56 ಮುಸ್ಲಿಂ ದೇಶಗಳಿದ್ದರು ಕಾಶ್ಮೀರಕ್ಕಾಗಿ ಏನೂ ಮಾಡಲಾಗಲಿಲ್ಲ : ಇಮ್ರಾನ್ ಖಾನ್!

pakistan

ಜಮ್ಮು ಕಾಶ್ಮೀರದ(Jammu Kashmir) ಜನತೆ ದಶಕಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರ ಹಕ್ಕುಗಳಿಗಾಗಿ ಅವರು ಏಳು ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ, ಕಾಶ್ಮೀರದ ಜನತೆಯ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ. ಕಾಶ್ಮೀರಕ್ಕಾಗಿ 56 ಮುಸ್ಲಿಂ ದೇಶಗಳು ಏನನ್ನೂ ಮಾಡಲು ಸಾಧ್ಯವಾಗಿಲ್ಲ ಎಂದು ಪಾಕಿಸ್ತಾನದ(Pakisthan) ಪ್ರಧಾನಿ(Prime Minister) ಇಮ್ರಾನ್ ಖಾನ್(Imran Khan) ಹೇಳಿದರು.

ಇಸ್ಲಾಮಾಬಾದ್ನಲ್ಲಿ ನಡೆದ “ಆರ್ಗನೈಸೇಷನ್ ಆಪ್ ಇಸ್ಲಾಮಿಕ್ ಕೋ ಆಪರೇಶನ್” ಕಾರ್ಯಕ್ರಮದಲ್ಲಿ ಮಾತನಾಡಿದ ಇಮ್ರಾನ್ ಖಾನ್, ನಾವು ಜಗತ್ತಿನಲ್ಲಿ 1.5 ಶತಕೋಟಿ ಮುಸ್ಲಿಂಮರಿದ್ದೇವೆ. ಆದರು ಕಾಶ್ಮೀರ ಮತ್ತು ಪಾಲೆಸ್ತೀನ್ ಜನರಿಗೆ ಇಲ್ಲಿಯವರೆಗೂ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ. ನಮ್ಮ ನಮ್ಮಲ್ಲೇ ಭಿನ್ನಾಭಿಪ್ರಾಯಗಳಿವೆ, ಹೀಗಾಗಿಯೇ ಭಾರತ ಸೇರಿದಂತೆ ಐರೋಪ್ಯ ದೇಶಗಳು ನಮ್ಮ ಒಕ್ಕೂಟಕ್ಕೆ ಬೆಲೆ ನೀಡುತ್ತಿಲ್ಲ. 56 ರಾಷ್ಟ್ರಗಳ ಒಕ್ಕೂಟ ನಮ್ಮದಾಗಿದ್ದರು, ಒಗ್ಗಟ್ಟು ಇಲ್ಲದಿರುವ ಕಾರಣ ಜಗತ್ತು ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದರು.

ಇನ್ನು ಜಮ್ಮು ಕಾಶ್ಮೀರ ಮತ್ತು ಪಾಲೆಸ್ತೀನ್ ನಲ್ಲಿ ನಿರಂತರವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಅದರ ವಿರುದ್ದ ಧ್ವನಿ ಎತ್ತುವಲ್ಲಿ ನಾವು ಸೋತಿದ್ದೇವೆ. ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಕ್ಕಾಗಿ ನಾವು ಅನೇಕ ದಶಕಗಳಿಂದ ಆಗ್ರಹಿಸುತ್ತಿದ್ದೇವೆ, ಆದರೆ ಇದುವರೆಗೂ ಅದು ಸಾಧ್ಯವಾಗಿಲ್ಲ. ಯಾವುದೇ ಭಯವಿಲ್ಲದೇ ಭಾರತ ಕಾಶ್ಮೀರದಲ್ಲಿ 370 ವಿಧಿಯನ್ನು ತೆಗೆದುಹಾಕಿತು. 1.5 ಶತಕೋಟಿ ಮುಸ್ಲಿಮರಿದ್ದರು ನಮ್ಮ ಜನರಿಗೆ ನ್ಯಾಯ ಕೊಡಿಸಲು ನಮ್ಮಿಂದ ಸಾಧ್ಯವಾಗಿಲ್ಲ ಎಂದು ಇಮ್ರಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇದಿಕೆಯಲ್ಲಿ ಮಾತನಾಡಿದ ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬೀನ್ ಫರ್ಹಾನ್ ಕೂಡಾ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದರು. ನಾವೆಲ್ಲರೂ ನಮ್ಮ ನಮ್ಮಲ್ಲೇ ಕಿತ್ತಾಡುವುದರಿಂದ ಜಗತ್ತು ನಮ್ಮನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹೀಗಾಗಿ ನಾವು ಒಗ್ಗೂಡಬೇಕು. ನಾವು ಯಾವುದೇ ದೇಶವನ್ನು ವಶಪಡಿಸಿಕೊಳ್ಳುವುದರ ಬಗ್ಗೆ ಮಾತನಾಡುತ್ತಿಲ್ಲ. ಕಾಶ್ಮೀರ ಮತ್ತು ಪಾಲೆಸ್ತೀನ್ ಜನರ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದೇವೆ. ಈ ಘೋರ ಅನ್ಯಾಯವನ್ನು ಪ್ರತಿಭಟಿಸಲು ನಮ್ಮ ಧ್ವನಿ ಸಾಕಾಗುವುದಿಲ್ಲ. ಹೀಗಾಗಿ ನಾವು ಮತ್ತಷ್ಟು ಬಲಿಷ್ಠರಾಗಬೇಕೆಂದು ಮುಸ್ಲಿಂ ದೇಶಗಳಿಗೆ ಕರೆ ನೀಡಿದರು.

Exit mobile version