ಮಣಿಪುರ ಹಿಂಸಾಚಾರ ಕುರಿತು ಪ್ರಧಾನಿ ಮೋದಿ ಸಮಗ್ರ ಹೇಳಿಕೆಗೆ ಬಿಗಿಪಟ್ಟು : ಸಂಸತ್‌ ಹೊರಗೆ ಆಡಳಿತ-ವಿಪಕ್ಷಗಳ ಪ್ರತಿಭಟನೆ

New Delhi , ಜುಲೈ 25: ಮುಂಗಾರು ಅಧಿವೇಶನದ ಮೂರನೇ ದಿನದ ಸಮಯದಲ್ಲಿ, ಸಂಸತ್ತಿನ ಪ್ರತಿಪಕ್ಷಗಳ ಸದಸ್ಯರು (ಸಂಸದರು) ಸಂಸತ್ ಭವನದ (Opposition protests outside Parliament)

ಮಹಾತ್ಮ ಗಾಂಧಿ (Mahatma Gandhi) ಪ್ರತಿಮೆಯ ಮುಂದೆ ಮೌನ ಪ್ರತಿಭಟನೆಯನ್ನು ಆಯೋಜಿಸಿದರು. ಕಳೆದ ಎರಡು ತಿಂಗಳಿನಿಂದ ಮಣಿಪುರದಲ್ಲಿ (Manipura) ನಡೆದ ಸುದೀರ್ಘ ಕೋಮು ಹಿಂಸಾಚಾರದ

ಬಗ್ಗೆ ಸಂಪೂರ್ಣ ಹೇಳಿಕೆ ನೀಡುವಂತೆ ಒತ್ತಾಯಿಸುವುದು ಅವರ ಉದ್ದೇಶವಾಗಿತ್ತು. ನಂತರ ಸಂಜೆ, ಆಮ್ ಆದ್ಮಿ ಪಕ್ಷ (ಎಎಪಿ) (AAm Admi) ಮತ್ತು ಕಾಂಗ್ರೆಸ್ ಸದಸ್ಯರು, ‘ಭಾರತಕ್ಕಾಗಿ ಮಣಿಪುರ’ ಎಂಬ

ಸಂದೇಶವಿರುವ ಫಲಕಗಳನ್ನು ಹಿಡಿದು ರಾತ್ರಿ 11 ಗಂಟೆಗೆ ಮೌನ (Opposition protests outside Parliament) ಪ್ರತಿಭಟನೆ ನಡೆಸಿದರು.

ಘೋಷಣೆಗಳ ಮೂಲಕ ಪ್ರಧಾನಿ ವಿರುದ್ಧ ತಮ್ಮ ಅಸಮ್ಮತಿ ವ್ಯಕ್ತಪಡಿಸಿದರು. ಮಂಗಳವಾರ ಬೆಳಗ್ಗೆ ಸ್ವತಃ ಪ್ರಧಾನಿ ಮೋದಿಯವರು (Narendra Modi) ಮಣಿಪುರ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸಂಸತ್ತಿನ ಉಭಯ

ಸದನಗಳಲ್ಲಿ ‘ಸಮಗ್ರ ಹೇಳಿಕೆ ನೀಡುವಂತೆ ಕರೆ ನೀಡಿದರು. ಈ ವಿಷಯದ ಮೇಲೆ ಕೇಂದ್ರೀಕರಿಸಿದ ಮತ್ತು ಬೇಡಿಕೆಗಳ ಪರಿಣಾಮವಾಗಿ, ಮಾನ್ಸೂನ್ ಸಂಸತ್ತಿನ ಅಧಿವೇಶನದ ಮೂರನೇ ದಿನದಂದು ಸಂಸತ್ತಿನಲ್ಲಿ

ಯಾವುದೇ ಕಾರ್ಯಕಲಾಪ ನಡೆಯಲಿಲ್ಲ. .

ವಿಪಕ್ಷಗಳು ಚರ್ಚೆ ಬಯಸುತ್ತವೆ

ಮಣಿಪುರದ ಪ್ರಸ್ತುತ ವಿದ್ಯಮಾನಗಳ ಕುರಿತು ಚರ್ಚಿಸಲು ವಿರೋಧ ಪಕ್ಷದ ಹಲವಾರು ಸಂಸದರು ಅಧಿವೇಶನವನ್ನು ಮುಂದೂಡಿಕೆಗೆ ನೋಟಿಸ್ (Notice) ನೀಡಿದ್ದರು. ಎಲ್ಲಾ ಪಕ್ಷಗಳಿಗೆ ಯಾವುದೇ ಸಮಯದ

ನಿರ್ಬಂಧವಿಲ್ಲದೆ ಮಾತನಾಡಲು ಅವಕಾಶ ನೀಡುವ ಚರ್ಚೆಯನ್ನು ಪ್ರತಿಪಕ್ಷಗಳು ಬಯಸುತ್ತವೆ. ಆದರೆ ಇದೇ ವಿಷಯ ಕುರಿತು ಮುಂಗಾರು ಅಧಿವೇಶನ ಗುರುವಾರ ಪ್ರಾರಂಭವಾದಾಗಿನಿಂದ ಪ್ರತಿಭಟನೆ ನಡೆಯುತ್ತಿವೆ.

ಇದನ್ನೂ ಓದಿ : ಗ್ಯಾರಂಟಿಗಳ ಜಾರಿಯಿಂದ ಶಾಶ್ವತ ಯೋಜನೆಗಳಿಗಿಲ್ಲ ಅನುದಾನ, ಕೃಷಿ ಕ್ಷೇತ್ರ, ಜಲ ಸಂಪನ್ಮೂಲಕ್ಕಿಲ್ಲ ಸೇರಿದಂತೆ ಇನ್ನೂ ಹಲವಾರು : ಬಸವರಾಜ ಬೊಮ್ಮಾಯಿ

ಪ್ರತಿಪಕ್ಷಗಳು ಮಣಿಪುರ ಒಂದೇ ಅಲ್ಲ ಪ್ರಮುಖ ವಿಷಯಗಳ ಮೇಲೆ ಚರ್ಚೆ ಮಾಡದೇ ಓಡಿ ಹೋಗುತ್ತಿವೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ.ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಕೂಡ ಅದೇ ಆರೋಪ ಮಾಡಿವೆ.

ಕೇಂದ್ರ ಬಿಜೆಪಿಗೆ (BJP) ನೀವು ಚರ್ಚೆಗಳಿಂದ ಓಡಿ ಹೋಗುತ್ತೀರಾ ಎಂದು ತಿರುಗೇಟು ನೀಡಿವೆ.

ಬಿಜೆಪಿ ವಿರುದ್ಧ ಖರ್ಗೆ ಆರೋಪ

ಕೇಂದ್ರ ಬಿಜೆಪಿ ಸರ್ಕಾರವು ಸಂವೇದನಾಶೀಲವಾಗಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಅವರು ಆಪಾದಿಸಿದರು. ಸದನಕ್ಕೆ ಬಂದು ಪ್ರಧಾನಮಂತ್ರಿಗಳು

ಹೇಳಿಕೆ ನೀಡಬೇಕು ಎಂಬುದು ನಮ್ಮ ಬೇಡಿಕೆ ಆಗಿದೆ. ಆ ಹೇಳಿಕೆಯ ಬಗ್ಗೆ ನಾವು ಚರ್ಚೆಗೆ ಸಿದ್ಧರಿದ್ದೇವೆ, ನೀವು ಹೊರಗೆ ಮಾತನಾಡುತ್ತಿದ್ದೀರಿ ಎಂದು ದೂರಿದರು. ಸಂಸತ್ತಿಗೆ ನಿಮ್ಮ ಈ ನಡೆಯಿಂದ ಅವಮಾನ

ಮಾಡಿದಂತಾಗಿದೆ ಎಂದು, ಮಣಿಪುರ ಹಿಂಸಾಚಾರ ಇದೊಂದು ಗಂಭೀರ ವಿಷಯವಾಗಿದೆ ಎಂದು ಖರ್ಗೆ ಹೇಳಿದರು.

ಇದನ್ನೂ ಓದಿ : ಶಾಲಾ- ಕಾಲೇಜು ವಾಹನಗಳ ಟ್ಯಾಕ್ಸ್‌ ಏರಿಕೆ: ಕ್ಯಾಬ್‌ಗಳಿಗೆ ಜೀವಿತಾವಧಿ ಮೋಟಾರು ವಾಹನ ತೆರಿಗೆ

ಸರ್ಕಾರ ನಡೆಯ ಬಗ್ಗೆ ಬಿಜೆಪಿ ನಾಯಕ ಸುಧಾಂಶು ತ್ರಿವೇದಿ (Sudhanshu Trivedi) ಅವರು ಸಮರ್ಥಿಸಿಕೊಂಡರು. ಚರ್ಚೆಯಿಂದ ವಿರೋಧ ಪಕ್ಷದ ನಾಯಕರು ಓಡಿ ಹೋಗುತ್ತಿದ್ದಾರೆ ಎಂದು ಆರೋಪಿಸಿದರು.

ಮಹಿಳೆಯರ ಮೇಲಿನ ದೌರ್ಜನ್ಯದ ವಿಷಯಗಳ ಬಗ್ಗೆ ಇತರ ರಾಜ್ಯಗಳಲ್ಲಿ ವಿಪಕ್ಷಗಳು ಮೌನ ವಹಿಸುತ್ತಿರುವುದು ಏಕೆ? ಎಂದು ಅವರು ಪ್ರಶ್ನಿಸಿದರು.

ಸಾಮಾಜಿಕ ಮಾಧ್ಯಮದಲ್ಲಿ(Social Media) ಮಣಿಪುರದಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್

ಪಟೇಲ್ (Prahlad Singh Patel) ಅವರು ಪ್ರತಿಕ್ರಿಯಿಸಿ ಪ್ರಧಾನಮಂತ್ರಿಗಳು ಮುಂಗಾರು ಅಧಿವೇಶನಕ್ಕೆ ಮುನ್ನವೇ ಮಣಿಪುರದ ಸೂಕ್ಷ್ಮತೆ ಕುರಿತು ಮಾತನಾಡಿದ್ದಾರೆ. ಹೀಗಿದ್ದರು ಸದನದಲ್ಲಿ ಅವರ ನಡೆಯನ್ನು ತಪ್ಪು

ಎಂದು ಹೇಳುವ ಮೂಲಕ ಮಣಿಪುರ ಬಗ್ಗೆ ಚರ್ಚೆಯನ್ನು ಆರಂಭಿಸದಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ರಶ್ಮಿತಾ ಅನೀಶ್

Exit mobile version