ಕರ್ನಾಟಕದ ಮತಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಮುಸ್ಲಿಂ ಯುವಕನ ಬಂಧನ!

Bengaluru : ಕರ್ನಾಟಕದಲ್ಲಿ (Karnataka) ಇತ್ತೀಚೆಗೆ ಜಾರಿಯಾಗಿದ್ದ ಮತಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ರಾಜ್ಯದಲ್ಲಿ ಮೊದಲ ಬಂಧನವಾಗಿದೆ.

ಮಹಿಳೆಯನ್ನು ಮದುವೆಯಾಗುವ ನೆಪದಲ್ಲಿ ಮತಾಂತರ ಮಾಡಿದ ಆರೋಪದ ಮೇಲೆ 24 ವರ್ಷದ ಮುಸ್ಲಿಂ ಯುವಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇತ್ತೀಚೆಗಷ್ಟೇ ಘೋಷಿಸಲಾದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ರಕ್ಷಣೆ (One Detained under Anti Conversion Law) ಕಾಯ್ದೆಯಡಿ ಇದು ಮೊದಲ ಬಂಧನವಾಗಿದೆ.

ಇನ್ನು ಅಕ್ಟೋಬರ್ 5 ರಂದು 19 ವರ್ಷದ ಯುವತಿ ಕಾಣೆಯಾಗಿದ್ದು,

ಆಕೆಯ ತಾಯಿ ಯಶವಂತಪುರ ಪೊಲೀಸ್ ಠಾಣೆಗೆ (Yashwanthpur Police Station) ಬಂದು ನಾಪತ್ತೆ ದೂರು ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

https://vijayatimes.com/varanasi-court-over-carbon-dating/

ಹಿಂದಿನ ದಿನ ಮಹಿಳೆಯ ತಾಯಿ ನೀಡಿದ ದೂರಿನ ಮೇರೆಗೆ ಅಕ್ಟೋಬರ್ 6 ರಂದು ನಾಪತ್ತೆ ದೂರು (One Detained under Anti Conversion Law) ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು,

ಸೈಯದ್ ಮೊಯಿನ್ ಹಾಗೂ ಯುವತಿಯನ್ನು ವಶಕ್ಕೆ ಪಡೆದು, ಅಕ್ಟೋಬರ್ 8 ರಂದು ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಲಾಗಿತ್ತು.

https://youtu.be/MRjQfgXgN60

ಈ ನಡುವೆ ಅಕ್ಟೋಬರ್ 13 ರಂದು ಯುವತಿಯ ತಾಯಿ ತನ್ನ ಮಗಳನ್ನು ಮದುವೆಯಾಗುವ ನೆಪದಲ್ಲಿ ಸೈಯದ್ ಮೊಯಿನ್ ಮತಾಂತರ ಮಾಡಿದ್ದಾರೆ ಎಂದು ಆರೋಪಿಸಿ ಮತ್ತೆ ದೂರು ದಾಖಲಿಸಿದ್ದರು.

ಆಕೆಯ ದೂರಿನ ಮೇರೆಗೆ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆಯ ಕಾಲಂ 5ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆಂಧ್ರಪ್ರದೇಶದ (AndraPradesh) ಪೆನುಗೊಂಡದಲ್ಲಿ ಧಾರ್ಮಿಕ ಮತಾಂತರ ನಡೆದಿದೆ ಎನ್ನಲಾಗಿದೆ. ಸೆಪ್ಟಂಬರ್ 30 ರಂದು ಕರ್ನಾಟಕದಲ್ಲಿ ಮತಾಂತರ ವಿರೋಧಿ ಕಾನೂನು (Law) ಜಾರಿಗೆ ಬಂದಿದೆ.

ಈ ಕಾಯಿದೆಯ ಅಡಿಯಲ್ಲಿ, ಯಾವುದೇ ನೊಂದ ವ್ಯಕ್ತಿಯ ಪೋಷಕರು, ಸಹೋದರ, ಸಹೋದರಿ ಅಥವಾ ವ್ಯಕ್ತಿಗೆ ರಕ್ತ, ಮದುವೆ ಅಥವಾ ದತ್ತು ಪಡೆಯುವ ಮೂಲಕ ಸಂಬಂಧ ಹೊಂದಿರುವವರು ಪ್ರಥಮ ಮಾಹಿತಿ ಸಲ್ಲಿಸಬಹುದು.

ಈ ದೂರಿನ ಆಧಾರದ ಮೇಲೆ ಪೊಲೀಸರಿಗೆ ತನಿಖೆ ನಡೆಸಲು ಅವಕಾಶವಿದೆ. ಒಂದು ಮತದಿಂದ ಇನ್ನೊಂದು ಮತಕ್ಕೆ ಮತಾಂತರವಾಗಲು ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗೆ ಅರ್ಜಿ ಸಲ್ಲಿಸಿ, ಜಿಲ್ಲಾಧಿಕಾರಿ ಮುಂದೆ ಹಾಜರಾಗಿ, ಮತಾಂತರವಾಗಲು ಅವಕಾಶವಿದೆ. ಒತ್ತಾಯದ, ದುರುದ್ದೇಶದ, ಆಮೀಷದ ಮತಾಂತರವನ್ನು ನಿಷೇಧಿಸಲಾಗಿದೆ.
Exit mobile version