`ಮಹಾ’ ನೂತನ ಸಿಎಂ ; ಶಿಂಧೆಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದೇಕೆ? ಬಿಜೆಪಿ ಲೆಕ್ಕಾಚಾರವೇನು?

Eknath Shinde

ಮಹಾರಾಷ್ಟ್ರದಲ್ಲಿ(Maharashtra) ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ ಅಚ್ಚರಿ ಎಂಬಂತೆ ಶಿವಸೇನೆಯ(Shivsena) ಬಂಡಾಯ ನಾಯಕ ಏಕನಾಥ್ ಶಿಂಧೆ(Eknath Shinde) ಮುಖ್ಯಮಂತ್ರಿಯಾಗಿದ್ದಾರೆ. 121 ಸ್ಥಾನಗಳನ್ನು ಹೊಂದಿದ್ದರು, ಬಿಜೆಪಿ ಮುಖ್ಯಮಂತ್ರಿ ಸ್ಥಾನವನ್ನುಏಕನಾಥ್ ಶಿಂಧೆಗೆ ಬಿಟ್ಟುಕೊಟ್ಟಿದೆ. ಮಹಾರಾಷ್ಟ್ರದ ಪ್ರಭಾವಿ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‍(Devendra Fadnavis) ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು.ಆದರೆ ದೆಹಲಿ ವರಿಷ್ಠರ ಸೂಚನೆಯಂತೆ ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಲಾಗಿದೆ.

ಖುದ್ದು ದೇವೇಂದ್ರ ಫಡ್ನವೀಸ್ ಈ ಘೋಷಣೆ ಮಾಡಿದ್ದಾರೆ. ಬಿಜೆಪಿಯ ಈ ನಡೆಯ ಹಿಂದೆ ಅನೇಕ ರಾಜಕೀಯ ಲೆಕ್ಕಾಚಾರಗಳಿವೆ. ಮುಖ್ಯವಾಗಿ ಏಕನಾಥ್ ಶಿಂಧೆಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ, ಅಧಿಕಾರಕ್ಕಾಗಿ, ಮುಖ್ಯಮಂತ್ರಿ ಸ್ಥಾನಕ್ಕಾಗಿ ನಾವು ಶಿವಸೇನೆಯ ಬಂಡಾಯ ಶಾಸಕರನ್ನು ಬೆಂಬಲಿಸಲಿಲ್ಲ. ಹಿಂದುತ್ವದ ಪರವಾಗಿರುವವರ ಜೊತೆ ನಾವಿದ್ದೇವೆ. ನಮ್ಮ ಮೊದಲ ಆಯ್ಕೆ ಹಿಂದುತ್ವ ಎಂಬ ಪರೋಕ್ಷ ಸಂದೇಶವನ್ನು ನೀಡಿರುವ ಬಿಜೆಪಿ, ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ಪ್ರಾರಂಭಿಸಿದೆ. ಅದೇ ರೀತಿ ಆಪರೇಷನ್‍ ಕಮಲದ ಕಳಂಕದಿಂದಲೂ ಪಾರಾಗಲು ಈ ತಂತ್ರ ಹೆಣೆದಿದೆ.


ಏಕನಾಥ್ ಶಿಂಧೆಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬಲವನ್ನು ಹೆಚ್ಚಿಸಿಕೊಳ್ಳುವ ತಂತ್ರವನ್ನು ದೆಹಲಿ ನಾಯಕರು ಹೊಂದಿದ್ದಾರೆ. ಪ್ರಖರ ಹಿಂದುತ್ವವಾದಿಯಾಗಿರುವ ಶಿಂಧೆ, ತನ್ನ ಶಕ್ತಿಮೀರಿ ಕೆಲಸ ಮಾಡುತ್ತಾರೆ, ಹಿಂದುತ್ವದ ಪರ ಕೆಲಸ ಮಾಡುತ್ತಾರೆ, ಆಗ ಪರೋಕ್ಷವಾಗಿ ಬಿಜೆಪಿಯ ಶಕ್ತಿ ವೃದ್ದಿಸಲಿದೆ. ಹೆಚ್ಚಿನ ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಮಹಾರಾಷ್ಟ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಶಿಂಧೆಯನ್ನು ಬಳಸಿಕೊಳ್ಳಲು ಬಿಜೆಪಿ ಈಗಿನಿಂದಲೇ ತಯಾರಿ ಪ್ರಾರಂಭಿಸಿದೆ.

2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮತ್ತು ಶಿವಸೇನೆಯನ್ನು ಸಂಪೂಣವಾಗಿ ನಿರ್ಣಾಮ ಮಾಡುವ ದೃಷ್ಟಿಯಿಂದ ಬಿಜೆಪಿ ಮುಖ್ಯಮಂತ್ರಿ ಸ್ಥಾನವನ್ನು ಶಿಂಧೆಗೆ ಬಿಟ್ಟುಕೊಟ್ಟಿದೆ.

Exit mobile version