ಮೋದಿ ಸರ್ಕಾರ ಈ ಸಂಸ್ಥೆಗಳನ್ನು ಮಾರಾಟ ಮಾಡಲೆಂದು 4 ಸಂಸ್ಥೆಗಳ ಕೈಗೆ ಒಪ್ಪಿಸಿತ್ತು: ಅದ್ಯಾವುದು ಇಲ್ಲಿದೆ ಉತ್ತರ!

narendra modi

ಈ ನಾಲ್ಕು ಸಂಸ್ಥೆಗಳು ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡಲು ಪಣತೊಟ್ಟಿದ್ದವು ಅದರಂತೆ NMP ಸುಮಾರು 6 ಲಕ್ಷ ಕೋಟಿಯಷ್ಟು ಸಾರ್ವಜನಿಕ ಆಸ್ತಿಯನ್ನು ಮಾರಾಟ ಮಾಡಲು ಮುಂದಡಿ ಇಟ್ಟಿದೆ. ಈ ಲೀಸ್ಟಿಗೆ ಹೊಸ ಸೇರ್ಪಡೆ ಎಂಬಂತೆ ಮಾರ್ಚ್ 9 ನೇ ತಾರೀಖು ಮೋದಿ ಸರ್ಕಾರ ಈ ದೇಶದ ಸಾರ್ವಜನಿಕ ಜಮೀನು ಅಂದರೆ ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಡುವ ಜಮೀನನ್ನು ಮಾರಾಟ ಮಾಡಲು ಇನ್ನೊಂದು ಸಂಸ್ಥೆಗೆ ಅಧಿಕಾರ ನೀಡಿದೆ ಅದು ಯಾವುದೆಂದರೆ:

NLMC : ರಾಷ್ಟ್ರೀಯ ಭೂ ನಗದೀಕರಣ ನಿಗಮ(National land Monetisation Corporation)

ಈ ಸಂಸ್ಥೆ ಈಗಾಗಲೇ ಸಾರ್ವಜನಿಕ ಜಮೀನನ್ನು ಮಾರಾಟ ಮಾಡಲು ನೀಲಿನಕ್ಷೆಯನ್ನು ಸಿದ್ಧಪಡಿಸಿಕೊಂಡಿದೆ. ಅದರಂತೆ ಭಾರತ್ ಅರ್ಥ್ ಮೂವರ್ಸ್ ಅಂದರೆ BEML ಗೆ ಒಳಪಡುವ ಬೆಂಗಳೂರಿನ 123 ಎಕರೆ ಮತ್ತು ಮೈಸೂರಿಗೆ ಒಳಪಡುವ 401 ಎಕರೆಯನ್ನು ಮಾರಲು ಸಿದ್ಧವಾಗಿದೆ. HMT ಕಂಪನಿಗೆ ಸೇರಿರುವ ಬೆಂಗಳೂರಿನ ಸುಮಾರು 90 ಎಕರೆ ಜಾಗ ಕೂಡ ಈಗ ಕಾರ್ಪೋರೇಟ್ ಸಂಸ್ಥೆಗಳಿಗೆ ಮಾರಾಟ ಮಾಡಲು ಮೋದಿ ಸರ್ಕಾರ ತುದಿಗಾಲಲ್ಲಿ ನಿಂತಿದೆ.

ಇನ್ನು ಈ ದೇಶದ ಅತಿದೊಡ್ಡ ಇಲಾಖೆ ಎನ್ನಿಸಿಕೊಳ್ಳುವ ರೈಲ್ವೆ ಇಲಾಖೆಗೆ(Railway Department) ಒಳಪಡುವ ಒಟ್ಟು 11 ಲಕ್ಷ ಎಕರೆ ಜಮೀನಿದೆ ಇದರಲ್ಲಿ ಮೋದಿ ಸರ್ಕಾರ ಸುಮಾರು 7 ಲಕ್ಷ ಎಕರೆಯಷ್ಟು ಜಮೀನನ್ನು ಮಾರಲು ಹೊರಟಿದೆ. ಭಾರತ ಇಂದು ಜಗತ್ತಿನ ಶಕ್ತಿಶಾಲಿ ಸೈನಿಕ ಬಲ ಹೊಂದಿರುವ ರಾಷ್ಟ್ರ. ನಮ್ಮ ದೇಶದ ರಕ್ಷಣಾ ಇಲಾಖೆಗೆ ಒಳಪಡುವ ಜಮೀನು ಒಟ್ಟು 18 ಲಕ್ಷ ಎಕರೆ. ಇದರಲ್ಲಿ 1.6 ಲಕ್ಷ ಎಕರೆ ಜಮೀನು ಕಂಟೋನ್ಮೆಂಟ್ ಗೆ ಒಳಪಡುತ್ತದೆ ಇದರಾಚೆಗಿನ ಸುಮಾರು 16.5 ಲಕ್ಷ ಎಕರೆ ಜಮೀನನ್ನು ಮೋದಿ ಸರ್ಕಾರ ಮಾರಲು ಹೊರಟಿರುವುದು ಈ ದೇಶದ ದುರಂತ ಎಂದೇ ಹೇಳಲು ಬಯಸುತ್ತೇನೆ.

ಸ್ವಾತಂತ್ರ್ಯ ಪಡೆದ 75 ವರ್ಷದ ಅಮೃತ ಮಹೋತ್ಸವ ಆಚರಣೆಯ ಈ ವರ್ಷದಲ್ಲಿ ನಾವು ಭಾರತದ ನೆಲವನ್ನೆ ಖಾಸಗಿಯವರಿಗೆ ಮಾರಲು ಹೊರಟಿರುವುದನ್ನು ದುರಂತ ಅನ್ನದೆ ಇನ್ನೇನು ಹೇಳಲಿ. ಇನ್ನು ಇಡೀ ಪ್ರಪಂಚ ತೈಲದ ವಿಷಯವಾಗಿ ತಲೆಕೆಡಿಸಿಕೊಂಡಿರುವ ಈ ಹೊತ್ತಿನಲ್ಲಿ, ಪ್ರಪಂಚದಲ್ಲೇ ತೈಲ ಸಮಸ್ಯೆ ತಲೆದೋರಿರುವ ಈ ಹೊತ್ತಿನಲ್ಲಿ ಮೋದಿ ಸರ್ಕಾರದ ಭಾರತದ ONGC ಯ ಶೇಕಡ 2.5% ಶೇರನ್ನು ಖಾಸಗಿಯವರಿಗೆ ಇದೇ ಮಾರ್ಚ್ 31 ರಿಂದ ಮಾರಲು ಅಣಿಯಾಗಿರುವುದನ್ನು ನೋಡಿದರೆ,

ಈ ದೇಶದ ಆರ್ಥಿಕ ಪರಿಸ್ಥಿತಿ ಅದೆಷ್ಟರ ಮಟ್ಟಿಗೆ ಕುಲಗೆಟ್ಟು ಹೋಗಿದೆ ಎಂದು ನೀವೇ ಅರ್ಥ ಮಾಡಿಕೊಳ್ಳಿ. ಇಂದು ಸರ್ಕಾರದ ಅಧೀನಕ್ಕೆ ಒಳಪಟ್ಟಿರುವ ಜಮೀನನ್ನು ಮಾರಲು ಹೊರಟಿರುವ ಮೋದಿ ಸರ್ಕಾರ, ನಾಳೆ ಬಡರೈತನ ಜಮೀನನ್ನು ಮಾರಾಟ ಮಾಡೊಲ್ಲವೆಂಬುದಕ್ಕೆ ಗ್ಯಾರಂಟಿ ಏನು?

ಈ ದೇಶದ ಪ್ರಜ್ಞಾವಂತ ನಾಗರೀಕನಿಗೆ ಈ ರೀತಿಯ ವಿಚಾರಗಳು ತಿಳಿಯಬಾರದು ಎಂದೇ ಬಿಜೆಪಿ ಪಕ್ಷ ಮುಸಲ್ಮಾನರನ್ನು ಗುರಿಯಾಗಿಸಿ ಈ ದೇಶದಲ್ಲಿ ಕೋಮು ದ್ವೇಷ ತಾಂಡವವಾಡುವಂತೆ ಮಾಡಿ ನಮ್ಮೆಲ್ಲರನ್ನು ಸುಲಿಗೆ ಮಾಡುತ್ತ ಈ ದೇಶವನ್ನು ವಿನಾಶದ ಅಂಚಿಗೆ ಕೊಂಡೊಯ್ಯುತ್ತಿದೆ. ಈಗಲೂ ನೀವು ಇದನ್ನು ಅರ್ಥ ಮಾಡಿಕೊಳ್ಳದೆ ಹೋದರೆ ಅನ್ನ,ನೀರು ಸಿಗದೆ ಈ ದೇಶದ ಜನ ಸಾಯುವ ದಿನಗಳು ದೂರವಿಲ್ಲ.

Exit mobile version