ಕರ್ನಾಟಕ ಸರ್ಕಾರದಿಂದ ಪಡಿತರ ಚೀಟಿ ಅರ್ಜಿದಾರರಿಗೆ ಮಹತ್ವದ ಸೂಚನೆ

Karnataka: ನವೆಂಬರ್ 20 ರಂದು ಪಡಿತರ ಚೀಟಿ ವಿತರಣೆಯ ಬಗ್ಗೆ ಕರ್ನಾಟಕ ಸರ್ಕಾರ(New Update Of Ration Card) ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತರು ಹೊಸ ಆದೇಶವನ್ನು ಹೊರಡಿಸಿದ್ದಾರೆ.

ಸರ್ಕಾರ ಹೊರಡಿಸಿರುವ ಈ ಆದೇಶದಲ್ಲಿ 2022 ರವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಅರ್ಹ ಕುಟುಂಬಗಳಿಗೆ ಹೊಸ ಆದ್ಯತಾ ಪಡಿತರ ಚೀಟಿಯನ್ನು(New Update Of Ration Card) ನೀಡುವ ಬಗ್ಗೆ ಉಲ್ಲೇಖಿಸಲಾಗಿದೆ ಹಾಗೂ ಪ್ರತಿ ಜಿಲ್ಲೆಗಳಿಂದ ವರದಿ ಪಡೆದುಕೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

2017-2018 ರ ಸಾಲಿನಲ್ಲಿ ಸಲ್ಲಿಕೆ ಆಗಿರವ ಅರ್ಜಿಗಳನ್ನು ವಿಲೇವಾರಿ ಮಾಡಿದ ತರಹವೇ ,

ಅದೇ ಕ್ರಮದಲ್ಲಿ ಇತರೆ ವರ್ಷಗಳಲ್ಲಿ ಸಲ್ಲಿಕೆ ಆಗಿರವ ಅರ್ಜಿಗಳನ್ನು ಅದೇ ಆಧಾರದಲ್ಲಿ ವಿಲೇವಾರಿ ಮಾಡಬೇಕು ಎಂದು ಆದೇಶಿಸಲಾಗಿದೆ.

ಪ್ರಥಮ ಆದ್ಯತೆಯಾಗಿ ತೀವ್ರ ಆಹಾರ ಅಭದ್ರತೆಗೆ ಒಳಗಾಗಿರವ ಕುಟುಂಬಗಳು ಮತ್ತು ಇದುವರೆಗೆ ಯಾವುದೇ ಪಡಿತರ ಚೀಟಿ ಹೊಂದಿರದ ಕುಟುಂಬಗಳನ್ನು ಪರಿಗಣಿಸಿ ನೀಡಬೇಕು.

ಇದನ್ನೂ ಓದಿ : https://vijayatimes.com/10-years-back-hit-films/


ದ್ವಿತೀಯ ಆದ್ಯತೆಯಾಗಿ ಮೂಲ ಬುಡಕಟ್ಟು,ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡವನ್ನು ಪರಿಗಣಿಸಿ ಈ ಆದ್ಯತೆಯನ್ನು ನೀಡಬೇಕು,

ಜಿಲ್ಲೆಗಳಲ್ಲಿ ಆಹಾರ ನಿರೀಕ್ಷಕರು ವಿತರಿಸುವ ಪ್ರತಿಯೊಂದು ಹೊಸ ಆದ್ಯತಾ ಪಡಿತರ ಚೀಟಿಗಳ ಅರ್ಹತೆ ಮತ್ತು ಸಿಂಧುತ್ವದ ಬಗ್ಗೆ ಜಿಲ್ಲೆಯ ಜಂಟಿ ನಿರ್ದೇಶಕರು ಸ್ವತಃ ಪರಿಶೀಲನೆ ಮಾಡಬೇಕು.

https://fb.watch/h6GjblqLDv/ ಚಿತ್ರದುರ್ಗ, ಹೊಳಲ್ಕೆರೆ : ಪಾಳುಬಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ!

ಯಾವುದೇ ಅನರ್ಹರಿಗೆ ಪಡಿತರ ಚೀಟಿಯನ್ನು ವಿತರಣೆ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರ(Government) ಅಧಿಸೂಚನೆ ನೀಡಿದೆ.

ಇದರ ಜೊತೆಗೆ ಹೊಸ ಆದ್ಯತಾ ಪಡಿತರ ಚೀಟಿ ಕೋರಿ ಸಲ್ಲಿಕೆಯಾಗಿರುವ ಅರ್ಹ ಅರ್ಜಿಗಳನ್ನು ವಿಲೇವಾರಿ ಮಾಡುವಾಗ ಕೆಲವು ಷರತ್ತು ಮತ್ತು ಮಾರ್ಗಸಚಿಗಳನ್ನು ಕಡ್ಡಾಯವಾಗಿ ಪಾಲಿಸಲು ನಿರ್ದೇಶವನ್ನು ನೀಡಲಾಗಿದೆ.

ರಾಜ್ಯದ ಇತರ ಜಿಲ್ಲೆಗಳಲ್ಲಿ ವಿತರಿಸಬಹುದಾದ ಹೊಸ ಆದ್ಯತಾ ಪಡಿತರ ಸಂಖ್ಯೆಗಳ ವಿವರಗಳನ್ನು ಸಂಖ್ಯೆಗನುಗುಣವಾಗಿ ಕೊಡಬೇಕು ಎಂದು ತಿಳಿಸಲಾಗಿದೆ. ಇದರಿಂದಾಗಿ ಅರ್ಜಿ ಸಲ್ಲಿಸಿರುವ ಜನರಿಗೆ ತುಸು ನೆಮ್ಮದಿ ದೊರಕಿದಂತಾಗಿದೆ.

Exit mobile version