Newdelhi: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (one nation one election) ಅವರ ನೇತೃತ್ವದಲ್ಲಿ ‘ಒಂದು ದೇಶ ಒಂದು ಚುನಾವಣೆ’ ಪರಿಕಲ್ಪನೆಯನ್ನು ಸಾಕಾರಗೊಳಿಸುವ
ಸಾಧ್ಯತೆಗಳನ್ನು ಕಂಡುಕೊಳ್ಳಲು ಸಮಿತಿಯೊಂದನ್ನು ಕೇಂದ್ರ ಸರ್ಕಾರ ರಚಿಸಿದ್ದು, ದೇಶದಲ್ಲಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯುವಂತಾಗಬೇಕು
ಎಂದು ಪ್ರತಿಪಾದಿಸಿಕೊಂಡು ಬಂದಿರುವ ಕೇಂದ್ರ ಸರ್ಕಾರ ತನ್ನ ಉದ್ದೇಶವನ್ನು ಕಾನೂನು ರೂಪದಲ್ಲಿ ಜಾರಿಗೊಳಿಸುವ ಉದ್ದೇಶದಿಂದ ಮಹತ್ವದ ಹೆಜ್ಜೆ ಇರಿಸಿದೆ.

ಕೇಂದ್ರ ಸರ್ಕಾರವು ಸೆ 18 ರಿಂದ 22ರವರೆಗೆ ಐದು ದಿನಗಳ ವಿಶೇಷ ಸಂಸತ್ ಅಧಿವೇಶನ ಕರೆದಿರುವ ಬೆನ್ನಲ್ಲೇ ಈ ಸಮಿತಿ ರಚಿಸಲಾಗಿದ್ದು, ಸಮಿತಿಯ ಸದಸ್ಯರ ಕುರಿತಾದ ಅಧಿಸೂಚನೆಯನ್ನು
ಬಳಿಕ ಹೊರಡಿಸಲಾಗುತ್ತದೆ. ಗಣೇಶ ಹಬ್ಬದ ಸಮಯದಲ್ಲಿ ನಡೆಯುವ ಸಂಸತ್ ಅಧಿವೇಶನದಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ವಿಧೇಯಕವನ್ನು ಕೇಂದ್ರ ಸರ್ಕಾರ ಮಂಡಿಸಲಿದೆ ಎಂದು
ಕೆಲವು ಮೂಲಗಳು (one nation one election) ಗುರುವಾರ ತಿಳಿಸಿವೆ.
Apple iPhone 15: ಆಪಲ್ ಐಫೋನ್ 15 ಹಾಗೂ ಪಿಕ್ಸೆಲ್ 8 ಸರಣಿಯ ಫೋನ್‌ಗಳ ಬಿಡುಗಡೆಯ ದಿನಾಂಕ ಪ್ರಕಟಿಸಿದ ಗೂಗಲ್
ಇನ್ನು ಲೋಕಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆ ನಡೆಸುವುದು ‘ಒಂದು ದೇಶ, ಒಂದು ರಾಷ್ಟ್ರ’ ಯೋಜನೆಯ ಉದ್ದೇಶವಾಗಿದ್ದು, ಜನರು
ಒಂದೇ ಬಾರಿಗೆ ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಮತ ಚಲಾಯಿಸುವಂತಾದರೆ ಸಮಯ ಹಾಗೂ ಭಾರಿ ಹಣದ ಉಳಿತಾಯವಾಗಲಿದೆ ಎನ್ನುವುದು ಕೇಂದ್ರ ಸರ್ಕಾರದ ತರ್ಕವಾಗಿದೆ.

ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಸಮಿತಿಗೆ ಉಳಿದ ಸದಸ್ಯರನ್ನು ನೇಮಕ ಮಾಡಿದ ಬಳಿಕ ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಸುವುದರ ಸಾಧಕ- ಬಾಧಕಗಳ ಕುರಿತು
ಅಧ್ಯಯನ ಸಮಾಲೋಚನೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರದಲ್ಲಿನ 9 ವರ್ಷಗಳ ಅವಧಿಯಲ್ಲಿ ಕೇಂದ್ರ
ಸರ್ಕಾರವು ಸಂಸತ್‌ನ ವಿಶೇಷ ಅಧಿವೇಶನವನ್ನು ಕರೆದಿರುವುದು ಇದೇ ಮೊದಲ ಬಾರಿಯಾಗಿದೆ.
ಜೂನ್ (June) 30, 2017ರ ಮಧ್ಯರಾತ್ರಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಉದ್ದೇಶದಿಂದ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ವಿಶೇಷ ಜಂಟಿ ಕಲಾಪ ನಡೆಸಲಾಗಿತ್ತು.
ಆದರೆ ಸಂಸತ್‌ನ ಉಭಯ ಸದನಗಳಲ್ಲಿ ಈ ಸಲ ಐದು ದಿನಗಳ ಕಾಲ ಪೂರ್ಣ ಪ್ರಮಾಣದ ಪ್ರತ್ಯೇಕ ಕಲಾಪಗಳು ನಡೆಯಲಿವೆ.
ಇನ್ನು ಅನೇಕ ಊಹಾಪೋಹಗಳಿಗೆ ಕೇಂದ್ರ ಸರ್ಕಾರ ದಿಢೀರ್ ವಿಶೇಷ ಅಧಿವೇಶನ ಕರೆದಿರುವುದು ಕಾರಣವಾಗಿದ್ದು, ‘ಒಂದು ದೇಶ, ಒಂದು ಚುನಾವಣೆ’ ಕುರಿತಾದ ವಿಧೇಯಕ ಮಂಡಿಸುವುದು
ಹಾಗೂ ಏಕರೂಪ ನಾಗರಿಕ ಸಂಹಿತೆಯ ಮಸೂದೆ ಮತ್ತು ಜಮ್ಮು (Jammu) ಮತ್ತು ಕಾಶ್ಮೀರಕ್ಕೆ (Kashmir) ರಾಜ್ಯ ಸ್ಥಾನಮಾನ ಮರಳಿ ನೀಡುವುದು. ಅಲ್ಲದೆ ಅಲ್ಲಿ ಚುನಾವಣೆ ನಡೆಸುವುದು
ಮುಂತಾದವುಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಕೇಂದ್ರ ಸರ್ಕಾರವು ವಿಶೇಷ ಅಧಿವೇಶನದ ಗುಟ್ಟನ್ನು ಈವರೆಗೂ ಬಹಿರಂಗಪಡಿಸಿಲ್ಲ.
ಭವ್ಯಶ್ರೀ ಆರ್.ಜೆ