ (Love Jihad) ಬಲಿಯಾದ ಹೆಣ್ಣಮಕ್ಕಳಿಗೆ ನ್ಯಾಯಕೊಡಿಸುವ ನಿಟ್ಟಿನಲ್ಲಿ, ರಾಜ್ಯದಲ್ಲಿ ನಡೆಯುತ್ತಿರುವ ಮುಸ್ಲಿಂ ದಬ್ಬಾಳಿಕೆ, ಸರ್ಕಾರದ ಮುಸ್ಲಿಂ ತುಷ್ಟಿಕರಣ

ಮತ್ತು ದೇಶ ವಿರೋಧಿ ಚಟುವಟಿಕೆಗಳನ್ನು ವಿರೋಧಿಸಿ ಪಂಜಿನ ಮೆರವಣಿಗೆ ಮಾಡುತ್ತಿದ್ದೇವೆ.

ಮೂರುಸಾವಿರ ಮಠದ ಮೈದಾನದಿಂದ ಮೆರವಣಿಗೆ ಆರಂಭವಾಗಿ ಮಹಾವೀರ ಓಣಿ – ತುಳಜಾ ಭವಾನಿ ವೃತ್ತ – ದಾಜಿಬಾನ್​ ಪೇಟೆ ಮುಖಾಂತರ ಕಿತ್ತೂರು ರಾಣಿ ಚೆನ್ನಮ್ಮ ವೃತ್ತಕ್ಕೆ (Kitturu Rani

Chennamma Circle) ಆಗಮಿಸಿ ಅಂತ್ಯಗೊಳ್ಳಲಿದೆ. ಅಲ್ಲದೆ ಹಿಂದೂ ಸಾಮಾಜದ ಒಗ್ಗಟ್ಟು ಮತ್ತು ಶಕ್ತಿ ಪ್ರದರ್ಶನಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಮೂಲಕ ಹಿಂದೂಗಳು

ಒಗ್ಗಟ್ಟಾಗಿದ್ದು, ಜಿಹಾದಿ ಮಾನಸಿಕತೆ ಇರುವವರಿಗೆ ದಿಟ್ಟ ಸಂದೇಶ ನೀಡಲಿದ್ದೇವೆ” ಎಂದು ಹೇಳಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​​ನ ಶಿವಾನಿ ಶೆಟ್ಟಿ (Shivani Shetty), ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಭಾಗ್ಯಶ್ರೀ ಬೆಳ್ಳೆ ಉಪಸ್ಥಿತಿ ಇರಲಿದ್ದಾರೆ. ಪ್ರತಿಭಟನಾ ಮೆರಣಿಗೆಗೂ ಮುನ್ನ

ಸಭೆ ನಡೆಯಲಿದೆ. ಸಭೆಯ ಸಾನಿಧ್ಯವನ್ನು ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗಿಂದ್ರ ಮಹಾ ಸ್ವಾಮಿಗಳು ವಹಿಸಲಿದ್ದಾರೆ. ವಾಗ್ಮಿ, ಯುವಾ ಬ್ರಿಗೇಡ್​ ಸ್ಥಾಪಕ ಚಕ್ರವರ್ತಿ ಸೂಲೆಬೆಲೆ (Chakravarthy

Sulibele) ಮುಖ್ಯ ಭಾಷಣ ಮಾಡಲಿದ್ದಾರೆ.

ಇದನ್ನು ಓದಿ: ಪ್ರಜ್ವಲ್ ರೇವಣ್ಣ ಕೇಸ್‌: ನಾಲ್ಕೈದು ವರ್ಷಗಳ ಕಥೆ ತಂದು ಈಗ ದೂರು ಕೊಟ್ರೆ ಏನರ್ಥ- ಹೆಚ್.ಡಿ ರೇವಣ್ಣ

Exit mobile version