New Delhi :ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್‌ನ (Pakistan about Worldcup Schedule) ಅಧಿಕೃತ ವೇಳಾಪಟ್ಟಿ ಗೊಂದಲದ
ಮೂಲವಾಗಿದೆ ಹಾಗೂ ಈ ಗೊಂದಲವು ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.ಈಗಾಗಲೇ ಪಾಕಿಸ್ತಾನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium)
ಬಗ್ಗೆ ಗೊಂದಲ ಉಂಟು ಮಾಡುವುದರ ಜೊತೆಗೆ ಇತರ ಕ್ರೀಡಾಂಗಣಗಳ ವೇಳಾಪಟ್ಟಿಯ ಬಗ್ಗೆ ಊಹಾಪೋಹ ಮಾಡುವ ಮೂಲಕ ಪಾಕಿಸ್ತಾನ ಗೊಂದಲವನ್ನು ಹೆಚ್ಚಿಸಿದೆ ಎಂದು ವರದಿಯಾಗಿದೆ.

ಹೀಗಾಗಿ ಟೂರ್ನಿಯ(Tourney) ತಾತ್ಕಾಲಿಕ ವೇಳಾಪಟ್ಟಿ ಲಭ್ಯವಿದ್ದರೂ, ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲು ಐಸಿಸಿ (ICC) ಮತ್ತು ಬಿಸಿಸಿಐ (BCCI) ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳಬಹುದು.
1 ವರ್ಷ ಮೊದಲೇ 2019ರ ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಂಡಿತ್ತು ಎಂಬುದು (Pakistan about Worldcup Schedule) ಗಮನಿಸಬೇಕಾದ ಸಂಗತಿ.
ಇದನ್ನೂ ಓದಿ : 2026ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಆಡಲ್ಲ : ಅಭಿಮಾನಿಗಳಿಗೆ ಶಾಕ್ ಕೊಟ್ಟ ಲಿಯೋನೆಲ್ ಮೆಸ್ಸಿ..!
ಕಳೆದ ವಾರದಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ ಟೂರ್ನಿಯ ತಾತ್ಕಾಲಿಕ ವೇಳಾಪಟ್ಟಿ ಅನ್ನು ರೂಪಿಸಿದ್ದು ಮಾತ್ರವಲ್ಲದೆ ಅದನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ
(ಐಸಿಸಿ) ಸಲ್ಲಿಸಿದೆ. ಹೆಚ್ಚುವರಿಯಾಗಿ, ಟೂರ್ನಿಯಲ್ಲಿ ಭಾಗವಹಿಸುವ ರಾಷ್ಟ್ರಗಳಿಂದ ಸಲಹೆಗಳನ್ನು ಆಹ್ವಾನಿಸಿದೆ. ಆದರೆ ಪಾಕ್ (Pakistan) ಮತ್ತು ಆಸ್ಟ್ರೇಲಿಯಾ (Australia) ತಂಡದ ನಡುವೆ ಇರುವ ಪಂದ್ಯವು
ಬೆಂಗಳೂರಿನಲ್ಲಿ ನಡೆಯಲಿರುವ ಕಾರಣ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) (Pakistan Cricket Board)ಪ್ರಸ್ತಾವಿತ ವೇಳಾಪಟ್ಟಿಯನ್ನು ಒಪ್ಪಲು ನಿರಾಕರಿಸಿತು.ಅಷ್ಟೇ ಅಲ್ಲದೆ ಚೆನ್ನೈನಲ್ಲಿ ನಡೆಯಬೇಕಿದ್ದ
ತನ್ನ ಮತ್ತು ಅಫ್ಘಾನಿಸ್ತಾನದ ವಿರುದ್ಧದ ಪಂದ್ಯಗಳನ್ನು ಸ್ಥಳಾಂತರಿಸಲು ಮನವಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನ ಏಕೆ ಹಿಂದೇಟು ಹಾಕುತ್ತಿದೆ? :
ಅಹಮದಾಬಾದ್‌ನಲ್ಲಿ (Ahmedabad) ನಡೆಯಬೇಕಿದ್ದ ಭಾರತ ವಿರುದ್ಧದ ಪಂದ್ಯವನ್ನು ಭದ್ರತಾ ದೃಷ್ಟಿಯಿಂದ ಮರು ನಿಗದಿಪಡಿಸುವಂತೆ ಪಿಸಿಬಿ ಮನವಿ ಮಾಡಿದೆ. ಆದರೆ ಬೆಂಗಳೂರು ಮತ್ತು ಚೆನ್ನೈ ವಿಚಾರದಲ್ಲಿ ಬೇರೆ ಬೇರೆ ಕಾರಣಗಳನ್ನು ನೀಡಿವೆ.
ಇದನ್ನೂ ಓದಿ : 2026ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಆಡಲ್ಲ : ಅಭಿಮಾನಿಗಳಿಗೆ ಶಾಕ್ ಕೊಟ್ಟ ಲಿಯೋನೆಲ್ ಮೆಸ್ಸಿ..!
ಬ್ಯಾಟಿಂಗ್ ಸ್ನೇಹಿಯಾಗಿರುವ ಬೆಂಗಳೂರು (Bengaluru) ಮೈದಾನದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುವುದು ಸವಾಲಾಗಲಿದೆ ಎಂಬ ಆತಂಕ ಪಾಕ್ ತಂಡವನ್ನು ಕಾಡುತ್ತಿದೆ.. ಅಂತೆಯೇ ಅಫ್ಘಾನಿಸ್ತಾನ(Afganistan)
ತಂಡದಲ್ಲಿ ಬಲಿಷ್ಠ ಆಟಗಾರರಿದ್ದು, ಚೆನ್ನೈನ (Chennai) ಸ್ಪಿನ್ ಪಿಚ್ನಲ್ಲಿ ಆಡುವುದು ಹೇಗೆ ಎಂಬ ಭಯ ಪಾಕ್‌ಗೆ ಇದೆ. ಅವರ ವಿರುದ್ಧ ಏನು ಮಾಡಬೇಕೆಂದು ಪಾಕಿಸ್ತಾನ ಭಯಪಡುತ್ತಿದೆ.
ಇದೇ ಕಾರಣಕ್ಕೆ ಎರಡು ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಿಸಿಸಿಐಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಪಾಕ್ ಆಯ್ಕೆ ಸಮಿತಿಯು ಈಗಿರುವ ವೇಳಾಪಟ್ಟಿಗೆ ಒಪ್ಪಿಗೆ ಸೂಚಿಸದಂತೆ ಪಿಸಿಬಿಗೆ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಪಿಸಿಬಿ ಪಂದ್ಯಗಳನ್ನು ಸ್ಥಳಾಂತರಿಸಲು ಮನವಿ ಮಾಡಿದ್ದರೂ ಬಿಸಿಸಿಐ
ಇದಕ್ಕೆ ಒಪ್ಪಿಗೆ ಸೂಚಿಸುವ ಸಾಧ್ಯತೆ ತುಂಬಾ ಕಡಿಮೆ.ಏಕೆಂದರೆ ಬಲವಾದ ಕಾರಣಗಳಿದ್ದರೆ ಮಾತ್ರ ಆಟದ ಬದಲಾವಣೆ ಸಾಧ್ಯ ಎಂದು ಬಿಸಿಸಿಐ ಮೂಲಗಳು ಪ್ರತಿಕ್ರಿಯಿಸಿದ್ದು, ಅವರ ಪ್ರಾಬಲ್ಯ ಅಥವಾ
ದೌರ್ಬಲ್ಯದ ಕಾರಣ ನೀಡಿ ಪಂದ್ಯ ಸ್ಥಳಾಂತರಿಸಲು ಮನವಿ ಮಾಡಿದರೆ ಒಪ್ಪಲು ಸಾಧ್ಯವಿಲ್ಲ ಎಂದು ಪಿಸಿಬಿಯ ಆಕ್ಷೇಪದ ಬಗ್ಗೆ ಬಿಸಿಸಿಐ ಮೂಲಗಳು ಪ್ರತಿಕ್ರಿಯಿಸಿದೆ ಎಂದು ತಿಳಿದುಬಂದಿದೆ.
ಮುಂದಿನ ವಾರ ಪಟ್ಟಿ ಅಧಿಕೃತ ಬಿಡುಗಡೆ?
ಮುಂದಿನ ವಾರವು ಟೂರ್ನಿಯ ಅಧಿಕೃತ ವೇಳಾಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಪಿಸಿಬಿಯು ಈಗಿರುವ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಿಸಿದ ಹೊರತಾಗಿಯೂ ಈಗಿರುವ ಪಟ್ಟಿಯಲ್ಲಿ ಯಾವುದೇ
ಬದಲಾವಣೆ ಮಾಡುವ ಸಾಧ್ಯತೆಯಿಲ್ಲ ಎಂದು ಬಿಸಿಸಿಐ ಹೇಳುತ್ತಿದೆ. ತಾತ್ಕಾಲಿಕ ವೇಳಾಪಟ್ಟಿಯನ್ನೇ ಹೀಗಾಗಿ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಹೆಚ್ಚು. ತಾತ್ಕಾಲಿಕ ಪಟ್ಟಿ ಪ್ರಕಾರ ಇಂಗ್ಲೆಂಡ್ (England)
ಹಾಗೂ ಆಸ್ಪ್ರೇಲಿಯಾ ಅ.5ರಂದು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.ಅ.8ರಂದು ಆಸ್ಪ್ರೇಲಿಯಾ ವಿರುದ್ಧ ಭಾರತ ಆರಂಭಿಕ ಪಂದ್ಯವನ್ನು ಚೆನ್ನೈನಲ್ಲಿ ಆಡಬೇಕಿದೆ.
ರಶ್ಮಿತಾ ಅನೀಶ್