No Ropeway?: ನಂದಿಬೆಟ್ಟ ರೋಪ್‌ವೇ ನಿರ್ಮಾಣ ಕಾಮಗಾರಿ ಬಗ್ಗೆ ಮೌನಕ್ಕೆ ಶರಣಾದ ಕಾಂಗ್ರೆಸ್‌ ಸರ್ಕಾರ

Chikkaballapura: ವಿಧಾನಸಭೆ ಚುನಾವಣೆಗೂ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ (pending nandihill ropeway) ಅವರು ನಂದಿಬೆಟ್ಟಕ್ಕೆ ರೋಪ್‌ವೇ ನಿರ್ಮಾಣಕ್ಕೆ

ಶಂಕುಸ್ಥಾಪನೆ ಮಾಡಿದ್ದರು. ಆದರೆ ಕಾಮಗಾರಿ ಮಾತ್ರ ಇವತ್ತಿನವರೆಗೂ ಆರಂಭವಾಗಿಲ್ಲ. ಸದ್ಯ ಕಾಂಗ್ರೆಸ್‌ (Congress) ಸರ್ಕಾರ ಮೌನಕ್ಕೆ ಶರಣಾಗಿದ್ದು, ಸದ್ಯಕ್ಕೆ ಕಾಮಗಾರಿ

ಆರಂಭವಾಗುವ ಯಾವ (pending nandihill ropeway) ಲಕ್ಷಣಗಳು ಕಾಣಿಸುತ್ತಿಲ್ಲ.

ಅಂತು ಇಂತು ಶಂಕುಸ್ಥಾಪನೆ ಆಗಿ ಇನ್ನೇನು ಕಾಮಗಾರಿ ಆರಂಭ ಆಯಿತು ಎನ್ನುವ ವೇಳೆ ಮತ್ತೆ ಮೌನ ಮನೆಮಾಡಿದೆ. ಸದ್ಯಕ್ಕೆ ಕಾಂಗ್ರೆಸ್‌ ಸರ್ಕಾರ ಮೌನಕ್ಕೆ ಶರಣಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ

93.40 ಕೋಟಿ ರೂ. ವೆಚ್ಚದಲ್ಲಿ ರೋಪ್‌ವೇ (Ropeway) ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಅನುಮೋದನೆ ನೀಡಿತ್ತು. ಕಾಮಗಾರಿಯೂ ಬೇಗ ಶುರುವಾಗಿ ಸಿದ್ಧವಾಗಿಬಿಡುತ್ತೆ ಎಂದು ನಿರೀಕ್ಷಿಸಲಾಗಿತ್ತು.

ಕರ್ನಾಟಕ (Karnataka) ಪ್ರವಾಸೋದ್ಯಮ ಇಲಾಖೆಯು ಪ್ರವಾಸೋದ್ಯಮ ಕ್ಷೇತ್ರದ ಮಹತ್ವಾಕಾಂಕ್ಷಿಯಾದ ನಂದಿಬೆಟ್ಟದಲ್ಲಿ ಪ್ಯಾಸೆಂಜರ್‌ ರೋಪ್‌ವೇ ಅಭಿವೃದ್ಧಿಗೆ ಡೈನಾಮಿಕ್ಸ್‌ ರೋಪ್‌ವೇ ಪ್ರೈವೇಟ್‌

ಲಿಮಿಟೆಡ್‌ (Dynamics Ropeway Private Limited) ಜತೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಸಾರ್ವಜನಿಕ-ಖಾಸಗಿ ಸಹಭಾಗಿತ್ವ ದೊಂದಿಗೆ ಈ ಯೋಜನೆಗೆ 93.40 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು.

ಇದನ್ನು ಓದಿ: ದಂಡ ಕಟ್ಟಿ: 2019 ಕ್ಕಿಂತ ಮುಂಚಿನ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯ, ಇಲ್ಲವೇ ದಂಡ ಕಟ್ಟಿ !

ಡೈನಾಮಿಕ್‌ ರೋಪ್‌ ವೇ ಪ್ರೈವೇಟ್‌ ಲಿಮಿಟೆಡ್‌ 30 ವರ್ಷಗಳ ರಿಯಾಯಿತಿ ಅವಧಿಯೊಂದಿಗೆ ಹಣಕಾಸು, ಕಾರ್ಯಾಚರಣೆ, ವಿನ್ಯಾಸ, ನಿರ್ಮಾಣ ಮತ್ತು ವರ್ಗಾವಣೆ ಚೌಕಟ್ಟಿನ ಮೇಲೆ ಯೋಜನೆ

ಕಾರ್ಯರೂಪಕ್ಕೆ ತರಲು ನಿರ್ಧರಿಸಲಾಗಿತ್ತು. ಸುಮಾರು 2.93 ಕಿ.ಮೀ. ರೋಪ್‌ ವೇ ಅಭಿವೃದ್ಧಿಪಡಿಸಲು ಸೂಚಿಸಲಾಗಿತ್ತು.

ಇನ್ನು ಈ ಮೆಗಾ ಯೋಜನೆಯ ಜೊತೆಗೆ ಬೆಟ್ಟದ ಮೇಲಿನ ಮತ್ತು ಕೆಳಗಿನ ಲ್ಯಾಂಡಿಂಗ್‌ ಸ್ಟೆಷನ್‌ಗಳಲ್ಲಿ (Landing Station) ಆದಾಯ ಮತ್ತು ಆದಾಯೇತರ ಸೌಲಭ್ಯಗಳನ್ನು ಕಲ್ಪಿಸಲು

ನಿರ್ಧಾರ ಮಾಡಲಾಗಿತ್ತು. ಅಲ್ಲದೆ ಬೆಟ್ಟದ ಕೆಳಗೆ ದ್ವಿಚಕ್ರ, ನಾಲ್ಕು ಚಕ್ರ ಮತ್ತು ಬಾಡಿಗೆ ವಾಹನಗಳ ಪಾರ್ಕಿಂಗ್‌ (Parking) ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿತ್ತು. ಕುಡಿಯುವ ನೀರಿನ ಘಟಕಗಳು,

ಶೌಚಾಲಯ, ಟಿಕೆಟ್‌ ಕೌಂಟರ್‌ಗಳು (Ticket Counter), ವಿಶ್ರಾಂತಿ ಕೊಠಡಿಗಳು, ರೆಸ್ಟೊರೆಂಟ್‌, ಟೀ ಮತ್ತು ಕಾಫಿ ಮಳಿಗೆಗಳು ಸಹ ಇದರ ಒಂದು ಭಾಗವಾಗಿತ್ತು. ಪ್ರವಾಸಿಗರಿಗೆ ಹೋಟೆಲ್‌

(Hotel) ಮತ್ತು ವಸತಿ ಸೌಕರ್ಯ ಒದಗಿಸಲು ಯೋಜನೆ ಮಾಡಲಾಗಿತ್ತು.

ಈ ಯೋಜನೆಗೆ ಬಿಜೆಪಿ (BJP) ಸರಕಾರದ ಆರಂಭದಲ್ಲಿ ಅಂದರೆ ಕಳೆದ 2 ವರ್ಷಗಳ ಹಿಂದೆಯೇ ಆಡಳಿತಾತ್ಮಕ ಅನುಮೋದನೆ ನೀಡಿದ್ದರೂ ನಾನಾ ಕಾರಣಗಳಿಂದ ಅನುಷ್ಠಾನಕ್ಕೆ ಬಂದಿರಲಿಲ್ಲ.

ಬಿಜೆಪಿ ಸರಕಾರದ ಕೊನೆ ದಿನಗಳಲ್ಲಿ ರೋಪ್‌ವೇ ಆರಂಭ ಅಷ್ಟೇ ಅಲ್ಲದೆ ಇದರ ಜತೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಸಲುವಾಗಿ ವಿಶ್ರಾಂತಿ ಕೊಠಡಿ, ಹೊಸ ರೆಸ್ಟೋರೆಂಟ್‌ಗಳು

(Restaurant) ಹಾಗೂ ಇತರ ಪ್ರವಾಸಿಗರಿಗೆ ಅನುಕೂಲಗಳನ್ನು ಕಲ್ಪಿಸುವ ಸಲುವಾಗಿ ಪ್ರವಾಸೋದ್ಯಮ ಇಲಾಖೆ ನಾನಾ ಯೋಜನೆಗಳನ್ನು ರೂಪಿಸಿ ಶಂಕು ಸ್ಥಾಪನೆ ಮಾಡಿತ್ತು.

ಆದರೆ ಈಗ ಮೌನಕ್ಕೆ ಜಾರಿರುವುದು ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಭವ್ಯಶ್ರೀ ಆರ್.ಜೆ

Exit mobile version