ಪಾಕಿಸ್ತಾನದಲ್ಲಿ ಇಲ್ಲಿಯವರೆಗೂ ಒಬ್ಬ ಪ್ರಧಾನಿಯೂ ಪೂರ್ಣಾವದಿ ಪೂರೈಸಿಲ್ಲ!

Pakistan

ಪಾಕಿಸ್ತಾನದಲ್ಲಿ(Pakistan) ರಾಜಕೀಯವಾಗಿ ವಿಕ್ಷಿಪ್ತವಾದ ಪರಿಸ್ಥಿತಿ ಅದಕ್ಕೆ ಶಾಪವಾಗಿ ಅಂಟಿಕೊಂಡಂತಿದೆ. ಪಾಕಿಸ್ತಾನದ 75 ವರ್ಷಗಳ ಇತಿಹಾಸದಲ್ಲಿ ಅದರ ಯಾವ ಪ್ರಧಾನ ಮಂತ್ರಿಗೂ ಐದು ವರ್ಷಗಳ ಪೂರ್ಣಾವಧಿ ಅಧಿಕಾರ ಅನುಭವಿಸಲು ಸಾಧ್ಯವಾಗಿಲ್ಲ.

ಈಗ ಇಮ್ರಾನ್ ಖಾನ್(Imran Khan) ಕೂಡ ಈ ಪಟ್ಟಿಗೆ ಸೇರಿದ್ದಾರೆ. ಇದುವರೆಗೂ ಒಬ್ಬರೇ ಒಬ್ಬರು ಪಾಕ್‌ ಪ್ರಧಾನ ಮಂತ್ರಿ ತಮ್ಮ ಪೂರ್ಣಾವಧಿಯನ್ನು ಮುಗಿಸಿಲ್ಲ. ಹೌದು, ಇದು ಅಚ್ಚರಿಯಾದ್ರೂ ನಂಬಲೇಬೇಕು. ಆ ದೊಡ್ಡ ಪಟ್ಟಿಗೆ ಇಮ್ರಾನ್ ಖಾನ್ ಕೂಡ ನೂತನವಾಗಿ ಸೇರ್ಪಡೆಯಾಗಿದ್ದಾರೆ. 1947ರಿಂದ ಇಲ್ಲಿಯವರೆಗೂ ಯಾವ ಪ್ರಧಾನಿಯೂ ಪಾಕಿಸ್ತಾನದಲ್ಲಿ ಪೂರ್ಣಾವಧಿ ಅಡಳಿತ ನಡೆಸಿಲ್ಲ. ಪ್ರಜೆಗಳಿಂದ ಆಯ್ಕೆಯಾದ 4 ಸರ್ಕಾರಗಳು ಸೇನಾ ದಂಗೆಯಿಂದ ಇದುವರೆಗೂ ಪತನವಾಗಿವೆ.


ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ವಿಪಕ್ಷಗಳು ಮಂಡಿಸಿದ ಅವಿಶ್ವಾಸ ಮತದಲ್ಲಿ ಸೋಲನ್ನು ಅನುಭವಿಸಿ ಪದಚ್ಯುತಗೊಂಡಿದ್ದಾರೆ. ಪ್ರಧಾನಿ ಹುದ್ದೆ ಕಳೆದುಕೊಂಡಿದ್ದಾರೆ. 15 ದಿನಗಳ ಕಾಲ ಅವರು ನೂತನ ಪ್ರಧಾನಿ ಆಯ್ಕೆ ಆಗುವವರೆಗೂ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ, ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಹಜ ಅಧಿಕಾರ ಅವರಿಗೆ ಇರುವುದಿಲ್ಲ.
ಇನ್ನು ಪಾಕಿಸ್ತಾನದ ಇತಿಹಾಸದಲ್ಲಿ ಇದುವರೆಗೆ ಪ್ರಧಾನ ಮಂತ್ರಿಗಳಾಗಿದ್ದ ಯಾರೊಬ್ಬರೂ ಪೂರ್ಣಾವಧಿಯನ್ನು (5 ವರ್ಷ) ಪೂರೈಸಲೇ ಇಲ್ಲ.

ಪಾಕಿಸ್ತಾನದ ಮೊದಲ ಪ್ರಧಾನ ಮಂತ್ರಿ ಲಿಯಾಖರ್ ಅಲಿ ಖಾನ್ ಅವರು 4 ವರ್ಷಗಳ ಆಡಳಿತ ನಡೆಸಿ ಪೂರ್ಣಾವಧಿ ಪೂರ್ಣಗೊಳಿಸುವ ವಿಶ್ವಾಸದಲ್ಲಿದ್ದರು. ಆದರೆ ಅಧಿಕಾರಲ್ಲಿರುವಾಗಲೇ ಅವರ ಹತ್ಯೆ ನಡೆದಿತ್ತು. ಅದಾದ ಬಳಿಕ ಪಾಕಿಸ್ತಾನದ ಪ್ರಧಾನ ಮಂತ್ರಿಗಳಾದ ಯಾರೊಬ್ಬರಿಗೂ ಪೂರ್ಣಾವಧಿ ಪೂರ್ಣಗೊಳಿಸುವ ಅವಕಾಶವೇ ಸಿಕ್ಕಿಲ್ಲ. ಒಂದೋ ಅವರು ರಾಜೀನಾಮೆ ನೀಡಿದ್ದಾರೆ, ಇಲ್ಲ ಸರ್ಕಾರವನ್ನು ವಿಸರ್ಜಿಸಲಾಗಿದೆ ಅಥವಾ ಕೋರ್ಟ್ ಸರ್ಕಾರವನ್ನು ವಜಾಗೊಳಿಸಿದೆ.

ಹೀಗೆ ವಿಭಿನ್ನವಾದ ಕಾರಣಗಳಿಂದ ಪಾಕಿಸ್ತಾನದಲ್ಲಿ ಪ್ರಧಾನಿ ಪಟ್ಟಕ್ಕೇರಿದ ಯಾರೊಬ್ಬರೂ ಕೂಡ ಇಲ್ಲಿಯವರೆಗೂ ಪೂರ್ಣಾವಧಿ ಅಧಿಕಾರ ನಡೆಸಲು ಸಾಧ್ಯವಾಗಿಲ್ಲ.

Exit mobile version