ಸೌದಿಯ ಮದೀನಾದಲ್ಲಿ ಪಾಕ್ ಪ್ರಧಾನಿಯನ್ನು ಕಂಡು ‘ಚೋರ್ ಚೋರ್’ ಘೋಷಣೆ!

shebaz sharif

ಸೌದಿ ಅರೇಬಿಯಾದ(Saudi Arabia) ಮದೀನಾಕ್ಕೆ(Madina) ಪಾಕಿಸ್ತಾನದ(Pakistan) ನೂತನ ಪ್ರಧಾನಿ(Primeminister) ಶೆಹಬಾಜ್ ಷರೀಪ್(Shebaz Sharif) ಭೇಟಿ ನೀಡಿದ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಕೆಲವು ನಾಗರಕರು ಪಾಕ್ ಪ್ರಧಾನಿಯನ್ನು ನೋಡಿ ‘ಚೋರ್..ಚೋರ್..ಚೋರ್..’ (ಕಳ್ಳ..ಕಳ್ಳ..ಕಳ್ಳ..) ಮತ್ತು ‘ಬೇಕಾರಿ..’ (ನಿರ್ಗತಿಕ) ಎಂದು ಘೋಷಣೆ ಕೂಗಿದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗ್ತಿದೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಪ್ ನೇತೃತ್ವದ ತಂಡವೊಂದು, ಸೌದಿ ಅರೇಬಿಯಾದ ಮದೀನಾದಲ್ಲಿರುವ ಮಸ್ಜಿದ್-ಎ-ನಬವಿಯನ್ನು ಪ್ರವೇಶ ಮಾಡುತ್ತಿದ್ದಂತೆ ರಸ್ತೆಯಲ್ಲಿ ಹೋಗುತ್ತಿದ್ದ ಕೆಲವರು ಜೋರು ಧ್ವನಿಯಲ್ಲಿ ‘ಚೋರ್ ಚೋರ್’ ಎಂದು ಘೋಷಣೆ ಕೂಗಿದ್ದಾರೆ. ಇನ್ನು ಕೆಲವರು ‘ಬೇಕಾರಿ’ (ನಿರ್ಗತಿಕ) ಎಂದು ಹೀಯಾಳಿಸಿದ್ದಾರೆ. ಈ ವಿಚಿತ್ರ ಸ್ವಾಗತದ ವಿಡಿಯೋವನ್ನು ಸಾಮಾಜಿಕ ಮಾದ್ಯಮವೊಂದು ಪ್ರಕಟಿಸಿದೆ. ಇದೀಗ ಈ ವಿಡಿಯೋ ಆಧಾರದ ಮೇಲೆ ಮದೀನಾದ ಪಾವಿತ್ರ್ಯತೆ ಹಾಳು ಮಾಡಿದ ಆರೋಪದ ಮೇಲೆ ಕೆಲವರನ್ನು ವಶಕ್ಕೆ ಪಡೆಯಲಾಗಿದೆ.


ಇನ್ನು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಪ್ ನಿಯೋಗದಲ್ಲಿ ಮಾಹಿತಿ ಸಚಿವ ಮರಿಯಮ್ ಔರಂಗಜೇಬ್, ರಾಷ್ಟ್ರೀಯ ಅಸೆಂಬ್ಲಿ ಸದಸ್ಯ ಶಹಜೈನ್ ಬುಕ್ತಿ ಕೂಡ ಇದ್ದರು. ಈ ಪ್ರತಿಭಟನೆಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕಾರಣ ಎಂದು ಸಚಿವ ಮರಿಯಮ್ ಔರಂಗಜೇಬ್ ಪರೋಕ್ಷವಾಗಿ ದೂಷಿಸಿದ್ದಾರೆ. ಇನ್ನು ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಶೆಹಬಾಜ್ ಷರೀಪ್ ಇದೇ ಮೊದಲ ಬಾರಿ ಸೌದಿ ಅರೇಬಿಯಾಕ್ಕೆ ಮೂರು ದಿನಗಳ ಅಧಿಕೃತ ಭೇಟಿಯನ್ನು ಕೈಕೊಂಡಿದ್ದಾರೆ. ಈ ವೇಳೆ ಘಟನೆ ನಡೆದಿದೆ.

Exit mobile version