ವಿಶ್ವಕಪ್‌ ಅಧಿಕೃತ ವೇಳಾ​ಪ​ಟ್ಟಿಗೆ ಪಾಕ್‌ ತಗಾ​ದೆ? ಬೆಂಗಳೂರು ಮತ್ತು ಚೆನ್ನೈನಲ್ಲೂ ಆಡಲು ಪಾಕ್ ಹಿಂದೇಟು

New Delhi :ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಬಹು​ನಿ​ರೀ​ಕ್ಷಿತ ಐಸಿಸಿ ಏಕ​ದಿನ ವಿಶ್ವಕಪ್‌ನ (Pakistan about Worldcup Schedule) ಅಧಿಕೃತ ವೇಳಾಪಟ್ಟಿ ಗೊಂದಲದ

ಮೂಲವಾಗಿದೆ ಹಾಗೂ ಈ ಗೊಂದಲವು ಸದ್ಯಕ್ಕೆ ಮುಗಿ​ಯುವ ಲಕ್ಷ​ಣ​ಗಳು ಕಾಣು​ತ್ತಿಲ್ಲ.ಈಗಾಗಲೇ ಪಾಕಿಸ್ತಾನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium)

ಬಗ್ಗೆ ಗೊಂದಲ ಉಂಟು ಮಾಡುವುದರ ಜೊತೆಗೆ ಇತರ ಕ್ರೀಡಾಂಗಣಗಳ ವೇಳಾಪಟ್ಟಿಯ ಬಗ್ಗೆ ಊಹಾಪೋಹ ಮಾಡುವ ಮೂಲಕ ಪಾಕಿಸ್ತಾನ ಗೊಂದಲವನ್ನು ಹೆಚ್ಚಿಸಿದೆ ಎಂದು ವರ​ದಿ​ಯಾ​ಗಿ​ದೆ.

ಹೀಗಾಗಿ ಟೂರ್ನಿಯ(Tourney) ತಾತ್ಕಾಲಿಕ ವೇಳಾಪಟ್ಟಿ ಲಭ್ಯವಿದ್ದರೂ, ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲು ಐಸಿಸಿ (ICC) ಮತ್ತು ಬಿಸಿ​ಸಿಐ (BCCI) ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳಬಹುದು.

1 ವರ್ಷ ಮೊದ​ಲೇ 2019ರ ವಿಶ್ವ​ಕಪ್‌ ವೇಳಾ​ಪಟ್ಟಿ ಪ್ರಕ​ಟ​ಗೊಂಡಿ​ತ್ತು ಎಂಬುದು (Pakistan about Worldcup Schedule) ಗಮನಿಸಬೇಕಾದ ಸಂಗತಿ.

ಇದನ್ನೂ ಓದಿ : 2026ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಆಡಲ್ಲ : ಅಭಿಮಾನಿಗಳಿಗೆ ಶಾಕ್ ಕೊಟ್ಟ ಲಿಯೋನೆಲ್ ಮೆಸ್ಸಿ..!

ಕಳೆದ ವಾರದಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ ಟೂರ್ನಿಯ ತಾತ್ಕಾಲಿಕ ವೇಳಾ​ಪ​ಟ್ಟಿ​ ಅನ್ನು ರೂಪಿಸಿದ್ದು ಮಾತ್ರವಲ್ಲದೆ ಅದನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ

(ಐಸಿಸಿ) ಸಲ್ಲಿಸಿದೆ. ಹೆಚ್ಚುವರಿಯಾಗಿ, ಟೂರ್ನಿ​ಯಲ್ಲಿ ಭಾಗವಹಿಸುವ ರಾಷ್ಟ್ರಗಳಿಂದ ಸಲಹೆಗಳನ್ನು ಆಹ್ವಾನಿಸಿದೆ. ಆದರೆ ಪಾಕ್ (Pakistan) ಮತ್ತು ಆಸ್ಟ್ರೇಲಿಯಾ (Australia) ತಂಡದ ನಡುವೆ ಇರುವ ಪಂದ್ಯವು

ಬೆಂಗಳೂರಿನಲ್ಲಿ ನಡೆಯಲಿರುವ ಕಾರಣ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) (Pakistan Cricket Board)ಪ್ರಸ್ತಾವಿತ ವೇಳಾಪಟ್ಟಿಯನ್ನು ಒಪ್ಪಲು ನಿರಾಕರಿಸಿತು.ಅಷ್ಟೇ ಅಲ್ಲದೆ ಚೆನ್ನೈನಲ್ಲಿ ನಡೆಯಬೇಕಿದ್ದ

ತನ್ನ ಮತ್ತು ಅಫ್ಘಾನಿಸ್ತಾನದ ವಿರುದ್ಧದ ಪಂದ್ಯಗಳನ್ನು ಸ್ಥಳಾಂತರಿಸಲು ಮನವಿ ಮಾಡಲಾಗಿದೆ ಎಂದು ಹೇಳ​ಲಾ​ಗು​ತ್ತಿದೆ.

ಪಾಕಿಸ್ತಾನ ಏಕೆ ಹಿಂದೇಟು ಹಾಕುತ್ತಿದೆ? :

ಅಹಮದಾಬಾದ್‌ನಲ್ಲಿ (Ahmedabad) ನಡೆಯಬೇಕಿದ್ದ ಭಾರತ ವಿರುದ್ಧದ ಪಂದ್ಯವನ್ನು ಭದ್ರತಾ ದೃಷ್ಟಿಯಿಂದ ಮರು ನಿಗದಿಪಡಿಸುವಂತೆ ಪಿಸಿಬಿ ಮನವಿ ಮಾಡಿದೆ. ಆದರೆ ಬೆಂಗಳೂರು ಮತ್ತು ಚೆನ್ನೈ ವಿಚಾ​ರ​ದಲ್ಲಿ ಬೇರೆ ಬೇರೆ ಕಾರಣಗಳನ್ನು ನೀಡಿವೆ.

ಇದನ್ನೂ ಓದಿ : 2026ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಆಡಲ್ಲ : ಅಭಿಮಾನಿಗಳಿಗೆ ಶಾಕ್ ಕೊಟ್ಟ ಲಿಯೋನೆಲ್ ಮೆಸ್ಸಿ..!

ಬ್ಯಾಟಿಂಗ್ ಸ್ನೇಹಿಯಾಗಿರುವ ಬೆಂಗಳೂರು (Bengaluru) ಮೈದಾನದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುವುದು ಸವಾಲಾಗಲಿದೆ ಎಂಬ ಆತಂಕ ಪಾಕ್‌ ತಂಡ​ವನ್ನು ಕಾಡು​ತ್ತಿದೆ.. ಅಂತೆಯೇ ಅಫ್ಘಾನಿಸ್ತಾನ(Afganistan)

ತಂಡದಲ್ಲಿ ಬಲಿಷ್ಠ ಆಟಗಾರರಿದ್ದು, ಚೆನ್ನೈನ (Chennai) ಸ್ಪಿನ್‌ ಪಿಚ್‌​ನಲ್ಲಿ ಆಡು​ವುದು ಹೇಗೆ ಎಂಬ ಭಯ ಪಾಕ್‌ಗೆ ಇದೆ. ಅವರ ವಿರುದ್ಧ ಏನು ಮಾಡಬೇಕೆಂದು ಪಾಕಿಸ್ತಾನ ಭಯಪಡುತ್ತಿದೆ.

ಇದೇ ಕಾರಣಕ್ಕೆ ಎರಡು ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಿಸಿಸಿಐಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಪಾಕ್‌ ಆಯ್ಕೆ ಸಮಿ​ತಿಯು ಈಗಿ​ರುವ ವೇಳಾ​ಪ​ಟ್ಟಿ​ಗೆ ಒಪ್ಪಿಗೆ ಸೂಚಿ​ಸ​ದಂತೆ ಪಿಸಿ​ಬಿಗೆ ಸೂಚಿ​ಸಿದೆ ಎಂದು ಹೇಳ​ಲಾ​ಗು​ತ್ತಿ​ದೆ. ಪಿಸಿಬಿ ಪಂದ್ಯ​ಗಳನ್ನು ಸ್ಥಳಾಂತ​ರಿಸ​ಲು ಮನವಿ ಮಾಡಿ​ದ್ದರೂ ಬಿಸಿ​ಸಿಐ

ಇದಕ್ಕೆ ಒಪ್ಪಿಗೆ ಸೂಚಿ​ಸುವ ಸಾಧ್ಯತೆ ತುಂಬಾ ಕಡಿಮೆ.ಏಕೆಂದರೆ ಬಲವಾದ ಕಾರಣಗಳಿದ್ದರೆ ಮಾತ್ರ ಆಟದ ಬದಲಾವಣೆ ಸಾಧ್ಯ ಎಂದು ಬಿಸಿಸಿಐ ಮೂಲಗಳು ಪ್ರತಿಕ್ರಿಯಿಸಿದ್ದು, ಅವರ ಪ್ರಾಬ​ಲ್ಯ ಅಥವಾ

ದೌರ್ಬಲ್ಯದ ಕಾರಣ ನೀಡಿ ಪಂದ್ಯ ಸ್ಥಳಾಂತ​ರಿ​ಸಲು ಮನವಿ ಮಾಡಿ​ದರೆ ಒಪ್ಪಲು ಸಾಧ್ಯ​ವಿಲ್ಲ ಎಂದು ಪಿಸಿ​ಬಿಯ ಆಕ್ಷೇ​ಪದ ಬಗ್ಗೆ ಬಿಸಿ​ಸಿಐ ಮೂಲ​ಗಳು ಪ್ರತಿ​ಕ್ರಿ​ಯಿ​ಸಿದೆ ಎಂದು ತಿಳಿ​ದು​ಬಂದಿದೆ.

ಮುಂದಿನ ವಾರ ಪಟ್ಟಿ ಅಧಿ​ಕೃತ ಬಿಡು​ಗ​ಡೆ?

ಮುಂದಿನ ವಾರವು ಟೂರ್ನಿಯ ಅಧಿ​ಕೃತ ವೇಳಾ​ಪಟ್ಟಿ ಪ್ರಕ​ಟ​ಗೊ​ಳ್ಳುವ ನಿರೀ​ಕ್ಷೆ​ಯಿದೆ. ಪಿಸಿಬಿಯು ಈಗಿ​ರುವ ತಾತ್ಕಾ​ಲಿಕ ವೇಳಾ​ಪ​ಟ್ಟಿಗೆ ಆಕ್ಷೇ​ಪಿಸಿದ ಹೊರ​ತಾ​ಗಿಯೂ ಈಗಿರುವ ಪಟ್ಟಿ​ಯಲ್ಲಿ ಯಾವುದೇ

ಬದ​ಲಾ​ವಣೆ ಮಾಡುವ ಸಾಧ್ಯ​ತೆ​ಯಿಲ್ಲ ಎಂದು ಬಿಸಿ​ಸಿಐ ಹೇಳುತ್ತಿದೆ. ತಾತ್ಕಾ​ಲಿಕ ವೇಳಾ​ಪ​ಟ್ಟಿ​ಯನ್ನೇ ಹೀಗಾಗಿ ಅಧಿ​ಕೃತ​ವಾಗಿ ಪ್ರಕ​ಟಿ​ಸುವ ಸಾಧ್ಯತೆ ಹೆಚ್ಚು. ತಾತ್ಕಾ​ಲಿಕ ಪಟ್ಟಿ ಪ್ರಕಾರ ಇಂಗ್ಲೆಂಡ್‌ (England)

ಹಾಗೂ ಆಸ್ಪ್ರೇಲಿಯಾ ಅ.5ರಂದು ಉದ್ಘಾಟನಾ ಪಂದ್ಯದಲ್ಲಿ ಮುಖಾ​ಮುಖಿ​ಯಾ​ಗ​ಲಿವೆ.ಅ.8ರಂದು ಆಸ್ಪ್ರೇ​ಲಿಯಾ ವಿರುದ್ಧ ಭಾರತ ಆರಂಭಿಕ ಪಂದ್ಯ​ವನ್ನು ಚೆನ್ನೈನಲ್ಲಿ ಆಡಬೇಕಿದೆ.

ರಶ್ಮಿತಾ ಅನೀಶ್

Exit mobile version