Bengaluru: 10 ಲಕ್ಷದಿಂದ 15 ಲಕ್ಷದವರೆಗಿನ ಮಿತಿಯೊಳಗಿನ ಕ್ಯಾಬ್ಗಳಿಗೆ (Cab) ಮತ್ತು ಆಯ್ದ ಶ್ರೇಣಿಯ ಸರಕು ಸಾಗಣೆ ವಾಹನಗಳ (School vehicle tax increase) ಮೇಲೆ ಜೀವಿತಾವಧಿ
ಮೋಟಾರು ವಾಹನ ತೆರಿಗೆ ವಿಧಿಸುವ ಮತ್ತು ಶಾಲಾ ಬಸ್ಗಳ(School Bus) ಮೇಲಿನ ಮೋಟಾರು ವಾಹನ ತೆರಿಗೆಯನ್ನು ಹೆಚ್ಚಿಸುವ ಮಸೂದೆಗಳಿಗೆ ಗುರುವಾರ ವಿಧಾನಸಭೆ
(Vidhana Sabha) ಅನುಮೋದನೆ ನೀಡಿತು.
ಸಾರಿಗೆ ಸಚಿವ ರಾಮಲಿಂಗಾರ್ ರೆಡ್ಡಿ (Ramalingar Reddy) ಅವರು ಮಂಡಿಸಿದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಮಸೂದೆಗೆ ಜನಪ್ರತಿನಿಧಿಗಳ ಸಭೆ ಅನುಮೋದನೆ ನೀಡಿದೆ.
ಹಾಗಾಗಿ ಶಾಲಾ ಬಸ್ಗಳ ಮೇಲಿನ ತೆರಿಗೆಯನ್ನು (10ನೇ ತರಗತಿವರೆಗೆ) ಪ್ರತಿ ಚದರ ಮೀಟರ್ಗೆ (Square Meter) ವಿಧಿಸಲಾಗುತ್ತಿದ್ದ ತೆರಿಗೆಯನ್ನು ಇದೀಗ 20 ರಿಂದ 100 ರೂ.ಗೆ ಹೆಚ್ಚಿಸಲಾಗಿದೆ.
ಅಂದರೆ ಶಾಲಾ ಬಸ್ ವರ್ಷಕ್ಕೆ 2,000 ರೂ. ತೆರಿಗೆ ಪಾವತಿಸುತ್ತಿದ್ದರೆ ಇನ್ನು ಮುಂದೆ ಸುಮಾರು 10,000 ರೂ. ತೆರಿಗೆ (School vehicle tax increase) ಪಾವತಿಸಬೇಕಾಗುತ್ತದೆ.

ಅಂತೆಯೇ, 10 ನೇ ತರಗತಿಗಿಂತ ಹೆಚ್ಚಿನ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು (University) ಮತ್ತು ಇತರ ಶೈಕ್ಷಣಿಕ ಹಂತಗಳ ವಿದ್ಯಾರ್ಥಿಗಳು ಬಳಸುವ ಸಾರಿಗೆ ವಾಹನಗಳ ಮೇಲಿನ
ತೆರಿಗೆಯನ್ನು 80 ರೂ.ನಿಂದ 200 ರೂ.ಗೆ ಹೆಚ್ಚಿಸಲಾಗಿದೆ. ಅಂದರೆ ಈ ಮೊದಲು 8,000 ರೂ. ತೆರಿಗೆ ಪಾವತಿಸುತ್ತಿದ್ದಾರೆ ಎಂದು ಭಾವಿಸಿದರೆ ಇನ್ನು ಮುಂದೆ 20,000 ರೂ. ಭರಿಸಬೇಕಾಗಬಹುದು.
ಇದನ್ನೂ ಓದಿ : 8ನೇ ತರಗತಿಯಿಂದ ಕನ್ನಡ ಪಾಠ ಬೇಡ : ಪ್ರಾಂಶುಪಾಲರ ಬಳಿ ಕೆಲ ಪೋಷಕರ ಆಗ್ರಹ!
ಇದಲ್ಲದೆ, ತೂಕದ ಆಧಾರದ ಮೇಲೆ ವ್ಯಾನ್ಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲು ಮತ್ತು ಅವುಗಳ ಮೇಲೆ ಜೀವಿತಾವಧಿ ಮೋಟಾರು ವಾಹನ ತೆರಿಗೆ (Lifetime Motor Vehicle Tax)
ವಿಧಿಸಲು ಸರ್ಕಾರ ನಿರ್ಧರಿಸಿದೆ. ಸದ್ಯ ಈ ಜೀವಿತಾವಧಿ ತೆರಿಗೆಯನ್ನು 1.5 ಟನ್ನಿಂದ 5.5 ಟನ್ವರೆಗಿನ ವಾಹನಗಳಿಗೆ ವಿಧಿಸಲಾಗುತ್ತಿದೆ. ಆದರೆ ಇನ್ನು ಮುಂದೆ 5.5 ಟನ್ನಿಂದ 7.5 ಟನ್ವರೆಗೆ, 7.5ರಿಂದ 9.5
ಟನ್ವರೆಗೆ ಹಾಗೂ 9.5ರಿಂದ 12 ಟನ್ವರೆಗಿನ ತೂಕದ ವಾಹನಗಳಿಗೂ ಕೂಡ ಜೀವಿತಾವಧಿ ತೆರಿಗೆ ಪಾವತಿಸಬೇಕಾಗುತ್ತದೆ.
ಈ ನಿರ್ದಿಷ್ಟ ಜೀವಿತಾವಧಿ ಶುಲ್ಕವು ಸರಕು ಸಾಗಣೆ ವಾಹನದ ಬಳಕೆ ವರ್ಷ ಆಧರಿಸಿ ನಿಗದಿಯಾಗಲಿದೆ.

ಅದೇ ರೀತಿ ವಿಧೇಯಕದಲ್ಲಿ ರಾಜ್ಯದಲ್ಲಿ ನೋಂದಣಿಯಾಗುವ ಮೋಟಾರು ಕ್ಯಾಬ್ಗಳಿಗೂ (ನ್ಯಾಷನಲ್ ಪರ್ಮಿಟ್ ಹೊಂದಿರುವುದನ್ನು ಹೊರತುಪಡಿಸಿ ಮತ್ತು ರಾಜ್ಯದ ಹೊರಗೆ ನೋಂದಣಿಯಾಗಿರುವ
ವಾಹನ ಹೊರತುಪಡಿಸಿ ) ಜೀವಿತಾವಧಿ ತೆರಿಗೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಸದ್ಯ ಈ ಶೇ. 15ರಷ್ಟು ಜೀವಿತಾವಧಿ ತೆರಿಗೆಯನ್ನು 15 ಲಕ್ಷ ರೂ. ಮೀರಿದ ವಾಹನಗಳಿಗೆ ವಿಧಿಸಲಾಗುತ್ತಿದೆ.ಆದರೆ ಇನ್ನು ಮುಂದೆ ಶೇ. 9ರಷ್ಟು ಜೀವಿತಾವಧಿ ತೆರಿಗೆಯನ್ನು 10 ಲಕ್ಷ ರೂ. ನಿಂದ
15 ಲಕ್ಷ ರೂ. ಮಿತಿಯೊಳಗಿನ ಕ್ಯಾಬ್ಗಳಿಗೂ ವಿಧಿಸಲಾಗುತ್ತದೆ. ಈಗಾಗಲೇ ಬಳಕೆಯಲ್ಲಿರುವ ವಾಹನಗಳಿಗೂ ಕೂಡ ಇದು ಅನ್ವಯ ಆಗುತ್ತದೆ.
ರಶ್ಮಿತಾ ಅನೀಶ್