85 ವರ್ಷದ ವರನಿಗೆ 65 ವರ್ಷದ ವಧು ! ಮಕ್ಕಳ ಸಮ್ಮುಖದಲ್ಲೇ ಮದುವೆ

muslim couples

ಪ್ರೀತಿ ಎಂದರೇ ಹೀಗೆ, ಜಾತಿ – ಮತ, ವಯಸ್ಸು ಯಾವುದೂ ಕೂಡ ಶುದ್ದ ಪ್ರೀತಿಗೆ ಅಡ್ಡಿಯಾಗುವುದಿಲ್ಲ ಎಂಬುವುದಕ್ಕೆ ಈ ಇಳಿ ವಯಸ್ಸಿನ ಜೋಡಿಗಳೇ ಸಾಕ್ಷಿ. ಇಳಿ ವಯಸ್ಸಿನಲ್ಲಿ ಮದುವೆಯಾಗಿ ಅಚ್ಚರಿ ಮೂಡಿಸಿದ ಫಾತಿಮಾಬೇಗಂ (65) ಹಾಗೂ ಮುಸ್ತಫಾ (85) ಜೋಡಿ. ಇವರು ಮೈಸೂರಿನ ಉದಯಗಿರಿಯ ಗೌಸಿಯಾನಗರದಲ್ಲಿ ನಿವಾಸಿಗಳಾಗಿದ್ದು ಕುಟುಂಬಸ್ಥರ ಸಮ್ಮುಖದಲ್ಲಿ ಮನೆಯಲ್ಲೇ ವೃದ್ದ ದಂಪತಿಗಳು ಸಾಂಸರೀಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕುರಿ ಸಾಕಾಣಿಕೆ ಮಾಡಿ ತನ್ನ 9 ಮಕ್ಕಳಿಗೆ ಮದುವೆ ಮಾಡಿರುವ ಹಾಜಿ ಮುಸ್ತಫಾ. ಎರಡು ವರ್ಷಗಳ ಹಿಂದೆ ಪತ್ನಿ ಖುರ್ಷಿದ್ ಬೇಗಂರನ್ನ ಕಳೆದುಕೊಂಡಿದ್ದರು. ಮಕ್ಕಳಿಗೆಲ್ಲಾ ಮದುವೆ ಮಾಡಿದ್ದರಿಂದ ಗೌಸಿಯಾನಗರದಲ್ಲಿ ಒಂಟಿ ಜೀವನ ಸಾಗಿಸುತ್ತಿದ್ದರು.

ಈ ಒಂಟಿ ಜೀವನಕ್ಕೆ ಜೋಡಿಯೊಂದು ಬೇಕೆಂದು ಹಂಬಲಿಸಿದ್ದ ಅಜ್ಜ ಮುಸ್ತಫಾಗೆ ಕಣ್ಣಿಗೆ ಬಿದ್ದದ್ದು ಅದೇ ಏರಿಯಾದ ಫಾತಿಮಾ ಬೇಗಂ. ಗೌಸಿಯಾನಗರದಲ್ಲೇ ಒಂಟಿ ಜೀವನ ಸಾಗಿಸುತ್ತಿದ್ದ 65 ವರ್ಷದ ವೃದ್ದೆ ಫಾತಿಮಾ ಬೇಗಂರನ್ನ ಮದುವೆಯಾಗಲು ಮನವಿ ಮಾಡಿದ್ದ ಮುಸ್ತಫಾ ಅವರಿಗೆ ನಿರಾಸೆ ಮಾಡದೆ ಮದುವೆಯಾಗಲು ಫಾತಿಮಾ ಬೇಗಂ ಒಪ್ಪಿ ವಿವಾಹ ಜೀವನಕ್ಕೆ ಕಾಲಿಟ್ಟರು.

ಇಳಿ ವಯಸ್ಸಿನಲ್ಲಿ ಮದುವೆಯಾಗಲು ಇಚ್ಚಿಸಿದ ತಂದೆಗೆ ಮಕ್ಕಳು ಶುಭಹಾರೈಸಿದ್ದು,ಇಡೀ ಕುಟುಂಬಕ್ಕೆ ಅಚ್ಚರಿ ಎನಿಸಿದ್ರೂ ತಂದೆಯ ನಿರ್ಧಾರಕ್ಕೆ ಜೈ ಎಂದು ಮನೆಯಲ್ಲೇ ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ‌ ಫಾತಿಮಾ ಬೇಗಂ ಜೊತೆ ಮುಸ್ತಫಾ ಅವರ ವಿವಾಹ ನೇರವೇರಿತು.

Exit mobile version