ಪಿಡಿಒ ಹುದ್ದೆಗೆ ಅರ್ಜಿ ಅಹ್ವಾನ : ವೇತನ, ಅರ್ಹತೆ, ಅರ್ಜಿ ವಿಧಾನ, ಆಯ್ಕೆ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ

Job News: ರಾಜ್ಯದ ಪಂಚಾಯತ್ ರಾಜ್‌ ಇಲಾಖೆಯಡಿ ಕರ್ನಾಟಕ ಸರ್ಕಾರವು ಶೀಘ್ರದಲ್ಲೇ ಖಾಲಿ ಇರುವ ಪಿಡಿಒ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸುವ ಸಾಧ್ಯತೆಗಳಿವೆ.

ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ. ಬಿಜೆಪಿ ಪಕ್ಷದ ಸರ್ಕಾರ ಇದ್ದ ಸಂದರ್ಭದಲ್ಲಿಯೇ ಅಂದರೆ ಆದರೆ ಕಳೆದ ಮಾರ್ಚ್‌ನಲ್ಲಿ ನೇಮಕ ವಿಧಾನದ ಅಂತಿಮ 326 ಪಂಚಾಯತ್ ಅಭಿವೃದ್ಧಿ

ಅಧಿಕಾರಿಗಳನ್ನು ನೇಮಕ ಮಾಡಲು ಆದೇಶ ಹೊರಡಿಸಲಾಗಿತ್ತು.

ಇದನ್ನೂ ಓದಿ : ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌ನಲ್ಲಿ 43 ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಷ್ಟು ಮಾತ್ರವಲ್ಲದೇ ಇತರೆ ಹುದ್ದೆಗಳನ್ನು ಸದರಿ ಇಲಾಖೆಯಡಿಯಲ್ಲಿ ಭರ್ತಿ ಮಾಡುವ ಅವಕಾಶ ಇದೆ. ಪಿಡಿಒ ಹುದ್ದೆಗಳಿಗೆ ವೇತನ ಎಷ್ಟು? ಅರ್ಹತೆಗಳೇನು ? ಅರ್ಜಿ ಸಲ್ಲಿಸುವುದು ಹೇಗೆ? ಪರೀಕ್ಷೆ

ಮಾದರಿ ಹೇಗಿರುತ್ತದೆ? ಎಂದೆಲ್ಲ ಮಾಹಿತಿಗಳನ್ನು ಈ ಕೆಳಗಿನಂತೆ ಓದಿ ತಿಳಿದುಕೊಳ್ಳಿ.

ಯಾವ ನೇಮಕಾತಿ ಪ್ರಾಧಿಕಾರ ಪಿಡಿಒ ಹುದ್ದೆಗೆ ನೇಮಕ ಪ್ರಕ್ರಿಯೆಗಳನ್ನು ನಡೆಸಲಿದೆ?

ಪಿಡಿಒ / ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಸೂಚಿಸಿ, ನೇಮಕ ಪ್ರಕ್ರಿಯೆಗಳನ್ನು ನಡೆಸಲಿದೆ.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಬೇಕಾಗುವ ವಿದ್ಯಾರ್ಹತೆಗಳೇನು?

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಯಾವುದೇ ಪದವಿಯನ್ನು ಪಾಸ್ ಮಾಡಿರಬೇಕು. ಅಥವಾ ಸರ್ಕಾರವು ಅದೇಶಿಸಿದ ಅಂತಹ ಪರೀಕ್ಷೆಗೆ ಸಮಾನವೆಂದು

ಅಂಗೀಕರಿಸಿದ ವಿದ್ಯಾರ್ಹತೆಯನ್ನು ಅಭ್ಯರ್ಥಿಯು ಉತ್ತೀರ್ಣರಾಗಿರಬೇಕು.

ಪಿಡಿಒ ಹುದ್ದೆಗೆ ಅಂತಿಮ ಪದವಿ ಓದುತ್ತಿರುವವರು ಅರ್ಜಿ ಹಾಕಬಹುದೇ?

ಡಿಗ್ರಿ ಪಾಸಾದವರು ಮಾತ್ರ ಅರ್ಜಿ ಸಲ್ಲಿಸಲು ನಿಗಧಿತ ಕೊನೆ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಆದರೆ ಅರ್ಜಿ ಹಾಕಲು ಇನ್ನು ಅಧ್ಯಯನ ಮಾಡುತ್ತಿರುವವರಿಗೆ ಯಾವುದೇ ಅವಕಾಶ ಇಲ್ಲ.

ಪಿಡಿಒ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಸಲ್ಲಿಸಲು ಆನ್‌ಲೈನ್‌ ಲಿಂಕ್‌ ಮತ್ತು ಅಧಿಸೂಚನೆ ಬಿಡುಗಡೆ ಮಾಡುತ್ತದೆ. ಸದರಿ ಲಿಂಕ್ ಕ್ಲಿಕ್ ಮಾಡಿ, ಅಲ್ಲಿ ಕೇಳಲಾಗುವ ವಿದ್ಯಾರ್ಹತೆ ವಿವರಗಳನ್ನು ಮತ್ತು

ವೈಯಕ್ತಿಕ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. ಕೆಇಎ ವೆಬ್‌ಸೈಟ್‌ ವಿಳಾಸ kea.kar.nic.in.

ಪಿಡಿಒ ಹುದ್ದೆಗೆ ವೇತನ ಎಷ್ಟು?

ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇತನ ಶ್ರೇಣಿ ರೂ.40900-78200 (ಗ್ರೂಪ್‌ ಬಿ ಕಿರಿಯ ವೃಂದ).
ಪಿಡಿಒ ವೇತನ ಶ್ರೇಣಿ ರೂ.37000-70,850 ರ (ಗ್ರೂಪ್‌ ಸಿ ವೃಂದ).

ಪಿಡಿಒ ಹುದ್ದೆಗೆ ಬೇಕಾಗುವ ವಯಸ್ಸಿನ ಅರ್ಹತೆಗಳು

ಕನಿಷ್ಠ 18 ವರ್ಷ ಆಗಿರಬೇಕು.
ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮೀರಿರಬಾರದು.
ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು.
ಸಾಮಾನ್ಯ ಕೆಟಗರಿ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಮೀರಿರಬಾರದು.

ಪಿಡಿಒ ಹುದ್ದೆಗೆ ನೇಮಕಾತಿ ಪರೀಕ್ಷೆ ಹೇಗಿರುತ್ತದೆ?

ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ಒಟ್ಟು 400 ಅಂಕಗಳಿಗೆ ನಡೆಸಲಾಗುತ್ತದೆ.
ಪತ್ರಿಕೆ-1 – ಪರೀಕ್ಷೆ 200 ಅಂಕಗಳಿಗೆ.
ಸಾಮಾನ್ಯ ಕನ್ನಡ, ಸಾಮಾನ್ಯ ಜ್ಞಾನ, ಸಾಮಾನ್ಯ ಇಂಗ್ಲಿಷ್ ಕುರಿತ ಒಟ್ಟು 100 ಅಂಕಗಳು ಇರಲಿದ್ದು, ಒಟ್ಟು 200 ಅಂಕಗಳಿಗೆ ಪರೀಕ್ಷೆ ಇರುತ್ತದೆ.
ಇದರಲ್ಲಿ ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳು ಇರುತ್ತವೆ.
ಪರೀಕ್ಷೆ ಅವಧಿ 2 ಗಂಟೆ.

ಪತ್ರಿಕೆ-2- 200 ಅಂಕಗಳಿಗೆ ಪರೀಕ್ಷೆ ಇರುತ್ತದೆ.
ಒಟ್ಟು 100 ಪ್ರಶ್ನೆಗಳನ್ನು 200 ಅಂಕಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಕುರಿತು ಕೇಳಲಾಗುತ್ತದೆ.ಈ ಪರೀಕ್ಷೆಯು ಒಟ್ಟು ಎರಡು ಗಂಟೆಗಳ ಕಾಲ ಇರುತ್ತದೆ.
ವಸ್ತುನಿಷ್ಠ ಬಹು ಆಯ್ಕೆ ಮಾದರಿಈ ಪತ್ರಿಕೆಯು ಆಗಿದೆ

ಆಯ್ಕೆ ನಿಯಮಗಳು

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳ ಅನುಸಾರ ಮತ್ತು ನೇಮಕಾತಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಜೇಷ್ಠತೆ ಮತ್ತು ಅಭ್ಯರ್ಥಿಗಳು

ನೀಡಿರುವ ಆದ್ಯತೆ ಪರಿಗಣಿಸಿ ಮೊದಲಿಗೆ ಆಯ್ಕೆ ಮಾಡಲಾಗುತ್ತದೆ.

ಪರೀಕ್ಷಾ ಶುಲ್ಕ ವಿವರ

ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ : ರೂ.500.
ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.250.

Exit mobile version