ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇಂಧನ ಬೆಲೆ ಇಳಿಕೆ ; ನಿಮ್ಮ ಜಿಲ್ಲೆಯಲ್ಲಿ ಇಂದಿನ ದರ ಎಷ್ಟಿದೆ ಇಲ್ಲಿದೆ ಮಾಹಿತಿ!

petrol

ಮಾರ್ಚ್(March) ತಿಂಗಳ ಅವಧಿಯಲ್ಲಿ ಜನಸಾಮಾನ್ಯರಿಗೆ ಪೆಟ್ರೋಲ್(Petrol) ಮತ್ತು ಡಿಸೇಲ್(Diesel) ಬೆಲೆಯಲ್ಲಿ ಪೈಸೆ ಮೌಲ್ಯದಲ್ಲಿ ಹೆಚ್ಚಳ ಮಾಡುವ ಮೂಲಕ ಇಂದು 10-12 ರೂಪಾಯಿಯಷ್ಟು ಏರಿಸಲಾಗಿದೆ. ಈ ಕುರಿತು ಕೇಂದ್ರ ಸರ್ಕಾರದ(Central Government) ವಿರುದ್ಧ ಜನಸಾಮಾನ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಷ್ಟೆಲ್ಲಾ ಆಕ್ರೋಶ, ಆರೋಪ ವ್ಯಕ್ತವಾದರೂ ಕೂಡ ಕೇಂದ್ರ ಸರ್ಕಾರ ಏರಿಕೆಯಲ್ಲಿ ಕಡಿತಗೊಳಿಸದೆ, ದಿನೇ ದಿನೇ ಏರಿಕೆ ಮಾಡುವಲ್ಲಿ ಮುಂದೋಗುತ್ತಿದೆ.

ಸದ್ಯ ಕೇಂದ್ರ ಸರ್ಕಾರಕ್ಕೆ ಜನಸಾಮಾನ್ಯರು ಹಿಡಿ ಶಾಪವಾಕುತ್ತಿದ್ದು, ಈ ಬಗ್ಗೆ ಪರೋಕ್ಷವಾಗಿ ಉತ್ತರಿಸಿದ ವಿತ್ತ ಸಚಿವೆ(Finance Minister) ನಿರ್ಮಲಾ ಸೀತಾರಾಮನ್(Nirmala Sitharaman) ಉಕ್ರೇನ್-ರಷ್ಯಾ ನಡುವಿನ ಯುದ್ಧ ಪರಿಣಾಮ ನಮಗೆ ಇಂಧನ ಪೂರೈಕೆ ಮಾಡುವಲ್ಲಿ ತೊಂದರೆಯಾಗಿದೆ. ಈ ಕಾರಣದಿಂದ ದಿಢೀರ್ ಏರಿಕೆಗಳು ಕಂಡುಬರುತ್ತಿದೆ ಎಂದು ಹೇಳಿದರು. ಮತ್ತೊಂದೆಡೆ ಬೆಲೆ ಏರಿಕೆಗೆ ಸೂಕ್ತ ಕಡಿವಾಣ ಹಾಕುವಲ್ಲಿ ನಾವು ವಿಫಲರಾಗಿದ್ದೀವಿ ಎಂದು ಹೇಳಿ ಕೇಂದ್ರ ಜಾರಿಕೊಂಡಿದೆ! ಸದ್ಯ ಕರ್ನಾಟಕ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಬೆಲೆ ಎಷ್ಟಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬೀದರ್ : 112.63 ರೂ
ಬಾಗಲಕೋಟೆ : 111.59 ರೂ
ವಿಜಯಪುರ : 111.09 ರೂ
ಗದಗ : 111.92 ರೂ
ಕಲಬುರ್ಗಿ : 111.56 ರೂ
ಯಾದಗಿರಿ : 111.54 ರೂ
ಬಳ್ಳಾರಿ : 112.73 ರೂ
ಚಿಕ್ಕಬಳ್ಳಾಪುರ : 111.56 ರೂ
ಧಾರವಾಡ : 110.84 ರೂ
ದಾವಣಗೆರೆ : 112.61 ರೂ
ಬೆಳಗಾವಿ : 111.81 ರೂ
ಬೆಂಗಳೂರು : 111.09 ರೂ
ಬೆಂಗಳೂರು ಗ್ರಾಮಾಂತರ : 111.40 ರೂ
ಚಿಕ್ಕಮಗಳೂರು : 112.36 ರೂ
ಚಿತ್ರದುರ್ಗ : 112.16 ರೂ
ಹಾಸನ : 110.92 ರೂ
ದಕ್ಷಿಣ ಕನ್ನಡ : 110.92 ರೂ
ಹಾವೇರಿ : 111.71 ರೂ
ಕೊಪ್ಪಳ : 112.11 ರೂ
ಕೋಲಾರ : 110.79 ರೂ
ಕೊಡಗು : 112.65 ರೂ
ಮಂಡ್ಯ : 110.85 ರೂ
ಮೈಸೂರು : 110.95 ರೂ
ರಾಮನಗರ : 111.86 ರೂ
ಶಿವಮೊಗ್ಗ : 112.90 ರೂ
ಚಾಮರಾಜನಗರ : 111.04 ರೂ
ರಾಯಚೂರು : 111.86 ರೂ
ಉಡುಪಿ : 110.55 ರೂ
ಉತ್ತರ ಕನ್ನಡ : 111.14 ರೂ
ತುಮಕೂರು : 111.80 ರೂ


Exit mobile version