ನಾಯಿ ಸಾಕಾಣಿಕೆಗೆ ಹೊಸ ರೂಲ್ಸ್ ಜಾರಿ ಮಾಡಿದ BBMP: ನಿಯಮ ಉಲ್ಲಂಘಿಸಿದ್ರೆ ದಂಡ..!

Bengaluru: ಮನೆಗಳಲ್ಲಿ ಮತ್ತು ಪ್ರಾಣಿ ಪಕ್ಷಿಗಳ ಮಾರಾಟ ಕೇಂದ್ರಗಳಲ್ಲಿ ನಾಯಿ ಸಾಕಾಣಿಕೆ ಮಾಡುವುದಕ್ಕೆ ಹೊಸ ನಿಯಮಗಳನ್ನು (new rules for pet adoption) ಬೃಹತ್ ಬೆಂಗಳೂರು

ಮಹಾನಗರ ಪಾಲಿಕೆ ಜಾರಿಗೊಳಿಸಿದ್ದು, ಈ ನಿಯಮಗಳನ್ನು ಕಟ್ಟುನಿಟ್ಟಾಗಿ (new rules for pet adoption) ಜಾರಿಗೊಳಿಸಲು ಮುಂದಾಗಿದೆ.

ಬೆಂಗಳೂರಿನಲ್ಲಿರುವ ಶ್ವಾನಪ್ರಿಯರು ಇನ್ನು ಮುಂದೆ ಬಿಬಿಎಂಪಿ (BBMP) ಜಾರಿಗೆ ತಂದಿರುವ ಹೊಸ ನಿಯಮಗಳ ಅಡಿಯಲ್ಲೇ ನಾಯಿ ಸಾಕಾಣಿಕೆ ಮಾಡಬೇಕು. ಮನೆಯಲ್ಲಿ ಒಂದೇ ಒಂದು ನಾಯಿ

ಸಾಕಿದ್ದರೂ ಕೂಡಾ ಈ ರೂಲ್ಸ್ (Rules) ಕಡ್ಡಾಯವಾಗಿ ಪಾಲನೆ ಮಾಡಲೇಬೇಕಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ. ಇನ್ನು ಈ ಹೊಸ ನಿಯಮಗಳನ್ನ ಜಾರಿಗೊಳಿಸುವ ಪ್ರಸ್ತಾವನೆಯನ್ನ ಬೃಹತ್

ಬೆಂಗಳೂರು ಮಹಾನಗರ ಪಾಲಿಕೆ ರಾಜ್ಯ ಸರ್ಕಾರದ ಮುಂದಿಟ್ಟಿದೆ. ಸರ್ಕಾರ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ವೀರಪ್ಪಮೊಯ್ಲಿ ಕಣಕ್ಕೆ? ಬಿಜೆಪಿ ಮಣಿಸಲು ಭರ್ಜರಿ ಪ್ಲಾನ್‌

ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ನಾಯಿ ಸಾಕುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಹೀಗಾಗಿ ನಾಯಿ ಸಾಕಾಣಿಕೆ ಮಾಡುವವರಿಗೆ ಹೊಸ ನಿಯಮಗಳನ್ನು ಜಾರಿಗೊಳಿಸುವ ಸಂಬಂಧ ಬಿಬಿಎಂಪಿ ಅನೇಕ

ಸಭೆಗಳನ್ನು ನಡೆಸಿದ್ದು, ಇದೀಗ ಅಂತಿಮ ವರದಿಯೊಂದನ್ನು ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಿದೆ. ಸದ್ಯ ಬೆಂಗಳೂರಿನಲ್ಲಿ ನಾಯಿ ಸಾಕಾಣಿಕೆಗೆ ಸೂಕ್ತ ನಿಯಮಗಳಿಲ್ಲ. ಅದರ ಜೊತೆಗೆ ನಾಯಿ ಸಾಕಾಣಿಕೆ

ಹಾಗೂ ಮಾರಾಟ ಮಾಡುವಲ್ಲಿ ಅವ್ಯವಹಾರ ಆಗುತ್ತಿದೆ ಎಂಬ ಕಾರಣಕ್ಕೆ ಕೂಡಾ ಕೇಳಿ ಬಂದಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಯಿ ಗಣತಿ ಕೂಡಾ ಆಗಿದ್ದು, ನಾಯಿಗಳ ಸಂಖ್ಯೆಯಲ್ಲಿ ಏರಿಳಿತ ಆಗುತ್ತಿದೆ. ಹೀಗಾಗಿ ಸಾಕಾಣಿಕೆಗೆ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.

ಇನ್ನು ಈ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ದಂಡ ವಿಧಿಸುವ ಸಾಧ್ಯತೆ ಇದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೊಸ ನಿಯಮಗಳೇನು?
• ಪ್ರತಿ ಮನೆಗೆ ಒಂದೇ ನಾಯಿ ಸಾಕಬೇಕು.
• ನಾಯಿ ಸಾಕಣೆಗೆ ಬಿಬಿಎಂಪಿಯಿಂದ ಪರವಾನಗಿ ಕಡ್ಡಾಯ
• ಪ್ರತಿ ತಿಂಗಳು ನಾಯಿಗೆ ಸುರಕ್ಷತೆ ದೃಷ್ಟಿಯಿಂದ ಲಸಿಕೆ ಹಾಕಿಸಬೇಕು

• ನಾಯಿ ಮಾರಾಟಕ್ಕೆ ಬಿಬಿಎಂಪಿಯಿಂದ ಪರವಾನಗಿ ಕಡ್ಡಾಯ
• ಮನೆಯಲ್ಲಿ ಮತ್ತು ಮಾರಾಟ ಕೇಂದ್ರದ ಶ್ವಾನಗಳಿಗೆ ರೇಬಿಸ್ (Rabies) ಲಸಿಕೆ ಕಡ್ಡಾಯ
• ನಾಯಿಯನ್ನ ಸಾಕಿ ಬೀದಿಗೆ ಬಿಡುವಂತಿಲ್ಲ, ಅದರ ಪಾಲನೆ ಕಡ್ಡಾಯ.

Exit mobile version