50 ಲೀಟರ್‌ ಸಾಮರ್ಥ್ಯದ ಜಡ್ಜ್ ಕಾರಿಗೆ 57 ಲೀಟರ್‌ ಪೆಟ್ರೋಲ್ ತುಂಬಿ ಗೋಲ್‌ಮಾಲ್: ಪೆಟ್ರೋಲ್ ಬಂಕ್ ಸೀಲ್

Bhopal: ದಿನ ಬೆಳಗಾದರೆ  ಸಾಮಾಜಿಕ ಜಾಲತಾಣಗಳಲ್ಲಿ(Social Media), ಪತ್ರಿಕೆಗಳಲ್ಲಿ ಪಟ್ರೋಲ್‌ ಗೋಲ್‌ಮಾಲ್‌ ಎಂಬ ಸುದ್ದಿ ಕೇಳುತ್ತಲೇ ಇರುತ್ತೇವೆ,ಆದರೆ ಯಾರೊಬ್ಬರೂ ಇದರ ಬಗ್ಗೆ ಗಂಭೀರವಾಗಿ(Petrol Golmaal bunk sealed) ಕ್ರಮ ಕೈಗೊಂಡಿಲ್ಲ,ಬಹಳಷ್ಟು ಬಾರಿ ಪೆಟ್ರೋಲ್‌ ಬಂಕ್‌ಗಳೂ(Petrol Bunk) ಕೂಡ ಒಂದಲ್ಲದ ಒಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಲೇ ಇವೆ.

ಆದರೆ ಮಧ್ಯಪ್ರದೇಶದ(Madhya Pradesh) ಭೋಪಾಲ್‌ (Bhopal)ಎಂಬಲ್ಲಿ ಪೆಟ್ರೋಲ್‌ ಬಂಕೊಂದು ಇದೇ ರೀತಿ ಮೋಸ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡ ಪರಿಣಾಮ ಆ ಪೆಟ್ರೋಲ್‌ ಬಂಕೇ ಸೀಜ್‌ ಆದ ಘಟನೆಯೊಂದು ನಡೆದಿದೆ.ವರದಿಗಳ ಪ್ರಕಾರ ಜಡ್ಜ್‌(Judge) ವಾಹನಕ್ಕೆ ಮೋಸ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದಾರೆ.

ಜಡ್ಜ್‌ರವರ ಕಾರಿನ ಪೆಟ್ರೋಲ್‌ ಟ್ಯಾಂಕ್‌ನ ಸಾಮಾರ್ಥ್ಯವೇ 50 ಲೀಟರುಗಳು,ಆದರೆ ಇದರ ಅರಿವಿಲ್ಲದ ಪೆಟ್ರೋಲ್‌ ಬ್ಯಾಂಕ್‌ ಸಿಬ್ಬಂದಿ ಇತರರಿಗೆ ವಂಚಿಸುವಂತೆ ಸುಮಾರು 57 ಲೀ ಇಂಧನವನ್ನು ತುಂಬಿಸಿದ್ದಾರೆ.

ಕಾರಿಗೆ 57 ಲೀಟರಿನಷ್ಟು ಇಂಧನವನ್ನು ತುಂಬಿಸಿರುವುದನ್ನು ಕಂಡು ಜಡ್ಜ್‌ ಶಾಕ್‌ ಆಗಿದ್ದಾರೆ.ಕೂಡಲೇ ಸಿಬ್ಬಂದಿಯ ಬಳಿ ತರಿಸಿ ಪರಿಶೀಲಿಸಿದಾಗ ಅದರಲ್ಲೂ ಕೂಡ 57ಲೀಟರ್‌ ಇಂಧನ ತುಂಬಿಸಿರುವುಸು ಎಂಟ್ರಿಯಾಗಿತ್ತು.

ಇದನ್ನೂ ಓದಿ: “ನೀವೇ ಕೋವಿ ಹಿಡಿದುಕೊಂಡು ಬಂದು ಬಿಡಿ” ಅಶ್ವಥ್‌ ನಾರಾಯಣ್‌ ವಿರುದ್ದ ಸಿದ್ದು ವಾಗ್ದಾಳಿ

ನನ್ನ ಕಾರಿನ ಇಂಧನ ಟ್ಯಾಂಕ್‌ನ ಸಾಮಾರ್ಥ್ಯ 50 ಲೀಟರ್‌,ಹೆಚ್ಚುವರಿ ಇಂದನ ತುಂಬಲು ಸಾಧ್ಯವೇ ಇಲ್ಲ ಎಂದು ಖುದ್ದಾಗಿ ಜಡ್ಜ್‌ ಅವರೇ ತನಿಖೆಗಳನ್ನು (Petrol Golmaal bunk sealed) ನಡೆಸಿ ಸ್ಥಳೀಯ ಪೋಲಿಸ್‌ ಅಧಿಕಾರಿಗಳನ್ನು ಕರೆಸಿ ಪರಿಶೀಲಿಸಿ,

ಪೆಟ್ರೋಲ್‌ ಬಂಕ್‌ ಗೋಲ್‌ಮಾಲ್‌ ನಡೆದಿರುವುದನ್ನು ಖಾತರಿಪಡಿಸಿಕೊಂಡು ಆ ಪೆಟ್ರೋಲ್‌ ಬಂಕನ್ನು ಸೀಜ್‌ ಮಾಡಿದ್ದಾರೆ.

ವಂಚನೆ ನಡೆಸಿರುವ ಮತ್ತು ಆ ಪ್ರದೇಶದಲ್ಲಿ ಇರುವ ಬಂಕ್‌ಗಳೆಲ್ಲದರ ಪೆಟ್ರೊಲ್‌ ಹಾಕಲು ಬಳಸುವ ಪರಿಕರಗಳನ್ನು ಜಿಲ್ಲಾ ಆಡಳಿತ ನೇಮಿಸುವ ಅಧಿಕಾರಿಗಳಿಂದ ಪರಿಶೀಲಿಸಲಾಗುವುದು,

ಇದರಲ್ಲಿ ಗ್ರಾಹಕರಿಗೆ ವಂಚನೆ ಮಾಡುತ್ತಿರುವುದು ಸಾಬೀತಾದರೆ ಅಂತಹ ಪೆಟ್ರೋಲ್‌ ಬಂಕ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗುವುವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2021 ರಲ್ಲಿ ಗುಜರಾತ್‌ನ(Gujarat) ಸೂರತ್‌ವೊಂದರಲ್ಲಿ(Surat) ಇದೇ ರೀತಿ ಮೋಸ ಮಾಡಲು ಹೋಗಿ ಪೆಟ್ರೋಲ್‌ ಬಂಕ್‌ ಒಂದನ್ನು ಸೀಜ್‌ ಮಾಡಲಾಗಿತ್ತು.

ಆ ರಾಜ್ಯದ ಕೃಷಿ ಮಂತ್ರಿಯಾಗಿದ್ದಂತಹ ಮುಖೇಶ್‌ ಪಟೇಲ್‌ ಅವರ ಕೈಯಲ್ಲಿ ಸಿಕ್ಕಿಹಾಕಿಕೊಂಡಿತ್ತು.ಇಂತಹ ಪ್ರರಣಗಳು ಇದೇ ಮೊದಲಲ್ಲ,

ಇಂತಹ ಅನೇಕ ಪ್ರಕರಣಗಳು ತುಂಬಾ ನಡೆದಿವೆ.ಆದರೆ ಅನೇಕ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ,ಏಕೆಂದರೆ ಗ್ರಾಹಕರಿಗೆ ತಾವು ಮೋಸ ಹೋಗುತ್ತಿದ್ದೇವೆ ಎಂಬ ಅರಿವೇ ಇರುವುದಿಲ್ಲ.

ಹಾಗಾಗಿ ಪೆಟ್ರೋಲ್‌ ಬಂಕ್‌ ಮಾಲಿಕರು ತಮ್ಮ ಸಿಬ್ಬಂದಿಗಳ ಜೊತೆ ಸೇರಿ ಇಂತಹ ಮೋಸಗಳನ್ನು ಮಾಡುತ್ತಾರೆ.ಮೊದಲೇ ಪೆಟ್ರೋಲ್‌ ದರ ದುಬಾರಿಯಾಗಿದೆ,

ಅಂತಹದರಲ್ಲಿ ಜನರಿಗೆ ಈ ತರಹ ಮೋಸ ಮಾಡಿದರೆ ಜನರಿಗೆ ಬರೆ ಹಾಕಿದಂತೆಯೇ.ಇಂತಹ ಸಂದರ್ಭಗಳಲ್ಲಿ ಜನರು ಕೊಂಚ ಜಾಗರೂಕತೆಯಿಂದಿದ್ದರೆ ಇಂತಹ ವಂಚನೆಗಳಿಂದ ತಪ್ಪಿಸಿಕೊಳ್ಳಬಹುದು.

Exit mobile version