ಮೋದಿ ವಿರುದ್ದ ಸುಳ್ಳು ಸಾಕ್ಷ್ಯ ಸೃಷ್ಟಿಸಲು ತೀಸ್ತಾ ಸೆಟಲ್ವಾಡ್ ಸಂಚು ರೂಪಿಸಿದ್ದರು : ತನಿಖಾ ತಂಡ

Narendra Modi

ನವದೆಹಲಿ : 2002ರಲ್ಲಿ ನಡೆದ ಗುಜರಾತ್‌(Gujarat Riot Case) ಕೋಮುಗಲಭೆಯಲ್ಲಿ ಅಂದಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ(Narendra Modi) ಅವರನ್ನು ಸಿಲುಕಿಸಲು ತೀಸ್ತಾ ಸೆಟಲ್ವಾಡ್‌, ಕಾಂಗ್ರೆಸ್‌ ನಾಯಕ(Congress Leader) ಅಹ್ಮದ್‌ ಪಟೇಲ್‌(Ahmed Patel) ಸೂಚನೆ ಮೇರೆಗೆ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದರು ಎಂದು ತನಿಖಾ ತಂಡ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿದೆ.


ಗುಜರಾತ್‌ ಕೋಮುಗಲಭೆಯಲ್ಲಿ ಅಂದಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಸಿಲುಕಿಸಲು ದೊಡ್ಡಮಟ್ಟದ ಸಂಚು ನಡೆಸಲಾಗಿದೆ.

ಈ ಕುರಿತು ಇನ್ನಷ್ಟು ಮಾಹಿತಿಯನ್ನು ಕಲೆ ಹಾಕಬೇಕಿದೆ. ಹೀಗಾಗಿ ತೀಸ್ತಾ ಸೆಟಲ್ವಾಡ್‌ ಅವರಿಗೆ ಜಾಮೀನು ಮಂಜೂರು ಮಾಡದಂತೆ ಸೆಷನ್ಸ್‌ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದೆ.

ಸೆಷನ್ಸ್ ನ್ಯಾಯಾಧೀಶ ಡಿ.ಡಿ.ಠಕ್ಕರ್ ಅವರು ಎಸ್ಐಟಿಯ(SIT) ಆಕ್ಷೇಪಣೆಯನ್ನು ದಾಖಲಿಸಿಕೊಂಡು ಸೋಮವಾರ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಿದರು.

ಇನ್ನು ತನಿಖಾ ತಂಡ ಕೆಲ ಮಹತ್ವದ ಸಂಗತಿಗಳನ್ನು ಅಫಿಡವಿಟ್‌ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಗುಜರಾತ್ನಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ(BJP) ಸರ್ಕಾರವನ್ನು ವಜಾಗೊಳಿಸಲು ಸೋನಿಯಾ ಗಾಂಧಿ(Sonia Gandhi) ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಅಹ್ಮದ್ ಪಟೇಲ್ ಅವರ ಆಜ್ಞೆಯ ಮೇರೆಗೆ ತೀಸ್ತಾ ಸೆಟಲ್ವಾಡ್ ಒಂದು ಯೋಜನೆಯನ್ನು ರೂಪಿಸಿದ್ದರು.

ಐಪಿಎಸ್ ಅಧಿಕಾರಿಗಳಾದ ಆರ್.ಬಿ. ಶ್ರೀಕುಮಾರ್ ಮತ್ತು ಸಂಜೀವ್ ಭಟ್ ಅವರನ್ನು ಬಳಸಿಕೊಂಡು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದರು.

ಈ ಪಿತೂರಿಯ ಮುಖ್ಯ ಉದೇಶವೆಂದರೆ ಬಿಜೆಪಿ ಸರ್ಕಾರವನ್ನು ವಜಾಗೊಳಿಸುವುದು ಮತ್ತು ರಾಜಕೀಯ ಅಸ್ಥಿರತೆ ಉಂಟಾಗುವಂತೆ ಮಾಡುವುದು ಎಂದು ತನಿಖಾ ತಂಡ ಹೇಳಿದೆ. ಇನ್ನು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಲು ಮತ್ತು ವ್ಯವಸ್ಥಿತ ಪಿತೂರಿ ಮಾಡಲು ಸೋನಿಯಾ ಗಾಂಧಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಅಹ್ಮದ್ ಪಟೇಲ್ ಅವರು ತೀಸ್ತಾ ಸೆಟಲ್ವಾಡ್‌ ಅವರಿಗೆ ಅನೇಕ ಬಾರಿ ಹಣ ಸಂದಾಯ ಮಾಡಿದ್ದಾರೆ.

ಷಡ್ಯಂತ್ರ ರೂಪಿಸುವ ಭಾಗವಾಗಿ ದೆಹಲಿಯ ಅಧಿಕಾರದಲ್ಲಿದ್ದ ಪ್ರಮುಖ ರಾಷ್ಟ್ರೀಯ ಪಕ್ಷದ ನಾಯಕರನ್ನು ತೀಸ್ತಾ ಸೆಟಲ್ವಾಡ್ ಭೇಟಿಯಾಗುತ್ತಿದ್ದರು ಎಂದು ತನಿಖಾ ತಂಡ ತಿಳಿಸಿದೆ.
Exit mobile version