ಇಂಟರ್‌ನ್ಯಾಷನಲ್‌ ಆನ್‌ಲೈನ್‌ ವಹಿವಾಟಿಗೆ ಅನುಮತಿ ನೀಡಿದ ಫೋನ್‌ ಪೇ ಸಂಸ್ಥೆ ; ಇಲ್ಲಿದೆ ಹೆಚ್ಚಿನ ಮಾಹಿತಿ

New delhi : ನಮ್ಮ ದೇಶದಲ್ಲಿ ಮಾತ್ರ ಆನ್‌ಲೈನ್‌ ವಹಿವಾಟು ನಡೆಸಲು ಈ ಹಿಂದೆ ಅನುಮತಿ ನೀಡಿದ್ದ ಫೋನ್‌ ಪೇ (PhonePe APP)ಆಪ್‌ ಸಂಸ್ಥೆ, ಇದೀಗ ಅಂತಾರಾಷ್ಟ್ರೀಯ(PhonePe enabled international transactions) ಯುಪಿಐ(UPI) ವಹಿವಾಟುಗಳಿಗೆ ಸಂಪೂರ್ಣ ಅನುಮತಿಯನ್ನು ನೀಡಿದೆ.

ದೇಶದಲ್ಲಿ ದಿನನಿತ್ಯ ಅತೀ ಹೆಚ್ಚು ಬಳಕೆಯಾಗುವ ಆನ್‌ಲೈನ್‌ ಪೇಮೆಂಟ್‌ ಆಪ್‌(Online Payment App) ಆಗಿರುವ ಫೋನ್‌ ಪೇ, ಜನಸಾಮಾನ್ಯರ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ ಎಂದರೇ ತಪ್ಪಾಗಲಾರದು.

ನಾವು ಯಾರಿಗಾದರೂ ಕ್ಷಣ ಮಾತ್ರದಲ್ಲಿ ಹಣ ಕಳಿಸಬೇಕು ಎಂದರೆ ಫೋನ್‌ ಪೇ ಪೇಮೆಂಟ್‌ ಆಪ್‌ ಅದರಲ್ಲಿ ಪ್ರಮುಖವಾಗಿದೆ.

ಇಂತ ಶರವೇಗ ಸೇವೆಯನ್ನು ನೀಡುವ ಡಿಜಿಟಲ್‌ ಪೇಮೆಂಟ್‌ ಆಪ್‌ ಇದೀಗ ವಿದೇಶಿ ಪೇಮೆಂಟ್ಸ್‌ಗೆ ಅನುಮತಿಯನ್ನು ನೀಡಿರುವ ಬಗ್ಗೆ ದೃಢಪಡಿಸಿದೆ.

ದೇಶದ ಯೂನಿಯನ್‌ ಪೇಮೆಂಟ್‌ ಇಂಟರ್‌ಫೇಸ್‌(upi) ವಹಿವಾಟುಗಳಲ್ಲಿ ಬಹುತೇಕ ಪಾಲು ಹೊಂದಿರುವ ಪ್ರಮುಖ ಫೋನ್‌ (PhonePe enabled international transactions) ಪೇ ಆಪ್‌

ಇದೀಗ ವಿದೇಶಗಳಲ್ಲಿ ಕೂಡ ತನ್ನ ಗ್ರಾಹಕರಿಗೆ ವಹಿವಾಟು ನಡೆಸಲು ಅನುಮತಿಯನ್ನು ನೀಡಿದ್ದು,

ಈ ಒಂದು ಅನುಮತಿಗೆ ಬೆಂಬಲ ನೀಡಿರುವುದು ಭಾರತದ ಫಿನ್‌ಟೆಕ್‌ ಕಂಪನಿ(FinTec)!

ಫಿನ್‌ಟೆಕ್‌ ಸಂಸ್ಥೆಯು ಈ ಸೌಕರ್ಯವನ್ನು ಭಾರತೀಯರಿಗೆ ವಿದೇಶದ ನೆಲ್ಲದಲ್ಲೂ ಅನ್ವಯವಾಗುವಂತೆ ಮಾಡಿರುವುದು ಇದೇ ಮೊದಲು.

ಭಾರತೀಯರು ಈಗ ತಮ್ಮ ಯುಪಿಐ ಪಾವತಿಗಳನ್ನು ವಿದೇಶಿ ಸ್ಥಳಗಳಲ್ಲಿ ಕೂಡ ಮಾಡಬಹುದಾಗಿದೆ.

ಈ ಒಂದು ಪ್ರಕ್ರಿಯೆ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ತಿಳಿಯುವುದಾದರೆ, ನಾವು ವಿದೇಶಿ ನೆಲದಲ್ಲಿ ನಮ್ಮ ಹಣವನ್ನು ಅನ್ಯರ ಖಾತೆಗೆ ಟ್ರಾನ್ಸ್‌ಫರ್‌(Transfer) ಮಾಡಿದಾಗ,

https://youtu.be/CWMLCZWmBXg

ಅದು ಬಳಕೆದಾರನ ಬ್ಯಾಂಕ್‌ ಖಾತೆಯಿಂದ ಹಣ ಪಡೆದು ಅವರ ದೇಶದ ಕರೆನ್ಸಿಗೆ ಅನುಗುಣವಾಗುವಂತೆ ಕಡಿತಗೊಂಡು, ಅಂತಾರಾಷ್ಟ್ರೀಯ ಡೆಬಿಟ್‌ ಕಾರ್ಡ್‌ನ(Debit Card) ವಹಿವಾಟಿನಂತೆಯೇ ಇದನ್ನು ನಡೆಸಲಾಗುತ್ತದೆ.

ಸದ್ಯ ಈ ಒಂದು ಅನುಮತಿಯನ್ನು ಘೋಷಿಸಿರುವ ಫೋನ್‌ ಪೇ ಆಪ್‌, ಸಿಂಗಾಪುರ, ನೇಪಾಳ, ಭೂತಾನ್‌, ಯುಎಇ ಮತ್ತು ಮಾರಿಷನ್‌ ದೇಶಗಳಲ್ಲಿ ಫೋನ್‌ ಪೇ ಸ್ಕ್ಯಾನರ್‌(PhonePe scanner) ಅನ್ನು ಬಳಸಲು ಸೂಚಿಸಿದೆ. ಸದ್ಯ ಈ ದೇಶಗಳಲ್ಲಿ ಭಾರತೀಯರು ಫೋನ್‌ ಪೇ ಕ್ಯೂ ಆರ್‌ ಕೋಡ್‌ (QR Code)ಅನ್ನು ಬಳಸಿ ಹಣ ಪಾವತಿ ಮಾಡಬಹುದಾಗಿದೆ. ಯುಪಿಐ ಮರ್ಚೆಂಟ್‌ ಶಾಖೆಗಳನ್ನು ಮತ್ತಷ್ಟು ದೇಶಗಳಲ್ಲಿ ವಿಸ್ತರಿಸಲು ಯೋಜಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Exit mobile version