ನಾವು ಭಾರತೀಯರೆಂದು ಸಾಭೀತುಪಡಿಸಲು ಹಿಂದಿ ಕಲಿಯಬೇಕಿಲ್ಲ : ಅಣ್ಣಾಮಲೈ!

amit shah

ನಾವು ಭಾರತೀಯರೆಂದು ಸಾಭೀತುಪಡಿಸಲು ಹಿಂದಿ(Hindi) ಭಾಷೆಯನ್ನು(Language) ವಿಶೇಷವಾಗಿ ಕಲಿಯಬೇಕಾದ ಅಗತ್ಯವಿಲ್ಲ. ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳು ಕೂಡಾ ಅದಕ್ಕೆ ಸಮನಾದ ಸ್ಥಾನವನ್ನು ಹೊಂದಿವೆ. ತಮಿಳು ಭಾಷೆ(Tamil Language) ಕೂಡಾ ಹಿಂದಿಗೆ ಸಮನಾದ ಮಾನ್ಯತೆ ಹೊಂದಿದೆ ಎಂದು ತಮಿಳುನಾಡಿನ(Tamilnadu) ರಾಜ್ಯ ಬಿಜೆಪಿ ಅಧ್ಯಕ್ಷ(BJP President) ಅಣ್ಣಾಮಲೈ(Annamalai) ಹೇಳಿದ್ದಾರೆ.


ಭಾರತದ ಯಾವುದೇ ಭಾಷೆಯ ಜನರ ಮೇಲೆ ಹಿಂದಿ ಹೇರಿಕೆಯನ್ನು ಬಲವಂತವಾಗಿ ಮಾಡುವುದು ಸರಿಯಲ್ಲ. ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯನ್ನು ಬಲವಂತವಾಗಿ ಮಾಡುವುದನ್ನು ನಾನು ಒಪ್ಪುವುದಿಲ್ಲ. ನಾನಾಗಲಿ ಅಥವಾ ಬಿಜೆಪಿ ಪಕ್ಷವಾಗಲಿ ಅದನ್ನು ಮಾಡಲು ಹೋಗುವುದಿಲ್ಲ. ತಮಿಳುನಾಡಿನಲ್ಲಿ ತಮಿಳು ಭಾಷೆಗೆ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದರು. ಇನ್ನು ಒರ್ವ ವ್ಯಕ್ತಿ ಉದ್ಯೋಗಕ್ಕಾಗಿ ಅಥವಾ ಇತರೆ ಅಗತ್ಯ ಕೆಲಸಗಳಿಗಾಗಿ ಯಾವುದೇ ಭಾಷೆಯನ್ನು ಕಲಿಯಲಿ. ಆ ರೀತಿ ಬೇರೆ ಭಾಷೆ ಕಲಿಯಲು ಮತ್ತು ಬಳಕೆ ಮಾಡಲು ಎಲ್ಲರಿಗೂ ಅವಕಾಶವಿದೆ.

ಆದರೆ ಅದು ಹಿಂದಿ ಭಾಷೆಯೇ ಆಗಿರಬೇಕೆಂಬ ನಿಯಮ ಸರಿಯಲ್ಲ. ಯಾವುದೇ ಪ್ರಾದೇಶಿಕ ಭಾಷೆಯಾದರು ಸೈ. ಎಲ್ಲರೂ ಎಲ್ಲ ಭಾಷೆಯನ್ನು ಕಲಿಯಲಿ. ಆದರೆ ಅವರ ಮಾತೃಭಾಷೆಗೆ ಮೊದಲ ಆದ್ಯತೆ ನೀಡಲಿ ಎಂದು ಸಲಹೆ ನೀಡಿದರು. ಇನ್ನು 37ನೇ ಸಂಸದೀಯ ಅಧಿಕೃತ ಭಾಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ್ದ ಗೃಹ ಸಚಿವ ಅಮಿತ್ ಶಾ, ಭಾರತದಲ್ಲಿ ಇಂಗ್ಲೀಷ್ ಭಾಷೆಗೆ ಪರ್ಯಾಯವಾಗಿ ಹಿಂದಿ ಭಾಷೆಯನ್ನು ಬಳಕೆ ಮಾಡಬೇಕು ಎಂದಿದ್ದರು.

ಅಮಿತ್ ಶಾ ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅಣ್ಣಾಮಲೈ, ನಮಗೆ ಯಾವುದೇ ಭಾಷೆಯ ಬಗ್ಗೆ ದ್ವೇಷವಾಗಲಿ, ಅಗೌರವವಾಗಲಿ ಇಲ್ಲ. ಆದರೆ ನಮ್ಮ ಭಾಷೆಯ ಮೇಲೆ ಬೇರೆ ಭಾಷೆಯ ಹೇರಿಕೆಯನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

Exit mobile version