ನಮ್ಮದು ಭುಜಕ್ಕೆ ಭುಜ ತಾಗಿಸಿ ನಡೆಯುವ ಡೆಮಾಕ್ರಟಿಕ್ ಸಂಸ್ಕೃತಿಯ ಪಕ್ಷ : ಸಿದ್ದರಾಮಯ್ಯ

Congress

Bengaluru : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರು ನಿನ್ನೆ ‘ಸಿದ್ದರಾಮಯ್ಯನವರಿಗೆ (Siddaramaiah) ಮೋದಿಯವರ ಕಾಲಿನಡಿ ಕುಳಿತುಕೊಳ್ಳುವ ಯೋಗ್ಯತೆಯೂ ಇಲ್ಲ’ ಅಂದಿದ್ದಾರೆ.

ಅಂಥ ಗುಲಾಮಗಿರಿಯ ಯೋಗ್ಯತೆ ಯಡಿಯೂರಪ್ಪನಂಥವರಿಗೆ ಇರಲಿ, ನನ್ನಂಥವರಿಗೆ ಅದು ಹೊಂದಾಣಿಕೆಯಾಗುವುದಿಲ್ಲ. ನಮ್ಮದು ಭುಜಕ್ಕೆ ಭುಜ ತಾಗಿಸಿ ನಡೆಯುವ ಡೆಮಾಕ್ರಟಿಕ್ ಸಂಸ್ಕೃತಿಯ ಪಕ್ಷ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ (Tweet) ಮಾಡಿರುವ ಅವರು, ನಾನು ಅಂಕಿ ಅಂಶಗಳ ಮೂಲಕ ಚರ್ಚೆಗೆ ಸಿದ್ಧನಿದ್ದೇನೆ.

ಬಿಜೆಪಿಯವರೂ (BJP) ಅಂಕಿ ಅಂಶಗಳೊಂದಿಗೆ ಚರ್ಚೆಗೆ ಬರಲಿ. ಅದು ಬಿಟ್ಟು ಉತ್ತರಕುಮಾರರಂತೆ, ವಿದೂಷಕರಂತೆ ವರ್ತಿಸುವುದನ್ನು ನಿಲ್ಲಿಸಿ.

ನಿಮ್ಮ ಸುಳ್ಳು ಭಾಷಣಗಳಿಗೆ ಮರುಳಾಗಿ ಜನ ಚಪ್ಪಾಳೆ ತಟ್ಟುವ ಕಾಲ ಮುಗಿದು ಹೋಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ದಲಿತ, ಹಿಂದುಳಿದ ವರ್ಗಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1,471 ವಿದ್ಯಾರ್ಥಿನಿಲಯ, ವಸತಿ ಶಾಲೆಗಳನ್ನು ಕಟ್ಟಿದ್ದೆವು.

ಇದನ್ನೂ ಓದಿ : https://vijayatimes.com/kejrival-slams-gst-hike/

15 ಲಕ್ಷ ಮನೆಗಳನ್ನು ನಿರ್ಮಿಸಿದ್ದೆವು. ಅಸಂಖ್ಯಾತರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಿ ವಿದ್ಯುತ್ ಸಂಪರ್ಕ ನೀಡಿದ್ದೆವು. ಬಿಜೆಪಿ ಸರ್ಕಾರದ ಕೊಡುಗೆ ಏನು? ದಲಿತ ಮತ್ತು ಹಿಂದುಳಿದ ವರ್ಗಗಳ ಮಕ್ಕಳು ವಿದೇಶಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಿ ಬರಲು ಅರಿವು ಎಂಬ ಯೋಜನೆ ತಂದಿದ್ದೆವು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಈ ಯೋಜನೆಯಡಿ ದಲಿತ ಮತ್ತು ಹಿಂದುಳಿದ ವರ್ಗಗಳ ಎಷ್ಟು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದೀರಿ? ಎಂಬ ಅಂಕಿ ಅಂಶ ಮಂಡಿಸಿ.

ನಮ್ಮ ಸರ್ಕಾರದ 5 ವರ್ಷಗಳ ಆಡಳಿತದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಒಂದರಿಂದಲೆ 10,500 ಕೋಟಿ ಖರ್ಚು ಮಾಡಿದ್ದೆವು.

ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ಸರ್ಕಾರ ಮಾರ್ಚ್ ವರೆಗೆ ಖರ್ಚು ಮಾಡಿದ್ದು, ಕೇವಲ 5,700 ಕೋಟಿ. ಇಷ್ಟು ಸಾಕ? ಎಂದು ಪ್ರಶ್ನಿಸಿದ್ದಾರೆ. ಮೀಸಲಾತಿಯನ್ನು ವಿರೋಧಿಸಿದವರು, ದಲಿತ-

ಹಿಂದುಳಿದ ಸಮುದಾಯದ ಮಕ್ಕಳ ವಿದ್ಯಾರ್ಥಿ ವೇತನ ನಿಲ್ಲಿಸಿದವರು, ಈ ಸಮುದಾಯಗಳ ಜನರಿಗೆ ಮನೆಗಳನ್ನು ನೀಡದವರು, ಉದ್ಯೋಗ ನೀಡದವರು, ಅನ್ನಭಾಗ್ಯದ ಅಕ್ಕಿಗೆ ಕತ್ತರಿ ಹಾಕಿದ ಬಿಜೆಪಿಯವರು ಅದು ಹೇಗೆ ಶೋಷಿತರ ಪರವಾಗುತ್ತಾರೆ?

ಎಸ್.ಸಿ/ಎಸ್.ಟಿ ಸಮುದಾಯಕ್ಕೆ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಜಾರಿಗೆ ತಂದವರು ನಾವು. ಬಿಜೆಪಿ ಸರ್ಕಾರ 2 ಕೋಟಿ ವರೆಗಿನ ಕಾಮಗಾರಿಗಳಿಗೆ ಟೆಂಡರ್ ಕೂಡ ಕರೆಯದೆ ಕೆಆರ್ಡಿಸಿಎಲ್ ನವರಿಗೆ ವಹಿಸುವ ನೀತಿ ತಂದಿದೆ. ಇದರಿಂದ ದಲಿತ ಸಮುದಾಯಗಳ ಆರ್ಥಿಕ ಸಬಲೀಕರಣ ಸಾಧ್ಯವೇ?

ಇದನ್ನೂ ಓದಿ : https://vijayatimes.com/banned-laws-in-other-countries/

2013 ರಿಂದ ಈಚೆಗೆ ರಾಜ್ಯದಲ್ಲಿ ನಾವು ಎಸ್ಸಿಪಿ/ ಟಿಎಸ್ಪಿ ಕಾಯ್ದೆಯನ್ನು ಜಾರಿಗೆ ತಂದು ಶೋಷಿತ ಸಮುದಾಯಗಳಿಗೆ ಅನುದಾನವನ್ನು ಕಾದಿರಿಸುವಂತೆ ಮಾಡಿದರೆ,

https://youtu.be/kOYVehsYtxA

ಬಿಜೆಪಿ ಸರ್ಕಾರ ಈ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಖರ್ಚು ಮಾಡಿ ತಳ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ದೇಶದಲ್ಲಿ ಸಂವಿಧಾನವನ್ನು ಜಾರಿಗೆ ತಂದು ದಲಿತ- ದಮನಿತರು ಹಾಗೂ ಸರ್ವಜನಾಂಗದ ಏಳಿಗೆಗೆ ಕಾರಣರಾಗಿದ್ದು ಕಾಂಗ್ರೆಸ್ ಪಕ್ಷ ಎಂಬುದನ್ನು ಮರೆಯಬಾರದು. ನಾವು ಅಧಿಕಾರಕ್ಕೆ ಬಂದದ್ದೇ ಸಂವಿಧಾನ ಬದಲಾಯಿಸಲು ಎಂದವರ ಬಗ್ಗೆ ಜನ ಎಚ್ಚರಿಕೆಯಿಂದ ಇರಬೇಕು.

ಬಿಜೆಪಿಯವರು ತಾವು ನಡೆಸುತ್ತಿರುವ ‘ಜನಸಂಕಲ್ಪ ಯಾತ್ರೆ’ ಎಂಬ ಹೆಸರಿನ ಬದಲು ‘ಜನರಿಗೆ ಸುಳ್ಳು ಹೇಳುವ ಯಾತ್ರೆ’ ಎಂದು ನಾಮಕರಣ ಮಾಡುವುದು ಒಳ್ಳೆಯದು.

ಬಿಜೆಪಿ ತನ್ನ ಯಾತ್ರೆಯನ್ನು ನನ್ನ ವಿರುದ್ಧ ಸುಳ್ಳು ಹೇಳುವುದಕ್ಕಷ್ಟೇ ಸೀಮಿತ ಮಾಡಿಕೊಂಡಂತಿದೆ ಎಂದು ಟೀಕಿಸಿದ್ದಾರೆ.

Exit mobile version