ರಾವಣ ರಾಜ್ಯ ಶ್ರೀಲಂಕಾದಲ್ಲಿ ಪೆಟ್ರೋಲ್ 550, ಡಿಸೇಲ್ 460 ರೂ. ಏರಿಕೆ

Srilanka

ಕೊಲಂಬೊ : ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ(Sri Lanka) ಆರ್ಥಿಕ ಬಿಕ್ಕಟ್ಟು ತೀವ್ರ ಸ್ವರೂಪ ಪಡೆಯುತ್ತಿದ್ದು, ಪರಿಸ್ಥಿತಿ ಕೈ ಮೀರುತ್ತಿದೆ. ಶ್ರೀಲಂಕಾ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಫಲ ನೀಡುತ್ತಿಲ್ಲ. ಅಲ್ಲಿಯ ಕೇಂದ್ರೀಯ ಬ್ಯಾಂಕ್ ಕೂಡಾ ಸದ್ಯದ ಆರ್ಥಿಕ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿಲ್ಲ ಎಂದು ಹೇಳಿದ್ದು, ತೈಲ ಬೆಲೆ ಗಗನಕ್ಕೇರಿದೆ. ಅದೇ ರೀತಿ ಅಗತ್ಯ ವಸ್ತುಗಳ ಬೆಲೆ ಸಾಮಾನ್ಯ ಜನರಿಗೆ ಬಹುದೊಡ್ಡ ಹೊರೆಯಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರ ಕಳೆದ ಎರಡು ವಾರಗಳಲ್ಲಿ ನಾಲ್ಕು ಬಾರಿ ಪೆಟ್ರೋಲ್(Petrol), ಡೀಸೆಲ್(Diesel) ಬೆಲೆ ಏರಿಕೆ ಮಾಡಿದೆ.

ಸದ್ಯ ಶ್ರೀಲಂಕಾದಲ್ಲಿ ಪೆಟ್ರೋಲ್ 550 ರೂ. ಮತ್ತು ಡಿಸೇಲ್ ಬೆಲೆ 460 ರೂ.ಗಳಿದ್ದು, ಪೆಟ್ರೋಲ್ ಬೆಲೆ ಶೇಕಡಾ 22 ರಷ್ಟು ಹಾಗೂ ಡೀಸೆಲ್ ಬೆಲೆ ಶೇಕಡಾ 15ರಷ್ಟು ಏರಿಕೆಯಾಗಿದೆ. ಇಂದಿನಿಂದ ಈ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ಸಾರ್ವಜನಿಕ ವಲಯದ ಕಂಪನಿ ಸಿಲೋನ್ ಪೆಟ್ರೋಲಿಯಂ ಕಾರ್ಪೋರೇಶನ್ ತಿಳಿಸಿದೆ. ಅದೇ ರೀತಿ ಶ್ರೀಲಂಕಾದ ‘ಆಯಿಲ್ ಕಾರ್ಪೋರೇಷನ್’ ಸಹ ಇಂಧನ ಬೆಲೆಯನ್ನು ಹೆಚ್ಚಿಸಿದೆ. ಅಂತರಾಷ್ಟ್ರೀಯ(International) ಮಟ್ಟದಲ್ಲಿ ಶ್ರೀಲಂಕಾ ತನ್ನ ಹಣದ ಮೌಲ್ಯವನ್ನು ಕಳೆದುಕೊಂಡಿದ್ದು, ಬ್ಯಾಂಕಿಂಗ್ ಕಾರಣಗಳಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ ಎಂದು ಶ್ರೀಲಂಕಾದ ಇಂಧನ ಸಚಿವÀ ಕಾಂಚನಾ ವಿಜೆಶೇಖರ ತಿಳಿಸಿದ್ದಾರೆ.


ಇನ್ನು ಭಾರತ, ಚೀನಾ ಸೇರಿದಂತೆ ಅನೇಕ ದೇಶಗಳು ಶ್ರೀಲಂಕಾಗೆ ಅಗತ್ಯ ನೆರವನ್ನು ನೀಡುತ್ತಿವೆ. ಅಮೆರಿಕವು ಶ್ರೀಲಂಕಾಗೆ 158 ಮಿಲಿಯನ್ ಡಾಲರ್‍ಗಳಷ್ಟು ಹಣಕಾಸು ನೆರವನ್ನು ಒದಗಿಸಿದೆ. ಆಹಾರಕ್ಕಾಗಿ 47 ಮಿಲಿಯನ್ ಡಾಲರ್‍ಗಳನ್ನು ನೀಡಲು ಸಿದ್ದತೆ ನಡೆಸಲಾಗಿದೆ ಎಂದು ಅಮೇರಿಕಾ ರಾಯಭಾರಿ ತಿಳಿಸಿದ್ದಾರೆ.

Exit mobile version