Udupi: ಉಡುಪಿ ಸಮೀಪದ ಕೋಡಿ ಬೀಚ್ (Kodi Beach) ಕಡಲಾಮೆಗಳಿಗೆ ಪ್ರಸಿದ್ದಿ ಪಡೆದಿದ್ದು, ಬೀಚ್ನ ಬದಿಯಲ್ಲಿ ಅರಣ್ಯ (New touch for Udupi Kodi Beach) ಇಲಾಖೆಯು
ಟ್ರೀ ಪಾರ್ಕ್ (Tree Park) ಯೋಜನೆಯಲ್ಲಿ ಸುಮಾರು 10 ಹೆಕ್ಟೇರ್ ಜಾಗದಲ್ಲಿ 25 ಸಾವಿರ ಗಿಡ ನೆಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಈಗಾಗಲೇ 15 ಸಾವಿರ ಗಿಡ ನೆಡುವ ಪ್ರಕ್ರಿಯೆಯು ಕುಂದಾಪುರ ಆರ್.ಎಫ್.ಒ (R.F.O) ನೇತೃತ್ವದಲ್ಲಿ ನಡೆದಿದ್ದು, ಪ್ರವಾಸಿಗರ ಅನುಕೂಲ ಮತ್ತು ಸಮುದ್ರ ಸವಕಳಿ ತಡೆಯುವ ನಿಟ್ಟಿನಲ್ಲಿ ಇಲಾಖೆಯು
ಈ ಕ್ರಮವನ್ನು ಕೈಗೊಂಡಿರುವುದು ಎಲ್ಲರ ಗಮನ ಸೆಳೆದಿದೆ. ಅರಣ್ಯ ಇಲಾಖೆಯಿಂದ ಈಗಾಗಲೇ ಪ್ರವಾಸೋದ್ಯಮ ಇಲಾಖೆಯು ಕೇಂದ್ರ ಪರಿಸರ ಇಲಾಖೆಗೆ ಕೋಡಿ ಬೀಚ್ ಅನ್ನು ಬ್ಲೂ ಫ್ಲ್ಯಾಗ್
(Blue Flag) ಯೋಜನೆಗೆ ಸೇರಿಸುವಂತೆ (New touch for Udupi Kodi Beach) ಮನವಿ ಕಳುಹಿಸಲಾಗಿದೆ.
ಕಳೆದ 5 ವರ್ಷಗಳಿಂದ ಕ್ಲೀನ್ ಕುಂದಾಪುರ (Kundapura) ಪ್ರಾಜೆಕ್ಟ್ ನಿರಂತರ ನಡೆದುಕೊಂಡು ಬರುತ್ತಿದ್ದು, ಬೀಚ್ ಸ್ವಚ್ಛತೆಗೆ ಕೊಡುಗೆ ನೀಡಿದೆ. ಹಸಿರು ಕೋಡಿ ಅಭಿಯಾನದಡಿ ಕೋಡಿ ಬ್ಯಾರಿಸ್
ಸಮೂಹ ಶಿಕ್ಷಣ ಸಂಸ್ಥೆಯ ನೇತೃತ್ವದಲ್ಲಿ ಪ್ರತಿ ವಾರವೂ ಸ್ವಚ್ಛತಾ ಅಭಿಯಾನದ ಜತೆಗೆ ಹಸಿರೀಕರಣ ಕಾರ್ಯ ನಡೆಯುತ್ತಿದೆ.
ಅಲಿವ್ ರೀಡ್ಲೆ (Alive Ridley) ಜಾತಿಗೆ ಸೇರಿದ ಕಡಲ ಆಮೆ ಮೊಟ್ಟೆ ಇಡಲು ಸುಮಾರು 2-3 ವರ್ಷಗಳಿಂದ ಹಾಟ್ ಸ್ಪಾಟ್ ಜಾಗ ಎಂದು ಗುರುತಿಸಿಕೊಂಡಿದ್ದು, ಅವು ಕೋಡಿ ಬೀಚ್ ತೀರದ ಆಯಕಟ್ಟಿನ
ಕಡಲ ತೀರಕ್ಕೆ ದೊಡ್ಡ ಸಂಖ್ಯೆಯಲ್ಲಿ ಬರುತ್ತಿವೆ. ಇದರ ಹಿಂದೆ ಕುಂದಾಪುರ ಸ್ಥಳದಲ್ಲಿ ವಲಯ ಅರಣ್ಯ ಇಲಾಖೆ ಕೈಜೋಡಿಸಿವೆ.
ಇನ್ನು ಪ್ರವಾಸಿಗರು, ದೇಶ ವಿದೇಶದಿಂದ ಬರುವ ಪರ್ಯಟನಕಾರರು ನೆಮ್ಮದಿಯಿಂದ ಕಾಲ ಕಳೆಯುವಂತಾಗಲು ಬೀಚ್ ಆಯಕಟ್ಟಿನ ಸ್ಥಳದಲ್ಲಿ ಗಾಳಿ ಗಿಡಗಳ ನಾಟಿ ಕಾರ್ಯ ಆರಂಭಿಸಿದ್ದು, ಭವಿಷ್ಯದಲ್ಲಿ
ಈ ಮರಗಳು ಕಡಲ ತೀರದ ಸೌಂದರ್ಯ ಹೆಚ್ಚಿಸುವುದಲ್ಲದೆ ಪಕ್ಷಿಗಳಿಗೆ ನೆಲೆ ಒದಗಿಸಲಿದೆ. ಪ್ರವಾಸಿಗರು ನಮ್ಮದಿಯಿಂದ ಮರದ ಬುಡದಲ್ಲಿ ಕಾಲ ಕಳೆಯಲು ಅನುಕೂಲವಾಗಲಿದೆ ಎಂದು ಅರಣ್ಯ ಇಲಾಖೆ ಹೇಳಿದೆ.
ಸಾರ್ವಜನಿಕ ಸೇವಾ ಸಂಸ್ಥೆಗಳು, ಕರಾವಳಿ ಕಾವಲು ಪಡೆ, ಅರಣ್ಯ ಇಲಾಖೆ, ವಿದ್ಯಾಸಂಸ್ಥೆಗಳು ಕೆಲಸ ಮಾಡುತ್ತಿದೆ. ಬೀಚ್ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು,
ಅರಣ್ಯ ಇಲಾಖೆ ಕೈಗೊಂಡಿರುವ ಪಾರ್ಕ್ ಯೋಜನೆಯ ಕಾರ್ಯ ಚಟುವಟಿಕೆಗಳು ಬೀಚ್ಗೆ ಮುಂದಿನ ದಿನಗಳಲ್ಲಿ ಹೊಸ ಲುಕ್ ನೀಡಲಿದೆ ಎಂದು ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಗಣೇಶ್ ಪುತ್ರನ್
(Ganesh Putran) ಹೇಳುತ್ತಾರೆ.
ಇದನ್ನು ಓದಿ: ಕಾವೇರಿ ಕಿಚ್ಚು: ತಮಿಳುನಾಡಿನಲ್ಲಿ ಕರ್ನಾಟಕದ ವಿರುದ್ಧ ಪ್ರತಿಭಟನೆ, ಅಂಗಡಿ ಮುಂಗಟ್ಟುಗಳು ಬಂದ್
- ಭವ್ಯಶ್ರೀ ಆರ್.ಜೆ