ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಕಂಪನಿಗೆ ಕರ್ನಾಟಕದಲ್ಲಿ ಭಾರೀ ವಿರೋಧ..!

Bengaluru : ಶ್ರೀಲಂಕಾದ ಮಾಜಿ ಕ್ರಿಕೆಟಿಗ್ ಮುತ್ತಯ್ಯ ಮುರಳೀಧರನ್ (Opposition to MuttiahMuralidharan Company) ಅವರು ಕರ್ನಾಟಕದ ಧಾರವಾಡ

ಜಿಲ್ಲೆಯಲ್ಲಿ 900 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಮುತ್ತಯ್ಯ ಮುರಳೀಧರನ್ ಅವರ ಈ ಹೂಡಿಕೆಗೆ ಈಗಾಗಲೇ ರಾಜ್ಯ ಸರ್ಕಾರ ಒಪ್ಪಿಗೆಯನ್ನು ನೀಡಿದೆ.

ಧಾರವಾಡ (Dharwad) ಜಿಲ್ಲೆಯಲ್ಲಿ ತಮ್ಮದೇ ತಂಪು ಪಾನೀಯ ಕೈಗಾರಿಕೆ ಆರಂಭಿಸುವುದಕ್ಕೆ ಅವರು ಈಗಾಗಲೇ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿರುವ ಸುದ್ದಿ ಎಲ್ಲರಿಗೂ ತಿಳಿದಿದೆ.

ಆದರೆ ಇದೀಗ ಮುತ್ತಯ್ಯ ಮುರಳೀಧರನ್ ಅವರ ಕಂಪನಿಗೆ ಕೆಲ ಪರಿಸರವಾದಿಗಳು (Opposition to MuttiahMuralidharan Company) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮುತ್ತಯ್ಯ ಮುರಳೀಧರನ್ ಅವರ ಈಗಾಗಲೇ ಸರ್ಕಾರದ ಒಪ್ಪಿಗೆಯನ್ನು ಪಡೆದುಕೊಂಡು, ಧಾರವಾಡ ಜಿಲ್ಲೆಯ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ತಂಪು ಪಾನೀಯ ಕಂಪನಿ ಆರಂಭಕ್ಕೆ

ಮುಂದಾಗಿದ್ದಾರೆ. ಆದರೆ ಇದಕ್ಕೆ ಖ್ಯಾತ ಪರಿಸರವಾದಿ ಸುರೇಶ್ ಹೆಬ್ಳೀಕರ್ (Suresh Hebleekar) ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸುರೇಶ್ ಹೆಬ್ಳೀಕರ್ ಅವರು,

ತಂಪು ಪಾನೀಯ ಕಂಪನಿಗೆ ಪ್ರತಿ ದಿನ 20 ಲಕ್ಷಕ್ಕೂ ಹೆಚ್ಚು ಲೀಟರ್ ನೀರು ಪೂರೈಕೆ ಮಾಡಬೇಕಿದೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಈಗಲೇ ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಿರುವಾಗ

ಈ ಕಂಪನಿಗೆ ಪ್ರತಿದಿನ 20 ಲಕ್ಷ ಲೀಟರ್ ನೀರು ಪೂರೈಕೆ ಮಾಡುವುದರಿಂದ ಜಿಲ್ಲೆಯ ಜನತೆ ನೀರಿಗಾಗಿ ಪರಿತಪಿಸುವಂತಾಗುತ್ತದೆ ಎಂದಿದ್ದಾರೆ.

ಸಕ್ಕರೆನಾಡು ಗೆಲ್ಲಲು ಸಿ.ಎಸ್.ಪುಟ್ಟರಾಜುವಿಗೆ ಗಾಳ ಹಾಕಿದ ಕೈ ನಾಯಕರು..!

ಇನ್ನು ಈ ಕುರಿತು ಮಾತನಾಡಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ (Santosh Lad) , ಮುತ್ತಯ್ಯ ಮುರಳೀಧರನ್ ಅವರು ಕೈಗಾರಿಕೆ ಆರಂಭಿಸುತ್ತಿರುವ ವಿಷಯ

ಗೊತ್ತಾಗಿದೆ. ಅಂತಹ ಕೈಗಾರಿಕೆಗಳನ್ನು ನಾವು ಸ್ವಾಗತಿಸಬೇಕಾಗುತ್ತದೆ. ಯಾರು ಇದಕ್ಕೆ ವಿರೋಧ ಮಾಡುತ್ತಿದ್ದಾರೆ ಎಂಬುದನ್ನು ಪರಿಶೀಲನೆ ನಡೆಸಿ, ಅವರೊಂದಿಗೆ ಮಾತನಾಡುತ್ತೇನೆ.

ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೈಗಾರಿಕೆಗಳನ್ನು ನಾವು ಸ್ಥಾಪಿಸುತ್ತೇವೆ. ಈ ಕಂಪನಿಯಿಂದ ಪರಿಸರಕ್ಕೆ ಯಾವುದೇ ತೊಂದರೆ ಇಲ್ಲ. ನೀರಿನ ಸಮಸ್ಯೆ ಉಂಟಾದರೆ

ಅದನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮಗಳನ್ನು (Opposition to MuttiahMuralidharan Company) ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಒಟ್ಟಾರೆಯಾಗಿ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರುಳೀಧರನ್ ಆರಂಭಿಸಲು ಉದ್ದೇಶಿಸಿರುವ ಈ ಕಂಪನಿಗೆ ಇದೀಗ ಹೊಸ ಸವಾಲು ಎದುರಾಗಿದ್ದು, ರಾಜ್ಯ ಸರ್ಕಾರ ಇದನ್ನು ಯಾವ ರೀತಿ

ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version