Platypus and echidna : ಮೊಟ್ಟೆ ಇಟ್ಟು, ಮರಿಗಳಿಗೆ ಹಾಲನ್ನುಣಿಸುವ ವಿಚಿತ್ರ ಜೀವಿಗಳು ಪ್ಲಾಟಿಪಸ್ ಮತ್ತು ಎಕಿಡ್ನಾ!

Viral : ಮಾಂಸಾಹಾರಿ(Carnivorous) ಸಸ್ಯಗಳು, ಮರಿ ಹಾಕುವ ಹಾವುಗಳು(Snakes) ಹೀಗೆ ಹತ್ತು ಹಲವು ರೀತಿಯ ಪ್ರಕೃತಿ ವಿಸ್ಮಯಗಳನ್ನು ನೀವು ಕೇಳಿರುತ್ತೀರಿ ಅಥವಾ ತಿಳಿದುಕೊಂಡಿರುತ್ತೀರಿ.

ಅದೇ ರೀತಿ ಮೊಟ್ಟೆ ಇಡುವ ಪ್ರಾಣಿಗಳು ಸಸ್ತನಿಗಳು ಕೂಡ ಆಗಿರುವ ಕೆಲವು ಜೀವಿಗಳಿವೆ.

ಹಾಲನ್ನು ಉಣಿಸುವ ಪ್ರಾಣಿಗಳಿಗೆ ಸಸ್ತನಿಗಳು ಎಂದು ಕರೆಯುತ್ತಾರೆ. ಹೀಗೆ ಮೊಟ್ಟೆಗಳನ್ನಿಟ್ಟು ಮರಿಗಳಿಗೆ ಹಾಲನ್ನು ಉಣಿಸುವ ಪ್ರಾಣಿಗಳು ಪ್ಲಾಟಿಪಸ್ ಮತ್ತು ಎಕಿಡ್ನಾ(Platypus and echidna).

ಪ್ರಪಂಚದಲ್ಲಿ ಈವರೆಗೆ ಐದು ಪ್ರಕಾರದ ಮೊಟ್ಟೆ ಇಡುವ ಸಸ್ತನಿಗಳು ಪತ್ತೆಯಾಗಿವೆ. ಅವುಗಳಲ್ಲಿ ಪ್ಲಾಟಿಪಸ್ ಒಂದಾದರೆ, ಎಕಿಡ್ನಾ ಜಾತಿಯ ನಾಲ್ಕು ಪ್ರಾಣಿಗಳು ಇವೆ.


ಈ ಪ್ರಾಣಿಗಳು ಜೀವ ವರ್ಗೀಕರಣದ ಪ್ರಕಾರ ಮೊನೊಟ್ರೆಮಿ ಗಣಕ್ಕೆ ಸೇರಿವೆ.

ಮೊನೊಟ್ರೆಮಿ ಎಂದರೆ ಮೊಟ್ಟೆಯಿಡುವ ಪ್ರಾಣಿಯಾಗಿದ್ದು, ಮೂತ್ರಜನಕಾಂಗ, ಜೀರ್ಣಾಂಗ ವ್ಯವಸ್ಥೆಗಳಿಗೆ ಮತ್ತು ಸಂತಾನೋತ್ಪತ್ತಿಗೆ ಒಂದೇ ದ್ವಾರವನ್ನು ಹೊಂದಿರುವ ಜೀವಿಗಳು, ಅದನ್ನು ಕ್ಲೋಯಕಾ ಎಂದು ಕರೆಯುತ್ತಾರೆ.

ಇದನ್ನೂ ಓದಿ : https://vijayatimes.com/information-about-karnataka-unofficial-schools/

ಇವುಗಳು ಬಿಸಿ ರಕ್ತದ ಪ್ರಾಣಿಗಳಾಗಿದ್ದು, ಹೆಚ್ಚು ಚಯಾಪಚಯ ಕ್ರಿಯೆಯ ಶಕ್ತಿಯನ್ನು ಹೊಂದಿವೆ. ಇವುಗಳು ಹೆಚ್ಚಾಗಿ ಆಸ್ಟ್ರೇಲಿಯಾ(Australia) ಮತ್ತು ನ್ಯೂಗಿನಿಯಾದಲ್ಲಿ ಕಂಡು ಬರುತ್ತವೆ.

ಇವು ಸರೀಸೃಪ ಮತ್ತು ಪಕ್ಷಿಗಳಂತೆ ಮೊಟ್ಟೆ ಇಡುತ್ತವೆ. ಆದರೆ ಮರಿಗಳಾದ ಮೇಲೆ ಮೊಲೆತೊಟ್ಟುಗಳ ಬದಲಿಗೆ ಚರ್ಮದಡಿಯಲ್ಲಿನ ಹಾಲನ್ನು (ಮಿಲ್ಕ್ ಪ್ಯಾಚಸ್) ಉಣಿಸುತ್ತವೆ.

ಇವುಗಳು ತಮ್ಮ ಎಲೆಕ್ಟ್ರೋರಿಸೆಪ್ಷನ್ ಸಂವೇದನದ ಮೂಲಕ ಬೇಟೆಯನ್ನು ಅರಸಿಕೊಂಡು ಹೋಗುತ್ತವೆ.

ಇನ್ನು, ಪ್ಲಾಟಿಪಸ್ ಬಾತುಕೋಳಿಯ ಕೊಕ್ಕು, ಬೀವರ್‌ನ ಬಾಲ ಮತ್ತು ನೀರುನಾಯಿಯ ದೇಹವನ್ನು ಕೂಡಿ ಮಾಡಿದಂತಹ ದೇಹಾಕೃತಿಯನ್ನು ಹೊಂದಿದ್ದು ಜಾಲಪೊರೆಯುಳ್ಳ ಪಾದಗಳನ್ನು ಹೊಂದಿದೆ.

ಇದು ಉಭಯಚರ ಪ್ರಾಣಿಯಾಗಿದೆ. ಇದರ ವೈಜ್ಞಾನಿಕ ಹೆಸರು ಆರ್ನಿಥೊರಿಂಚಸ್ ಅನಟೀನಸ್. ಪ್ಲಾಟಿಪಸ್ ಲ್ಯಾಟಿನ್ ಪದವಾಗಿದ್ದು ಗ್ರೀಕ್ ಮೂಲದ ಪ್ಲಾಟಪಸ್‌ನಿಂದ ಎರವಲು ಪಡೆಯಲಾಗಿದೆ.

ಪ್ಲಾಟಪಸ್ ಎಂದರೆ ಚಪ್ಪಟೆಯಾದ ಕಾಲು, ಪ್ಲಾಟಸ್ ಎಂದರೆ ಅಗಲವಾದ, ಚಪ್ಪಟೆಯಾದ ಎಂದರ್ಥ.


ಈ ಪ್ರಾಣಿಯನ್ನು ಮೊದಲ ಬಾರಿಗೆ 18ನೇ ಶತಮಾನದಲ್ಲಿ ಪತ್ತೆಹಚ್ಚಲಾಯಿತು ಹಾಗೂ ಅದನ್ನು ಬ್ರಿಟಿಷ್ ವಿಜ್ಞಾನಿಗಳು ಅಧ್ಯಯನಕ್ಕಾಗಿ ಯುರೋಪ್‌ಗೆ ಕೊಂಡೊಯ್ದಿದ್ದಾರೆ.

ಬಹಳಷ್ಟು ಜನರು ಇದರ ದೇಹವನ್ನು ಕಂಡು ಬೀವರ್ ದೇಹದ ಮತ್ತು ಬಾತುಕೋಳಿಯ ಕೊಕ್ಕಿನ ಪ್ರಾಣಿ ಎಂದು ತಮಾಷೆ ಮಾಡಿದ ಉದಾಹರಣೆಗಳೂ ಇವೆ.
Exit mobile version