Mysore: ನಾಡಹಬ್ಬ ದಸರಾದಲ್ಲಿ ನಡೆಯುವ ಜಂಬೂಸವಾರಿ ಸೇರಿದಂತೆ ಕೆಲ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಲು (Online passes for Dussehra) ಪಾಸ್ಗಳನ್ನು ಆನ್ಲೈನ್
(Online) ಮೂಲಕ ನೀಡಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ. ನಾಡಹಬ್ಬಮೈಸೂರು ದಸರಾದ ಗೋಲ್ಡ್ ಕಾರ್ಡ್ಪಾಸ್ ಗಳು ಆನ್ಲೈನ್ನಲ್ಲಿ ದೊರೆಯಲಿದ್ದು, 6 ಸಾವಿರ ರೂಪಾಯಿ ಬೆಲೆಯನ್ನು
ನಿಗದಿಪಡಿಸಲಾಗಿದೆ. ಮೈಸೂರು ದಸರಾ ವೀಕ್ಷಣೆಗಾಗಿ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಆನ್ಲೈನ್ನಲ್ಲಿ ಮಾತ್ರ ಗೋಲ್ಡ್ ಕಾರ್ಡ್ (Goldcard) ಪಾಸ್ಗಳನ್ನು ಮೈಸೂರು ಜಿಲ್ಲಾಡಳಿತ
ಮಾರಾಟ ಮಾಡುತ್ತಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಈ ಸೌಲಭ್ಯವನ್ನು ಅಕ್ಟೋಬರ್ 18ರ ಬುಧವಾರ ಬೆಳಗ್ಗೆ 10 ಗಂಟೆಯಿಂದ ಆರಂಭಿಸಲಾಗಿದೆ. ಗೋಲ್ಡ್ ಕಾರ್ಡ್
ಪಾಸ್ಗಳನ್ನು ಒಂದೇ ಬಾರಿ ಎರಡು ಪಾಸ್ಗಳನ್ನು (Online passes for Dussehra) ಖರೀದಿಸಲು ಮಾತ್ರ ಅವಕಾಶ ನೀಡಲಾಗಿದೆ.
ಅಕ್ಟೋಬರ್ 24ರಂದು ನಡೆಯುವ ಜಂಬೂಸವಾರಿ ವೀಕ್ಷಣೆಗೆ ಅರಮನೆ ಆವರಣದೊಳಗೆ ವೀಕ್ಷಣೆಗೆ ಪ್ರತಿ ಟಿಕೆಟ್ ಬೆಲೆ 3 ಸಾವಿರ ರೂಪಾಯಿ ಹಾಗೂ 2 ಸಾವಿರ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.
ಅದೇ ರೀತಿ ಬನ್ನಿ ಮಂಟಪದಲ್ಲಿ ನಡೆಯುವ ಪಂಜಿನ ಕವಾಯಿತು ವೀಕ್ಷಣೆಗೆ ಪ್ರತಿ ಟಿಕೆಟ್ ಬೆಲೆಯನ್ನು 500 ರೂಪಾಯಿ ನಿಗದಿಪಡಿಸಲಾಗಿದೆ. ಈ ಟಿಕೆಟ್ಗಳನ್ನು (Ticket) ಆನ್ಲೈನ್ನಲ್ಲಿ ಖರೀದಿಸಬಹುದು. ಖರೀದಿಗಾಗಿ https://www.mysoredasara.gov.in/ ವೆಬ್ಸೈಟ್ ಭೇಟಿ ನೀಡಬಹುದು.
ಇನ್ನು ಆನ್ಲೈನ್ ಮೂಲಕ ಟಿಕೆಟ್ ಖರೀದಿಸಿದವರಿಗೆ ಸ್ಥಳ, ದಿನಾಂಕ, ಸಮಯ ಹಾಗೂ ಇನ್ನಿತರೆ ಮಾಹಿತಿಗಳನ್ನು ಅವರ ಮೊಬೈಲಿಗೆ ಎಸ್ಎಂಎಸ್ (SMS) ಮೂಲಕ ಕಳುಹಿಸಲಾಗುವುದು.
ಇನ್ನು ಆನ್ಲೈನ್ ಹೊರತುಪಡಿಸಿ ಇತರೆ ಯಾವುದೇ ರೀತಿಯಲ್ಲಿ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಮಾರಾಟ ಇರುವುದಿಲ್ಲ ಎಂದು ಮೈಸೂರು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ದಸರಾ ಗೋಲ್ಡ್ ಕಾರ್ಡ್ ವಿಶೇಷತೆ :
ಮೈಸೂರು ದಸರಾದಲ್ಲಿ ನೀಡುವ ಗೋಲ್ಡ್ ಕಾರ್ಡ್ನಿಂದ ಮೈಸೂರು ದಸರಾದಲ್ಲಿ (Dasara) ನಡೆಯುವ ಯಾವುದೇ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ಅರಮನೆ ಮುಂದೆ ಜಂಬೂ ಸವಾರಿ
ಮೆರವಣಿಗೆಯನ್ನು ವಿಐಪಿ (VIP) ಲಾಂಜ್ನಲ್ಲಿ ಕುಳಿತು ನೋಡುವ ಅವಕಾಶ ಸಿಗಲಿದೆ. ದಸರಾದ ಯಾವುದೇ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರವೇಶ ಸಿಗಲಿದೆ.
ಇದನ್ನು ಓದಿ: ರೈತರ ಸಾಲ ವಸೂಲಿಗೆ ನಿರ್ಬಂಧ ಹೇರಿದ ಸರ್ಕಾರ: ಬ್ಯಾಂಕುಗಳಿಗೆ ಕಠಿಣ ಸೂಚನೆ