ಸುಪ್ರೀಂಕೋರ್ಟ್ ಕೈಪಿಡಿಯ ಮಾರ್ಗಸೂಚಿ ಬಿಡುಗಡೆ ಮಹಿಳೆಯರ ಬಗ್ಗೆ ಉಲ್ಲೇಖಿಸುವಾಗ ಮಾಡಬಾರದು ಹಾಗೂ ಮಾಡಬೇಕಾದ ಕುರಿತಾದ ಮಹತ್ವದ ಅಂಶಗಳು

Dehli: ದೇಶದ ನ್ಯಾಯಾಲಯಗಳ ನ್ಯಾಯಾಧೀಶರಿಗಾಗಿ ಸುಪ್ರೀಂಕೋರ್ಟ್ (new guidelines to women) ವಿಶಿಷ್ಟ ಕೈಪಿಡಿಯ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದ್ದು, ಇದರ

ತೀರ್ಪುಗಳಲ್ಲಿ ಮಹಿಳೆಯರ ಬಗ್ಗೆ ಉಲ್ಲೇಖಿಸುವಾಗ ಮಾಡಬಾರದು ಹಾಗೂ ಮಾಡಬೇಕಾದ ಅಂಶಗಳ ಕುರಿತು ಸಮಗ್ರ ವಿವರಣೆ ನೀಡಲಾಗಿದೆ. ಹಾಗೆಯೇ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ

ಸೂಕ್ಷ್ಮ ವಿಚಾರಗಳ ಬಗ್ಗೆ ವ್ಯಾಖ್ಯಾನಗಳನ್ನು (new guidelines to women) ನೀಡಲಾಗಿದೆ.

ಮಹಿಳೆಯರಿಗೆ ಕಾನೂನು ಪ್ರಕ್ರಿಯೆಗಳಲ್ಲಿ ಸಂಬಂಧಿಸಿದಂತೆ ಅಸಮರ್ಪಕ ಪದಗಳ ಬಳಕೆ ವಿಚಾರದಲ್ಲಿ ಸೂಕ್ಷ್ಮತೆ ಅನುಸರಿಸುವಂತೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗಾಗಿ ಕೈಪಿಡಿಯೊಂದನ್ನು

ಬಿಡುಗಡೆ ಮಾಡಿದ್ದು, ಕಲ್ಕತ್ತಾ ಹೈಕೋರ್ಟ್‌ನ (Kolkata Highcourt) ನ್ಯಾಯಮೂರ್ತಿ ಮೌಶುಮಿ ಭಟ್ಟಾಚಾರ್ಯ (Moushumi Bhattacharya) ನೇತೃತ್ವದ ಸಮಿತಿಯಲ್ಲಿ ಸಿದ್ಧಪಡಿಸಿರುವ

ಈ ಕೈಪಿಡಿ ಲಿಂಗ ಅಸಮಾನತೆಯ ದೃಷ್ಟಿಕೋನವನ್ನು ಉತ್ತೇಜಿಸುವ ಭಾಷೆಯನ್ನು ಗುರುತಿಸುವುದು ಮಾತ್ರವಲ್ಲದೆ ಅದಕ್ಕೆ ಪರ್ಯಾಯವಾಗಿ ಸೂಕ್ತ ಪದಗಳನ್ನು ನೀಡಿದ್ದು, ಲಿಂಗ ಆಧಾರಿತ ಮುಖ್ಯವಾಗಿ

ಮಹಿಳೆಯರ ಕುರಿತಾದ ದೃಷ್ಟಿಕೋನದ ಆಧಾರದಲ್ಲಿ ಸಾಮಾನ್ಯವಾದ ಆದರೆ ತಪ್ಪಾದ ತಾರ್ಕಿಕ ಆಯಾಮಗಳನ್ನು ನೀಡುವುದನ್ನು ತಡೆಯಲು ಮುಂದಾಗಿದೆ.

ಮಹಿಳೆಯರ ಗುಣ ಅಥವಾ ಅವರು ಧರಿಸುವ ಬಟ್ಟೆಗಳ ಆಧಾರದಲ್ಲಿ ಕಲ್ಪನೆ ಮಾಡುವುದು ಲೈಂಗಿಕ ಸಂಬಂಧಗಳಲ್ಲಿನ ಸಹಮತದ ಪ್ರಾಮುಖ್ಯತೆಯನ್ನು ಸಂಸ್ಥೆ ಹಾಗೂ ಮಹಿಳೆಯ ವ್ಯಕ್ತಿತ್ವವನ್ನು ಕುಂದಿಸುತ್ತದೆ

ಎಂದು ಕೈಪಿಡಿಯಲ್ಲಿ ತಿಳಿಸಿದೆ. ಸುಪ್ರೀಂಕೋರ್ಟ್ (Supreme Court) ಲಿಂಗ ಆಧಾರಿತ ಸಾಮಾನ್ಯ ದೃಷ್ಟಿಕೋನ ಹಾಗೂ ವಾಸ್ತವದ ಸುದೀರ್ಘ ಹೋಲಿಕೆಗಳನ್ನು ನೀಡಿದ್ದು, ಇದರಲ್ಲಿ ತೀರ್ಪಿನ ಮೇಲೆ ಪ್ರ

ಭಾವ ಬೀರುವ ಪೂರ್ವಗ್ರಹಗಳು, ಸಾಮಾಜಿಕ ನಿಲುವು, ನಂಬಿಕೆ ಮುಂತಾದವುಗಳು ಮತ್ತು ವಾಸ್ತವಿಕತೆ ನಡುವಿನ ವ್ಯತ್ಯಾಸಗಳನ್ನು ಸಂಪೂರ್ಣವಾಗಿ ವಿವರಿಸಿದೆ.

ಪ್ರಮುಖವಾಗಿ ಅತ್ಯಾಚಾರದ ಕುರಿತಾದ ವಿಷಯಗಳ ಬಗ್ಗೆ ಅದು ಸೂಕ್ಷ್ಮ ವ್ಯಾಖ್ಯಾನಗಳನ್ನು ಮಾಡಿದ್ದು, ಉದಾಹರಣೆಗೆ ಪುರುಷನಿಗೆ ಲೈಂಗಿಕ ಕಾರ್ಯಕರ್ತೆಯನ್ನು ಅತ್ಯಾಚಾರ ಮಾಡಲು ಸಾಧ್ಯವಿಲ್ಲ

ಎನ್ನುವುದು ಸಾಮಾನ್ಯ ದೃಷ್ಟಿಕೋನ. ಆದರೆ ವಾಸ್ತವವಾಗಿ ಲೈಂಗಿಕ ಕಾರ್ಯಕರ್ತೆ ಮೇಲೆ ಅತ್ಯಾಚಾರ ನಡೆಯುವ ಸಾಧ್ಯತೆಗಳಿದ್ದು, ಯಾವುದೇ ವ್ಯಕ್ತಿ ಜೊತೆ ತನ್ನ ಕೆಲಸದ ಕಾರಣದಿಂದಾಗಿ ಲೈಂಗಿಕ ಸಂಬಂಧ

ಹೊಂದಬೇಕು ಎಂಬ ನಿಲುವನ್ನು ಲೈಂಗಿಕ ಕಾರ್ಯಕರ್ತೆ ತಳ್ಳಿ ಹಾಕಿದಾಗ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದರೆ ಅದು ಅತ್ಯಾಚಾರವಾಗುತ್ತದೆ.

ಪುರುಷನು ಆಕೆಗೆ ಹಣ ಕೊಡಲು ನಿರಾಕರಿಸಿದಾಗಲೂ ಅತ್ಯಾಚಾರವೆನಿಸಿಕೊಳ್ಳುತ್ತದೆ. ದೈಹಿಕವಾಗಿ ಅಂಗವಿಕಲರಾಗಿರುವ ಮಹಿಳೆಯ ಜೊತೆ ಎಲ್ಲಾ ರೀತಿ ದೈಹಿಕವಾಗಿ ಆರೋಗ್ಯವಂತನಾಗಿರುವ ವ್ಯಕ್ತಿ ಲೈಂಗಿಕ

ಸಂಪರ್ಕ ಹೊಂದಿರಲು ಸಾಧ್ಯವಿಲ್ಲ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರದ ಆರೋಪ ಮಾಡಿದರೆ ಅದು ಸಿಂಧುವಾಗುವುದಿಲ್ಲಅನ್ನುವುದು ಸಾಮಾನ್ಯ ಕಲ್ಪನೆಯಾಗಿದ್ದು, ದೈಹಿಕ

ಅಸಮರ್ಥ ಮಹಿಳೆಯರ ಮೇಲೆಯೂ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ನಡೆಯಬಹುದು. ಅಂಗವಿಕಲತೆಯು ಲೈಂಗಿಕ ಹಿಂಸಾಚಾರ ಸಾಧ್ಯತೆ ತಗ್ಗಿಸುತ್ತದೆ ಎನ್ನುವುದು ತಪ್ಪು ಎಂದು ಹೇಳಿದೆ.

ಅಲ್ಲದೆ ಅತ್ಯಾಚಾರವು ಸಂತ್ರಸ್ತೆಯ ಹಾಗೂ ಅವಳ ಕುಟುಂಬದ ಗೌರವವನ್ನು ಹಾಳುಮಾಡುವುದಲ್ಲದೆ. ಅತ್ಯಾಚಾರಿಯು ಸಂತ್ರಸ್ತೆಯನ್ನು ಮದುವೆಯಾದರೆ ಆಕೆಯ ಗೌರವ ಮರಳಿ ಹಿಂತಿರುಗುತ್ತದೆ ಎಂದು ಹೇಳುವ

ಅಭಿಪ್ರಾಯಗಳಿವೆ. ಆದರೆ ವಾಸ್ತವದಲ್ಲಿ ಅತ್ಯಾಚಾರವು ಸಂತ್ರಸ್ತೆ ಅಥವಾ ಆಕೆಯ ಕುಟುಂಬದ ಗೌರವವನ್ನು ಕುಂದಿಸುವುದಿಲ್ಲ. ಹಾಗೆಯೇ ಆಕೆಯನ್ನು ಅತ್ಯಾಚಾರಿ ಮದುವೆಯಾದರೂ ಗೌರವ ಮರುಕಳಿಸುವುದಿಲ್ಲ.

ಬದಲಾಗಿ ಅದು ಸಂತ್ರಸ್ತೆಗೆ ಆಗಿರುವ ನೋವನ್ನು ಇನ್ನು ಹೆಚ್ಚಿಸುತ್ತದೆ.

ಅತ್ಯಾಚಾರವು ಅಪರಾಧವಾಗಿದ್ದು, ಅತ್ಯಾಚಾರದ ಹಿಂಸೆಗೆ ಮದುವೆ ಪರಿಹಾರವಲ್ಲ. ಅದನ್ನು ಮದುವೆಯಿಂದ ನಿವಾರಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅತ್ಯಾಚಾರ ಆರೋಪಿಗೆ ಕೆಲವು ನ್ಯಾಯಾಲಯಗಳು

ಸಂತ್ರಸ್ತೆಯನ್ನು ಮದುವೆಯಾಗುವಂತೆ ಆದೇಶಿಸಿದ್ದನ್ನು ಇಲ್ಲಿ ಕಾಣಬಹುದು. ಇಂದಿನ ಯುವಜನತೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿದ್ದು, ಅವರು ಸಹಜ ಲೈಂಗಿಕ ಸಂಬಂಧಗಳನ್ನು ಹೊಂದುವುದು

ಲೈಂಗಿಕ ಹಿಂಸಾಚಾರ ಹಾಗೂ ಇತರೆ ಸಮಸ್ಯೆಗಳಿಗೆ ಕಾರಣ ಎನ್ನುವ ಆರೋಪಗಳಿವೆ.

ಹಾಗಾಗಿ ಸಂತ್ರಸ್ತೆಯು ಲೈಂಗಿಕ ಸಂಬಂಧಗಳಲ್ಲಿ ತೊಡಗಿಸಿಕೊಳ್ಳುವ ಆಯ್ಕೆ ಮಾಡಿರುವ ಕಾರಣಗಳ ಆಧಾರದಲ್ಲಿ ಅವಳ ನಡವಳಿಕೆಯನ್ನು ದೂಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಅಲ್ಲದೆ ಮಹಿಳೆ

ಸಾಂಪ್ರದಾಯಕವಲ್ಲದ ಎಂದು ಪರಿಗಣಿಸುವಂತ ಉಡುಪುಗಳನ್ನ ಧರಿಸಿದ್ದಾಗ ಆಕೆ ಪುರುಷರ ಜತೆ ಲೈಂಗಿಕ ಸಂಬಂಧ ಹೊಂದಲು ಬಯಸುತ್ತಾಳೆ ಹಾಗೂ ಅವಳ ಅನುಮತಿ ಇಲ್ಲದೆ ಪುರುಷನು ಆಕೆಯನ್ನು

ಸ್ಪರ್ಶಿಸಿದರೆ ಅದು ಅವಳದೇ ತಪ್ಪು ಎಂಬ ಪರಿಕಲ್ಪನೆ ಸರಿಯಲ್ಲ.

ದೇವಸ್ಥಾನಗಳ ಜೀರ್ಣೋದ್ದಾರ ಅನುದಾನ ತಡೆಹಿಡಿದ ರಾಜ್ಯ ಸರ್ಕಾರ ; ಭುಗಿಲೆದ್ದ ಆಕ್ರೋಶ

ಮಹಿಳೆಯ ತೊಟ್ಟಿರುವ ಬಟ್ಟೆಯು ಆಕೆ ಲೈಂಗಿಕ ಸಂಬಂಧ ಹೊಂದಲು ಬಯಸಿದ್ದಾಳೆ ಎಂಬುದನ್ನು ಸೂಚಿಸುವುದಿಲ್ಲ. ಅದು ಅವಳನ್ನು ಸ್ಪರ್ಶಿಸಲು ನೀಡುವ ಆಹ್ವಾನವೂ ಅಲ್ಲ ಎಂದು ತಿಳಿಸಿದೆ.

ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರದ ಘಟನೆ ಸಂಭವಿಸಿದ ಬಳಿಕ ಆ ಕೃತ್ಯ ಎಸಗಿದ ಪುರುಷನೊಂದಿಗೆ ಮಹಿಳೆ ಮಾತನಾಡುವುದಿಲ್ಲ. ಒಂದು ವೇಳೆ ಆಕೆ ಆರೋಪಿಯ ಜೊತೆ ಸಹಜವಾಗಿ ಮಾತನಾಡಿದರೆ

ಆಕೆ ಮಾಡಿರುವ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯದ ಆರೋಪ ಸುಳ್ಳಾಗುತ್ತದೆ ಎಂಬುದು ತಪ್ಪು ಗ್ರಹಿಕೆ.

ಎಷ್ಟೋ ಸಲ ಅತ್ಯಾಚಾರ ಎಸಗಿದ ಪುರುಷನ ಜೊತೆ ಮಾತನಾಡಬೇಕಾದ ಸನ್ನಿವೇಶ ಮಹಿಳೆಯರಿಗೆ ಎದುರಾಗುತ್ತದೆ. ಆಗ ಆರೋಪಿಯ ಕುಟುಂಬದ ಸದಸ್ಯ, ಉದ್ಯೋಗದಾತ ಅಥವಾ ಆಕೆಯ ಮೇಲೆ

ಅಧಿಕಾರ ಹೊಂದಿರುವ ಯಾವುದೇ ವ್ಯಕ್ತಿ ಇರಬಹುದು ಅವಳು ಅವನೊಂದಿಗೆ ಮಾತನಾಡುತ್ತಿದ್ದಾಳೆ ಎಂಬ ಕಾರಣಕ್ಕೆ ಅತ್ಯಾಚಾರ ಆರೋಪ ಸುಳ್ಳು ಎಂದು ಹೇಳಲಾಗದು ಎಂದು ತಿಳಿಸಿದೆ.

ಅಲ್ಲದೆ ಸುಪ್ರೀಂಕೋರ್ಟ್ ತೃತೀಯ ಲಿಂಗಿಗಳನ್ನು ಅತ್ಯಾಚಾರ ಮಾಡಲಾಗುವುದಿಲ್ಲ ಎಂಬ ಕಲ್ಪನೆಯನ್ನು ನಿರಾಕರಿಸಿದ್ದು, ಅತಿ ಹೆಚ್ಚು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವವರಲ್ಲಿ ತೃತೀಯ ಲಿಂಗಿಗಳ ಗುಂಪು

ಕೂಡ ಸೇರಿದೆ. ಎಲ್ಲಾ ತೃತೀಯ ಲಿಂಗಿಗಳೂ ಲೈಂಗಿಕ ಕಾರ್ಯಕರ್ತರು ಎಂಬ ಯೋಚನೆ ಕೂಡ ತಪ್ಪು ಎಂದು ಹೇಳಿದೆ.

Exit mobile version