ಮಸೀದಿಗಳಲ್ಲಿ ಧ್ವನಿವರ್ಧಕ ಏಕೆ ನಿಷೇಧಿಸಬೇಕು? : ಒಮರ್ ಅಬ್ದುಲ್ಲಾ ಕಿಡಿ!

omar

ಮಸೀದಿಗಳ(Mosque) ಮೇಲೆ ಅಳವಡಿಸಿರುವ ಧ್ವನಿವರ್ಧಕಗಳನ್ನು(Loudspeaker) ಏಕೆ ನಿಷೇಧಿಸಬೇಕು?(Ban) ಅದೇ ರೀತಿ ಮುಸ್ಲಿಮರು ಸೇವಿಸುವ ಹಲಾಲ್(Halal) ಮಾಂಸವನ್ನು ಯಾಕೆ ನಿರ್ಬಂಧಿಸಲಾಗುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ(Jammu & Kashmir) ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ಮುಖ್ಯಸ್ಥ ಒಮರ್ ಅಬ್ದುಲ್ಲಾ(Omar Abdullaha) ಪ್ರಶ್ನಿಸಿದ್ದಾರೆ.

ಸದ್ಯ ಭಾರತದಲ್ಲಿ ಮುಸ್ಲಿಮರ ಧಾರ್ಮಿಕ ಹಕ್ಕುಗಳಿಗೆ ರಕ್ಷಣೆ ಸಿಗುತ್ತಿಲ್ಲ. ಅಲ್ಪಸಂಖ್ಯಾತರ ಹಕ್ಕುಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ. ಹಿಜಾಬ್, ಹಲಾಲ್, ವ್ಯಾಪಾರ ನಿರ್ಬಂಧ, ಧ್ವನಿವರ್ಧಕ ನಿರ್ಬಂಧ ಸೇರಿದಂತೆ ಅನೇಕ ವಿವಾದಗಳನ್ನು ಹುಟ್ಟು ಹಾಕುವ ಮೂಲಕ ಮುಸ್ಲಿಮರ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಇನ್ನು ಇಂದಿನ ಭಾರತವೂ ಜಮ್ಮು ಮತ್ತು ಕಾಶ್ಮೀರವನ್ನು ಒಪ್ಪಿಕೊಂಡ ದೇಶವಾಗಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದರು.

1947ರಲ್ಲಿ ನಾವು ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವ ದೇಶಕ್ಕೆ ಸೇರಿಕೊಂಡೆವು. ಆದರೆ ಇಂದು ಒಂದು ಧರ್ಮಕ್ಕೆ ಪ್ರಾಶಸ್ತ್ಯ ಸಿಗುತ್ತಿದ್ದು, ಇತರ ಧರ್ಮಗಳನ್ನು ಹತ್ತಿಕ್ಕಲಾಗುತ್ತಿದೆ. ಮುಂದೊಂದು ದಿನ ಹೀಗೆ ಆಗುತ್ತದೆ ಎಂದು ನಾವು ಆಗ ತಿಳಿದಿರಲಿಲ್ಲ. ಅದು ತಿಳಿದಿದ್ದರೆ ನಮ್ಮ ನಿರ್ಧಾರ ಬೇರೆಯೇ ಆಗಿರುತ್ತಿತ್ತು. ಭಾರತದಲ್ಲಿ ಪ್ರತಿಯೊಂದು ಧರ್ಮಕ್ಕೂ ಸಮಾನ ಹಕ್ಕಿದೆ ಎಂದು ಪ್ರಜ್ಞಾಪೂರ್ವಕವಾಗಿ ಭಾರತದೊಂದಿಗಿದ್ದೇವೆ. ಇನ್ನು ಮಸೀದಿಗಳಲ್ಲಿ ಧ್ವನಿವರ್ಧಕ ಏಕೆ ಬಳಸಬಾರದು?

ಇತರ ಧರ್ಮದವರಿಗೆ ಧ್ವನಿವರ್ಧಕ ಬಳಸುವ ಹಕ್ಕಿದ್ದರೆ ನಮಗೆ ಮಾತ್ರ ಯಾಕೆ ನಿರ್ಬಂಧ ಹೇರಲಾಗುತ್ತಿದೆ. ಅದೇ ರೀತಿ ಹಲಾಲ್ ಮಾಂಸ ತಿನ್ನುವುದು ನಮ್ಮ ಧಾರ್ಮಿಕ ಹಕ್ಕು. ನಮ್ಮ ಧರ್ಮ ಹೇಳಿದ ರೀತಿಯಲ್ಲಿ ನಾವು ನಡೆಯುತ್ತೇವೆ. ಆದರೆ ಹಲಾಲ್ ಮಾಂಸ ತಿನ್ನಬೇಡಿ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ನಮ್ಮ ಧರ್ಮವನ್ನು ಆಚರಿಸುವ ಮುಕ್ತ ಸ್ವಾತಂತ್ರ್ಯ ನಮಗಿದೆ. ನಾವು ಇಷ್ಟಪಡುವ ರೀತಿಯಲ್ಲಿ ನಾವು ಬದುಕುತ್ತೇವೆ ಎಂದರು.

Exit mobile version