ಶಕ್ತಿ ಯೋಜನೆಯಲ್ಲಿ ಹೊಸ ರೂಲ್ಸ್! ಮಹಿಳೆಯರೇ ಇನ್ಮುಂದೆ ಸ್ಮಾರ್ಟ್ ಕಾರ್ಡ್ ಇದ್ದರೆ ಮಾತ್ರ ಬಸ್ ಪ್ರಯಾಣ ಉಚಿತ!

Karnataka: ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು, ಐದು ಗ್ಯಾರಂಟಿ (new rules of shakti scheme) ಯೋಜನೆಗಳಲ್ಲಿ ಮೊದಲು ಬಿಡುಗಡೆ ಆಗಿದ್ದೆ

ಸ್ತ್ರೀ ಶಕ್ತಿ ಯೋಜನೆ. ಈ ಯೋಜನೆಯ ಅಡಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲಿ (KSRTC Bus) ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿತ್ತು. ಇನ್ನು ಈ ಯೋಜನೆ

ಬಿಡುಗಡೆ ಆದಾಗಿನಿಂದ ಬಸ್ಗಳಲ್ಲಿ ಪ್ರಯಾಣ ಮಾಡುವ ಮಹಿಳೆಯರು ತಮ್ಮ ಆಧಾರ್ ಕಾರ್ಡ್ (Aadhar Card) ತೋರಿಸಿ ಫ್ರೀ ಆಗಿ ಪ್ರಯಾಣ ಮಾಡುತ್ತಿದ್ದರು. ಇನ್ಮುಂದೆ ಆಧಾರ್

ಕಾರ್ಡ್ ಬದಲು ಪ್ರತಿಯೊಬ್ಬ ಮಹಿಳೆಯರು ಕೂಡ ಉಚಿತ ಪ್ರಯಾಣ ಮಾಡಬೇಕು ಅಂದ್ರೆ ಸ್ಮಾರ್ಟ್ ಕಾರ್ಡ್ ಹೊಂದಿರಬೇಕು.

ಸ್ಮಾರ್ಟ್ ಕಾರ್ಡ್ (Smart Card) ಪಡೆದುಕೊಳ್ಳುವುದು ಹೇಗೆ?
ಸೇವಾ ಸಿಂಧು ಪೋರ್ಟಲ್ (Seva Sindhu Portal) ಮೂಲಕ ಅರ್ಜಿ ಸಲ್ಲಿಸಿ ಸ್ಮಾರ್ಟ್ ಕಾರ್ಡ್ (Smart Card) ಪಡೆದುಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ.ಬಿ ಎಂ ಟಿ ಸಿ (BMTC)

ಹೊರತುಪಡಿಸಿ ನಾರ್ಮಲ್ ಬಸ್ ಗಳಲ್ಲಿಯೂ ಕೂಡ ಸೀಟ್ ಬುಕಿಂಗ್ (Seat Booking) ಮಾಡಿಕೊಂಡು ಮಹಿಳೆಯರು ಪ್ರಯಾಣ ಮಾಡಬಹುದಾಗಿದೆ.

SCDCC ಬ್ಯಾಂಕ್ ನಲ್ಲಿದೆ ಉದ್ಯೋಗಾವಕಾಶ ; ಇಂದೇ ಅರ್ಜಿ ಸಲ್ಲಿಸಿ

ಇನ್ನು ಹತ್ತಿರದ ಬೆಂಗಳೂರು ಒನ್ (Bengaluru 1), ಸೈಬರ್ ಸೆಂಟರ್ಗೆ ಭೇಟಿ ನೀಡಿ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ (Aadhaar Card) ಹಾಗೂ ಅಡ್ರೆಸ್ ಪ್ರುಫ್ ನೀಡಿದರೆ ಸ್ಮಾರ್ಟ್ ಕಾರ್ಡ್ ವಿತರಣೆ

ಮಾಡಲಾಗುತ್ತದೆ. ಅಥವಾ ಸೇವಾ ಸಿಂಧು ಪೋರ್ಟಲ್ (Seva Sindhu Portal) ಮೂಲಕವೂ ಕೂಡ ಸ್ಮಾರ್ಟ್ ಕಾರ್ಡ್ ಗೆ ನೋಂದಣಿ ಮಾಡಿಕೊಳ್ಳಬಹುದು. ಸ್ಮಾರ್ಟ್ ಕಾರ್ಡ್

ಮಾಡಿಸಿಕೊಳ್ಳಲು ತಗುಲುವ ವೆಚ್ಚವನ್ನು ಸರ್ಕಾರವೇ ಬರಿಸಲಿದೆ (new rules of shakti scheme) ಎಂದು ಸರ್ಕಾರ ತಿಳಿಸಿದೆ.

ಉಚಿತ ಪ್ರಯಾಣಕ್ಕೆ ಹೊಸ ನಿಯಮ:
ಇನ್ನು ಮಹಿಳೆಯರು ಉಚಿತ ಪ್ರಯಾಣ ಮಾಡುವುದಾದರೆ ಬಸ್ಸಿನ ಕೆಲವು ನಿಯಮಗಳನ್ನು ತಿಳಿದುಕೊಂಡಿರಬೇಕು. ಮುಖ್ಯವಾಗಿ ಮಹಿಳಾ ಪ್ರಯಾಣಿಕರು ಉಚಿತ ಲಗೇಜ್ (Luggage)

ಮಿತಿಯನ್ನು ಹೊರತುಪಡಿಸಿ ಹೆಚ್ಚು ಬ್ಯಾಗ್ ತೆಗೆದುಕೊಂಡು ಹೋದರೆ ಅದಕ್ಕೆ ನಿಯಮಾನುಸಾರ ಟಿಕೆಟ್ (Ticket) ದರ ನೀಡಬೇಕಾಗುತ್ತದೆ. ಇನ್ನು ಪುರುಷರಿಗೆ ಮೀಸಲಿರುವ ಸೀಟ್ಗಳಲ್ಲಿ

ಮಹಿಳೆಯರು ಕುಳಿತುಕೊಂಡರೆ ದಂಡ ವಿಧಿಸುವುದಿಲ್ಲ ಆದರೆ ಕುಳಿತುಕೊಳ್ಳದೆ ಇರುವುದು ಒಳ್ಳೆಯದು ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಯಾಕೆಂದರೆ ಉಚಿತ ಬಸ್ ಪ್ರಯಾಣದಿಂದಾಗಿ ಬಿಎಂಟಿಸಿ (BMTC) ಯನ್ನು ಹೊರತುಪಡಿಸಿ ಸಾಮಾನ್ಯ ಬಸ್ಸುಗಳಲ್ಲಿ % 50 ರಷ್ಟು ಪುರುಷರಿಗೆ ಮೀಸಲಿಡಲಾಗಿದೆ.ಮಹಿಳೆಯರಿಗೆ ಮೀಸಲಾಗಿರುವ

ಸಿಟ್ ಗಳಲ್ಲಿ ಪುರುಷರು ಕುಳಿತುಕೊಂಡರೆ 200 ರೂ. ದಂಡ ಹಾಕಲಾಗುತ್ತದೆ ಆದರೆ ಪುರುಷರಿಗೆ ಮೀಸಲಿರುವ ಸೀಟುಗಳಲ್ಲಿ ಮಹಿಳೆಯರು ಕುಳಿತರೆ ದಂಡವಿಧಿಸುವುದಿಲ್ಲ. ಪುರುಷರ ಸೀಟು ಭರ್ತಿ ಆಗದೆ

ಇದ್ದಾಗ ಮಹಿಳೆಯರು ಆ ಸೀಟ್ ಬಳಸಿಕೊಳ್ಳಬಹುದು. ಉಚಿತ ಪ್ರಯಾಣ ಮಾಡುವ ಮಹಿಳಾ ಪ್ರಯಾಣಿಕರು ಯಾವುದೇ ಸಂದರ್ಭದಲ್ಲಿ ಕಿರಿಕಿರಿ ಮಾಡಿಕೊಳ್ಳದಂತೆಯೂ ಕೂಡ ಸೂಚನೆ ನೀಡಲಾಗಿದೆ.

ಸಿಬ್ಬಂದಿಗಳಿಗೂ ಖಡಕ್ ವಾರ್ನಿಂಗ್:
ಮಹಿಳೆಯರಿಗೆ ಉಚಿತ ಪ್ರಯಾಣ ಎನ್ನುವ ಕಾರಣಕ್ಕೆ ಬಸ್ ನಿಲ್ಲಬೇಕಾದ ಸ್ಥಳದಲ್ಲಿಯೂ ಕೂಡ ನಿಲ್ಲಿಸದೆ ಇರುವುದು ಅಥವಾ ಅನಗತ್ಯ ಕಿರಿಕಿರಿ ಮಾಡುವುದನ್ನು ತಪ್ಪಿಸಬೇಕು. ಇರುವ ಜಾಗದಲ್ಲಿ ಮಹಿಳಾ

ಪ್ರಯಾಣಿಕರು ಇದ್ದರೂ ಕೂಡ ಕಡ್ಡಾಯವಾಗಿ ಬಸ್ ನಿಲ್ಲಿಸಲೇಬೇಕು. ಯಾವುದೇ ಸಿಬ್ಬಂದಿ ಮನಸ್ಸಿಗೆ ಬಂದ ಹಾಗೆ ವರ್ತಿಸುವಂತಿಲ್ಲ. ಈ ರೀತಿ ವರ್ತಿಸಿದ್ದು ಇಲಾಖೆಯ ಗಮನಕ್ಕೆ ಬಂದರೆ ಅಂತಹ

ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.

ಇನ್ನು ಕಂಡಕ್ಟರ್ (Conductor) ಪ್ರತಿ ಮಹಿಳೆಗೂ ಜೀರೋ ದರದ ಉಚಿತ ಟಿಕೆಟ್ ನೀಡುವುದು ಕಡ್ಡಾಯವಾಗಿದೆ. ಒಂದು ವೇಳೆ ಟಿಕೆಟ್ ನೀಡದೇ ಇದ್ದರೆ ಕಂಡಕ್ಟರ್ ವಿರುದ್ಧವೇ ಇಲಾಖೆ ಶಿಸ್ತಿನ ಕ್ರಮ

ಕೈಗೊಳ್ಳುತ್ತದೆ. ಹೇಗಿದ್ದರೂ ಉಚಿತ ಟಿಕೆಟ್ ತಾನೇ ಸುಮ್ಮನೆ ಯಾಕೆ ಒಂದು ಟಿಕೆಟ್ ವೇಸ್ಟ್ ಮಾಡುವುದು ಎಂದು ಕಂಡಕ್ಟರ್ ವಿಚಾರ ಮಾಡುವಂತಿಲ್ಲ ಯಾವುದೇ ವ್ಯಕ್ತಿ ಟಿಕೆಟ್ ಇಲ್ಲದೆ ಬಸ್ಸಿನಲ್ಲಿ ಪ್ರಯಾಣ

ಮಾಡುವುದು ಅಪರಾಧವಾಗುತ್ತದೆ. ಈ ಎಲ್ಲಾ ನಿಯಮಗಳ ನಡುವೆ ಸ್ಮಾರ್ಟ್ ಕಾರ್ಡ್ (Smart Card) ಪಡೆದುಕೊಂಡರೆ ಪ್ರಯಾಣಿಕರಿಗೆ ಹಾಗೂ ಬಸ್ ಸಿಬ್ಬಂದಿಗಳಿಗೂ ಕೂಡ ತುಸು ನೆಮ್ಮದಿ

ಎನಿಸಬಹುದು. ಕೇವಲ ಸ್ಮಾರ್ಟ್ ಕಾರ್ಡ್ ತೋರಿಸಿದರೆ ಸಾಕು ಪ್ರಯಾಣ ಮಾಡಬಹುದು.

ಮೇಘಾ ಮನೋಹರ

Exit mobile version