ನಿಖಿಲ್‌ ವಿರುದ್ದ ಡಿ.ಕೆ.ಸುರೇಶ್‌ ಸ್ಪರ್ಧೆ ; ಹೊಸ ತಂತ್ರ ಹೆಣೆಯಿತಾ ಕಾಂಗ್ರೆಸ್..?!

Ramnagar : ಮುಂಬರುವ ವಿಧಾನಸಭಾ ಚುಣಾವಣೆಯಲ್ಲಿ (Assembly Elections) ರಾಮನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ (JDS) ಅಭ್ಯರ್ಥಿಯಾಗಿರುವ ನಿಖಿಲ್‌ಕುಮಾರಸ್ವಾಮಿ (Nikhil Kumaraswamy) ಅವರ ವಿರುದ್ದ ಹಾಲಿ (Nikhil vs DK Suresh) ರಾಮನಗರ ಸಂಸದ ,

ಮತ್ತು ಡಿ.ಕೆ.ಶಿವಕುಮಾರ್‌ (DK Shivakumar) ಸಹೋದರ ಡಿ.ಕೆ. ಸುರೇಶ್‌ (D.K. Suresh) ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಮುಂದಾಗಿದೆ ಎಂಬ ಸುದ್ದಿ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನವನ್ನೇ ಮೂಡಿಸಿದೆ.

ಮುಂಬರುವ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹೊಸ ರಾಜಕೀಯ ತಂತ್ರಗಾರಿಕೆಗಳನ್ನು ಹೆಣೆಯುತ್ತಿರುವ ರಾಜ್ಯ ಕಾಂಗ್ರೆಸ್‌,

ಪ್ರಬಲ ನಾಯಕರನ್ನು ಕಟ್ಟಿ ಹಾಕುವ ಭಾಗವಾಗಿ ಈ ತಂತ್ರ ಹಣೆದಿದೆ ಎನ್ನಲಾಗಿದೆ.

ಜೆಡಿಎಸ್‌ ಪಕ್ಷವನ್ನು ಹಳೇ ಮೈಸೂರು ಭಾಗದಲ್ಲಿ ಕಟ್ಟಿ ಹಾಕಬೇಕಾದರೆ, ಕುಮಾರಸ್ವಾಮಿ ಅವರನ್ನು ಕಟ್ಟಿ ಹಾಕಬೇಕು.

ಕುಮಾರಸ್ವಾಮಿ ಅವರನ್ನು ಕಟ್ಟಿ ಹಾಕಬೇಕಾದರೆ, ರಾಮನಗರ ಕ್ಷೇತ್ರದಲ್ಲಿ ನಿಖಿಲ್‌ಕುಮಾರಸ್ವಾಮಿ ಸುಲಭವಾಗಿ ಗೆಲ್ಲದಂತೆ ನೋಡಿಕೊಳ್ಳಬೇಕು.

ಇದನ್ನೂ ಓದಿ : https://vijayatimes.com/kumaraswamy-tweet-for-bjp/

ಆ ಮೂಲಕ ಕುಮಾರಸ್ವಾಮಿ ಅವರು ತಮ್ಮ ಶಕ್ತಿಯನ್ನು ರಾಮನಗರದಲ್ಲೇ ಹೆಚ್ಚಾಗಿ ವ್ಯಯಿಸಬೇಕಾಗುವಂತೆ ಮಾಡಬೇಕು ಎಂಬುದು ಕಾಂಗ್ರೆಸ್‌ ತಂತ್ರಗಾರಿಕೆ.

ಹೀಗಾಗಿ ನಿಖಿಲ್‌ ವಿರುದ್ದ ಸ್ಪರ್ಧೆ ಮಾಡಲು ಡಿ.ಕೆ.ಸುರೇಶ್‌ ಪ್ರಬಲ ಅಭ್ಯರ್ಥಿಯಾಗಿದ್ದಾರೆ.

ಹಣ ಬಲ, ಜಾತಿ ಬಲ, ತೋಳು ಬಲ ಸೇರಿದಂತೆ ಎಲ್ಲ ಬಲಗಳಲ್ಲೂ ಕುಮಾರಸ್ವಾಮಿ ಅವರ ಕುಟುಂಬಕ್ಕೆ ಸೆಡ್ಡು (Nikhil vs DK Suresh) ಹೊಡೆಯಲು ಡಿ.ಕೆ.ಬ್ರದರ್ಸ್‌ (D.K.Brothers) ಸಮರ್ಥರಾಗಿದ್ದಾರೆ.

ಹೀಗಾಗಿ ಡಿ.ಕೆ.ಸುರೇಶ್ ಅವರನ್ನು ರಾಮನಗರದಿಂದ ಕಣಕ್ಕಿಳಿಸಬೇಕು ಎಂಬ ಚರ್ಚೆ ರಾಜ್ಯ ಕಾಂಗ್ರೆಸ್‌ನಲ್ಲಿ (State Congress) ನಡೆಯುತ್ತಿದೆ.

ಇನ್ನು ನಿಖಿಲ್‌ಕುಮಾರಸ್ವಾಮಿ ವಿರುದ್ದ ಡಿ.ಕೆ.ಸುರೇಶ್‌ಸ್ಪರ್ಧೆ ಮಾಡಿದರೆ ಅದು ಎರಡು ಪ್ರಬಲ ಒಕ್ಕಲಿಗ ನಾಯಕರ ಕಟುಂಬಗಳ ನಡುವಿನ ಕಾಳಗವಾಗಿ ಮಾರ್ಪಡಲಿದೆ.

ಇದನ್ನೂ ಓದಿ : https://vijayatimes.com/devegowda-warns-jds-leaders/

ಒಕ್ಕಲಿಗ ಮತಬ್ಯಾಂಕ್‌ ಮೇಲೆ ಪ್ರಬಲ ಹಿಡಿತ ಹೊಂದಿರುವ ದೇವೇಗೌಡರ ಕುಟುಂಬದ ಅಧಿಪತ್ಯವನ್ನು ಮುರಿಯಲು ಡಿ.ಕೆ.ಬ್ರದರ್ಸ್‌ ಮುಂದಾಗುತ್ತಾರಾ ಎಂಬ ಪ್ರಶ್ನೆಯೂ ಮೂಡಿದೆ.

ಇನ್ನೊಂದೆಡೆ ಡಿ.ಕೆ.ಸುರೇಶ ಅವರನ್ನು ರಾಜ್ಯ ರಾಜಕೀಯಕ್ಕೆ ಕರೆತಂದರೆ ಡಿಕೆ ಶಿವಕುಮಾರ್‌ ಅವರ ರಾಜಕೀಯ ಚಟುವಟಿಕೆಗಳಿಗೆ ಹೊಸ ಬಲ ಸಿಗಲಿದೆ.

ಸಿದ್ದರಾಮಯ್ಯರನ್ನು (Siddaramaiah) ಕಟ್ಟಿ ಹಾಕಬೇಕಾದರೆ ಡಿ.ಕೆ.ಸುರೇಶ್‌ಕೂಡಾ ರಾಜ್ಯ ರಾಜಕೀಯಕ್ಕೆ ಬರಬೇಕು ಎಂಬ ಹಂಗಿತವನ್ನು ಡಿಕೆಶಿ ಕೂಡಾ ಹೊಂದಿದ್ದಾರೆ ಎನ್ನಲಾಗಿದೆ.

ಆದರೆ ದೇವೇಗೌಡರ ಕುಟುಂಬವನ್ನು ಸೋಲಿಸುವ ಭರದಲ್ಲಿ ಒಕ್ಕಲಿಗ ಸಮುದಾಯ ತಿರುಗಿ ಬಿದ್ದರೆ ಕಷ್ಟ ಎಂಬ ಸಂಗತಿಯನ್ನು ಡಿಕೆಶಿ ಯೋಚಿಸುತ್ತಿದ್ದಾರೆ.

ಒಕ್ಕಲಿಗ ನಾಯಕರಲ್ಲೇ ಕಿತ್ತಾಟ ನಡೆದರೆ ಅದು ಒಕ್ಕಲಿಗ ಸಮುದಾಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಸಾಕಷ್ಟು ಅಳೆದು-ತೂಗಿ ನಿರ್ಧಾರ ತೆಗೆದುಕೊಳ್ಳಲು ಡಿಕೆಶಿ ಮುಂದಾಗಿದೆ.

Exit mobile version