ಟೋಲ್ ಹೋರಾಟ ಇದೊಂದು ಟೀಸರ್ ಅಷ್ಟೇ! ಕನ್ನಡಿಗರಿಗೆ ಅನ್ಯಾಯ ಆದ್ರೆ ನಾವು ಸಮ್ಮನೆ ಬಿಡಲ್ಲ

Bengaluru : ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿಯಲ್ಲಿ (National Highway) ತೆಗೆದುಕೊಳ್ಳುತ್ತಿರುವ ಟೋಲ್‌ ವಿರುದ್ಧ ಕೇಳಿಬರುತ್ತಿರುವ ಆರೋಪವನ್ನು ಮುಂದಿಟ್ಟು ಹೋರಾಟ ನಡೆಸಿದ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy), ಇದು ಕೇವಲ ಒಂದು ಟೀಸರ್‌ ಅಷ್ಟೇ, ಕನ್ನಡಿಗರಿಗೆ ಅನ್ಯಾಯ ಆದ್ರೆ ನಾವು ಸಮ್ಮನೆ ಕುಳಿತುಕೊಳ್ಳುವುದಿಲ್ಲ (Nikhil Kumaraswamy statement) ಎಂದು ಹೇಳಿದ್ದಾರೆ.

ಕಳೆದ ಒಂದು ವಾರದಿಂದ ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿ ಚಾಲನೆ ಪಡೆದುಕೊಂಡ ಬಳಿಕ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಮಾರ್ಚ್‌ 12 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಡ್ಯ ಜಿಲ್ಲೆಗೆ ಆಗಮಿಸಿದ ವೇಳೆ, ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್‌ವೇ ಅನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿದರು.

ಉದ್ಘಾಟನೆಗೊಂಡ ಬಳಿಕ ವಾಹನ ಸವಾರರಿಗೆ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ವಾಹನ ಸವಾರರು ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಲು ದಶಪಥ ಎಕ್ಸ್‌ಪ್ರೆಸ್‌ವೇ (Expressway) ಅನ್ನು ಆಯ್ಕೆ ಮಾಡಿಕೊಂಡರೆ

ಕೇವಲ 95 ನಿಮಿಷಗಳ ಪ್ರಯಾಣದ ಅವಧಿಯಲ್ಲಿ ಮೈಸೂರನ್ನು ತಲುಪುವ ನಿರೀಕ್ಷೆಯಿದೆ ಎಂಬುದನ್ನು ವರದಿಯಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ : https://vijayatimes.com/r-ashoka-vs-siddaramaiah/

ದಶಪಥ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಇದೀಗ ಟೋಲ್‌ ದರ ನಿಗದಿಪಡಿಸಿದ್ದು,

ಈ ಮಾರ್ಗದಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳಿಗೂ ನಿಗದಿಪಡಿಸಿರುವ ಟೋಲ್‌ ಶುಲ್ಕವನ್ನು ಪಡೆಯಲಾಗುತ್ತದೆ.

ಟೋಲ್‌ ಸಂಗ್ರಹಿಸುವ ಪ್ರಕ್ರಿಯೆಯನ್ನು ಆರಂಭಗೊಳಿಸಿದ ಮೊದಲ ದಿನದಿಂದಲೂ ಒಂದಲ್ಲ ಒಂದು ಸಮಸ್ಯೆ ಪ್ರಯಾಣಿಕರಿಂದ ಕೇಳಿಬಂದಿದೆ!

ವಾಹನ ಸವಾರರು ಟೋಲ್‌ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶ ಹೊರಹಾಕಿದ್ದು, ನಮ್ಮಿಂದಲೇ ಟ್ಯಾಕ್ಸ್‌ ಪಡೆದು ರಸ್ತೆ ನಿರ್ಮಿಸಿ,

ಇದೀಗ ಮತ್ತೆ ಟೋಲ್‌ ಮೂಲಕ ಟ್ಯಾಕ್ಸ್‌ ಪಡೆಯುವುದು ಎಷ್ಟು ಸರಿ? ಯಾಕೆ ಹೆಚ್ಚಿನ ಮೊತ್ತವನ್ನು ಟೋಲ್‌ಗೆ ನಿಗದಿಪಡಿಸಿದ್ದೀರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸ್ವತಃ ಮೈಸೂರು-ಕೊಡಗು ಸಂಸದ, ಪ್ರತಾಪ್‌ ಸಿಂಹ (Pratap Simha) ಸ್ಪಷ್ಟನೆ ನೀಡಿದರು.

ಸದ್ಯ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಬೆಂಗಳೂರಿನಿಂದ ನಿಡಘಟ್ಟ ವಿಭಾಗಕ್ಕೆ (55 ಕಿಮೀ) ಟೋಲ್ ಸಂಗ್ರಹಿಸಲು ಪ್ರಾರಂಭಿಸಿದೆ.

ಬೆಂಗಳೂರಿನಿಂದ ನಿಡಘಟ್ಟ ಮಾರ್ಗದ ಕಾರುಗಳಿಗೆ 135 ರೂ. ಟೋಲ್ ಶುಲ್ಕವನ್ನು ನಿಗದಿಪಡಿಸಲಾಗಿದೆ, ಆದರೆ ಮದ್ದೂರಿನಿಂದ ಮೈಸೂರಿಗೆ 120 ರೂ. ನಿಗದಿಪಡಿಸಲಾಗಿದೆ.

ಎಕ್ಸ್‌ಪ್ರೆಸ್‌ವೇಯಲ್ಲಿ ಸಂಪೂರ್ಣವಾಗಿ ತಗಲುವ ಒಟ್ಟು ಟೋಲ್ ಶುಲ್ಕ 255 ರೂ. ಟೋಲ್‌ ದರವನ್ನು ತೀವ್ರವಾಗಿ ಖಂಡಿಸುತ್ತಿರುವ ಸಾರ್ವಜನಿಕರ ದೃಶ್ಯಗಳು,

ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ (Social media) ವರದಿಯಾಗುತ್ತಿದೆ. ಟೋಲ್‌ ವಿರುದ್ಧ ಕೇಳಿಬರುತ್ತಿರುವ ಆಕ್ರೋಶಗಳ ಬೆನ್ನಲ್ಲೇ ಜೆಡಿಎಸ್‌ ಯುವ ನಾಯಕ,

ಇದನ್ನೂ ಓದಿ : https://vijayatimes.com/board-exams/

ನಟ ನಿಖಿಲ್‌ ಕುಮಾರಸ್ವಾಮಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಟೋಲ್‌ ಮುಂದೆ ನಿಂತು ಸಂಸದ ಪ್ರತಾಪ್‌ ಸಿಂಹ, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ನಿಂತು ಆಕ್ರೋಶ ಹೊರಹಾಕಿದ ನಿಖಿಲ್‌ ಕುಮಾರಸ್ವಾಮಿ ಅವರು, ಇದೊಂದು ಟೀಸರ್‌ ಅಷ್ಟೇ! ಕನ್ನಡಿಗರಿಗೆ ಅನ್ಯಾಯ ಆದ್ರೆ ನಾವು ಸಮ್ಮನೆ ಕುಳಿತುಕೊಳ್ಳಲ್ಲ ಎಂದು ಹೇಳಿದ್ದಾರೆ.

Exit mobile version