ಅಬಯಾ ಬ್ಯಾನ್ : ಫ್ರಾನ್ಸ್‌ನ ಶಾಲೆಗಳಲ್ಲಿ ಮುಸ್ಲಿಂ ಮಹಿಳೆಯರು ಧರಿಸುವ ಅಬಯಾಗೆ ಬ್ಯಾನ್ !

ಪ್ಯಾರಿಸ್ : ಕೆಲವು ವರ್ಷಗಳ ಹಿಂದೆ ಫ್ರಾನ್ಸ್‌ನಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿತ್ತು. ಇದೀಗ ಮಹತ್ವದ (no abayas in French school) ಬೆಳವಣಿಗೆಯಲ್ಲಿ ಫ್ರಾನ್ಸ್ ಸರ್ಕಾರ ಮುಸ್ಲಿಂ

ಮಹಿಳೆಯರು ಧರಿಸುವ ಅಬಯಾವನ್ನು ಕೂಡಾ ಶಾಲೆಗಳಲ್ಲಿ ಧರಿಸುವುದಕ್ಕೆ ನಿಷೇಧ ಹೇರಲಾಗಿದೆ.

ಈ ಕುರಿತು ಮಾತನಾಡಿರುವ ಶಿಕ್ಷಣ ಸಚಿವ ಗೇಬ್ರಿಯಲ್ ಅಟಲ್, ಮುಸ್ಲಿಂ ಮಹಿಳೆಯರು ಧರಿಸುವ ಅಬಯಾ ಉಡುಪುಗಳನ್ನು ಶಾಲೆಯಲ್ಲಿ ಧರಿಸುವುದನ್ನು ಫ್ರಾನ್ಸ್ ನಿಷೇಧಿಸಿದೆ. ಈ ಉಡುಪು ಫ್ರಾನ್ಸ್‌ನ

ಶಿಕ್ಷಣದಲ್ಲಿ ಕಟ್ಟುನಿಟ್ಟಾದ ಜಾತ್ಯತೀತ ಕಾನೂನುಗಳನ್ನು ಉಲ್ಲಂಘಿಸಿದೆ. ಹೀಗಾಗಿ ಇನ್ನು ಮುಂದೆ ಶಾಲೆಯಲ್ಲಿ ಅಬಯಾ ಧರಿಸಲು ಸಾಧ್ಯವಾಗುವುದಿಲ್ಲ” ಎಂದು ಹೇಳಿದ್ದಾರೆ.

ಇನ್ನು ಸೆಕ್ಯುಲರಿಸಂ ಎಂದರೆ ಶಾಲೆಯ ಮೂಲಕ ವಿಮೋಚನೆಗೊಳ್ಳುವ ಸ್ವಾತಂತ್ರ್ಯ. ನೀವು ತರಗತಿಗೆ ಪ್ರವೇಶಿಸುತ್ತೀರಿ, ವಿದ್ಯಾರ್ಥಿಗಳನ್ನು ನೋಡಿ ಅವರ ಧರ್ಮವನ್ನು ಗುರುತಿಸಲು ನಿಮಗೆ

ಸಾಧ್ಯವಾಗಬಾರದು. ಹೀಗಾಗಿ ಈ ಕ್ರಮವನ್ನು ಜಾರಿಗೆ ತರಲಾಗಿದೆ ಎಂದು ಫ್ರಾನ್ಸ್ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.

ಬ್ಯಾಂಕ್ ಗಳಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹಣ ಡೆಪಾಸಿಟ್ ಇಟ್ಟಿದ್ದೀರಾ? ಬ್ಯಾಂಕ್ ದಿವಾಳಿ ಆದರೆ ಏನು ಮಾಡುವಿರಿ?

ಇದಕ್ಕೂ ಮುನ್ನ 2004 ರಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಧಾರ್ಮಿಕ ಸಂಬಂಧವನ್ನು ತೋರ್ಪಡಿಸುವ ಚಿಹ್ನೆಗಳು ಅಥವಾ ಬಟ್ಟೆಗಳನ್ನು ಧರಿಸುವುದನ್ನು ಫ್ರಾನ್ಸ್ ನಿಷೇಧಿಸಿತ್ತು. ಇದು ದೊಡ್ಡ ಶಿಲುಬೆಗಳು,

ಯಹೂದಿ ಕಿಪ್ಪಾಗಳು ಮತ್ತು ಇಸ್ಲಾಮಿಕ್ ಶಿರಸ್ತ್ರಾಣಗಳನ್ನು (no abayas in French school) ಒಳಗೊಂಡಿತ್ತು.

ಇನ್ನು ಸರ್ಕಾರದ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ವಿರೋಧ ಪಕ್ಷದ ಬಲಪಂಥೀಯ ರಿಪಬ್ಲಿಕನ್ ಪಕ್ಷದ ಮುಖ್ಯಸ್ಥ ಎರಿಕ್ ಸಿಯೊಟ್ಟೊ ಕೂಡ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ನಮ್ಮ ಶಾಲೆಗಳಲ್ಲಿ ಅಬಯಾಗಳನ್ನು ನಿಷೇಧಿಸುವಂತೆ ನಾವು ಹಲವಾರು ಬಾರಿ ಕರೆ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ. ಆದರೆ ಎಡಪಂಥೀಯ ಫ್ರಾನ್ಸ್ ಅನ್ಬೋಡ್ ಪಕ್ಷದ ಕ್ಲೆಮೆಂಟೈನ್ ಆಟೈನ್ ಅವರು,

ಈ ಘೋಷಣೆಯು “ಅಸಂವಿಧಾನಿಕ” ಮತ್ತು ಫ್ರಾನ್ಸ್ನ ಜಾತ್ಯತೀತ ಮೌಲ್ಯಗಳ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದ್ದಾರೆ.

ಇನ್ನು ಅನೇಕ ಮುಸ್ಲಿಂ ಸಂಘಗಳನ್ನು ಒಳಗೊಂಡಿರುವ ರಾಷ್ಟ್ರೀಯ ಸಂಸ್ಥೆಯಾದ CFCM, ಕೇವಲ ಬಟ್ಟೆಯ ವಸ್ತುಗಳು ಧಾರ್ಮಿಕ ಚಿಹ್ನೆ ಅಲ್ಲ. ಹೀಗಾಗಿ ಅಬಯಾ ನಿಷೇಧವನ್ನು ಒಪ್ಪಲು ಸಾಧ್ಯವಿಲ್ಲ.

ಫ್ರಾನ್ಸ್ ಸರ್ಕಾರ ಮುಸ್ಲಿಂಮರನ್ನು ಗುರಿಯಾಗಿಸಿಕೊಂಡು, ಈ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಟೀಕಿಸಿದೆ.

Exit mobile version