Bengaluru: ಕರ್ನಾಟಕ (Karntaka) ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯ ಒತ್ತಡವನ್ನು ಕಡಿಮೆ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆ ಸುಮಾರು 800 ಹೊಸ ಬಸ್ಗಳು ಸೇರ್ಪಡೆ ಮಾಡಲು ಮುಂದಾಗಿದ್ದು, ಅಶ್ವಮೇಧ ಎಂಬ ಹೊಸ ಬಸ್ ಹೆಸರಿನೊಂದಿಗೆ KSRTC ಪರಿಚಯಿಸುತ್ತಿದೆ.

ಮುಖ್ಯಾಂಶಗಳು:
ಹೊಸ ಮಾದರಿಯ 54 ಸೀಟುಗಳಿರುವ ಅಶ್ವಮೇಧ ಬಸ್
ಮೊದಲ ಹಂತದಲ್ಲಿ ರಸ್ತೆಗಿಳಿಯಲಿರುವ 100 ಬಸ್ಗಳು
ಮೇ 24ರೊಳಗೆ 800 ಅಶ್ವಮೇಧ ಬಸ್ಗಳು ಓಡಾಟ
ಮೊದಲ ಹಂತದಲ್ಲಿ 100 ಅಶ್ವಮೇಧ (Ashvamedha) ಕ್ಲಾಸಿಕ್ ಬಸ್ಸುಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆಯನ್ನು ಇಂದು(ಫೆ.೦5) ನೀಡುತ್ತಿದ್ದು, ನವೀನ ಮಾದರಿಯ ೫೪ ಆಸನದ ಬಸ್ ಇದಾಗಿದೆ. ಪ್ರಯಾಣದ ಮರುಕಲ್ಪನೆ ಎಂಬ ಘೋಷವಾಕ್ಯದೊಂದಿಗೆ ನೂತನ ಬಸ್ ಸಂಚರಿಸಲಿದೆ. ವಿಧಾನಸೌಧದ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯನವರು (Siddaramaiah) ಗ್ರೀನ್ ಸಿಗ್ನಲ್ ನೀಡಲಿದ್ದಾರೆ.

ಅಶ್ವಮೇಧ ಬಸ್ಗಳ ವಿಶೇಷತೆ:
•ಕಿಟಕಿ ಪ್ರೇಮ್ ಹಾಗೂ ಗಾಜು ದೊಡ್ಡಾಗಿದ್ದು, ಟಿಂಟೆಡ್ ಗಾಜುಗಳು
•ಬಸ್ನಲ್ಲಿ ಸ್ಥಳ ಟ್ರ್ಯಾಕರ್, ಪ್ಯಾನಿಕ್ ಬಟನ್ (Tractor, Panic Button) ಹಾಗೂ ಬಸ್ ಒಳಗಿನ ಮುಂಭಾಗದಲ್ಲಿ ಎಲ್ಇಡಿ ಫಲಕ
•ಪಾಯಿಂಟು ಟು ಪಾಯಿಂಟ್ ಎಕ್ಸಪ್ರೆಸ್ ಅಶ್ವಮೇಧ ಬಸ್ಗಳು 3.42 ಮೀಟರ್ ಎತ್ತರ
•ಈ ಬಸ್ನಲ್ಲಿ 52 ಆಸನಗಳಿದ್ದು, ಬಕೆಟ್ ಟೈಪ್ ವಿನ್ಯಾಸ
•ಪ್ರಯಾಣದ ಮರು ಕಲ್ಪನೆ’ ಎಂಬ ವಾಕ್ಯದೊಂದಿಗೆ ಈ ಬಸ್ಗಳನ್ನು ಪರಿಚಯ
•ಈ ಬಸ್ಗಳ ಮುಂದಿನ ಮತ್ತು ಹಿಂದಿನ ಗಾಜುಗಳು ವಿಶಾಲ
•ಲಗೇಜ್ ಕ್ಯಾರಿಯರ್ಗಳನ್ನು ವಿನೂತನವಾಗಿ ವಿನ್ಯಾಸ ಮಾಡಲಾಗಿದೆ
ಇನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಕೆಎಸ್ಆರ್ಟಿಸಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ (S R Srinivas) ಅವರು ಮುಖ್ಯಮತ್ರಿ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಲಿದ್ದಾರೆ. ಮೇ-24ರೊಳಗೆ 800 ಅಶ್ವಮೇಧ ಬಸ್ಗಳು ಕೆ.ಎಸ್.ಆರ್.ಟಿ ಡಿಪೋ ಸೇರಲಿವೆ. ಅಂದ ಹಾಗೆಯೇ ಈ ಬಸ್ಗಳಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತ. ಬೇಡಿಕೆ ಇರೋ ಕಡೆ ನೂರು ಬಸ್ಗಳ ಕಾರ್ಯಾಚರಣೆ ನಡೆಸಲಿವೆ.
ಭವ್ಯಶ್ರೀ ಆರ್ ಜೆ