‘ಅಗ್ನಿ’ಪಥ್ ಪ್ರತಿಭಟನೆ ; ಧಗಧಗನೆ ಉರಿಯುತ್ತಿದ್ದ ಬೋಗಿಯಿಂದ ಮತ್ತೊಂದು ಬೋಗಿಯನ್ನು ನೂಕಿದ ಪೊಲೀಸರು!

protest

ಲಕ್ನೋ : ಪೂರ್ವ ಉತ್ತರ ಪ್ರದೇಶದ(UttarPradesh) ಬಲ್ಲಿಯಾ ಜಿಲ್ಲೆಯಲ್ಲಿ ‘ಅಗ್ನಿಪಥ್’ ಯೋಜನೆಯ(Agnipath Yojana) ವಿರುದ್ಧ ಸಿಡಿದೆದ್ದ ಪ್ರತಿಭಟನಾಕಾರರು(Protestors) ರೈಲಿನ ಬೋಗಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮುಂದುವರೆಸಿದರು. ಬೆಂಕಿ ತಗುಲಿ ಹೊತ್ತಿ ಉರಿಯುತ್ತಿದ್ದ ಬೋಗಿಯಿಂದ ಅನ್ಯ ಬೋಗಿಗಳು ಸುಟ್ಟು ಹೋಗಬಾರದು ಎಂಬ ನಿಟ್ಟಿನಲ್ಲಿ ನೂರಾರು ಪೊಲೀಸರು(Police) ಮತ್ತು ರೈಲ್ವೇ ಪಡೆ ಸಿಬ್ಬಂದಿ ಸೇರಿಕೊಂಡು ಬೋಗಿಗಳನ್ನು ಬೆಂಕಿಯಿಂದ ದೂರ ತಳ್ಳಿದ್ದಾರೆ.

ಹಾನಿಯಾಗದ ಬೋಗಿಗಳನ್ನು ರೈಲಿನ ಬೆಂಕಿಯ ಭಾಗದಿಂದ ಬೇರ್ಪಡಿಸುವಲ್ಲಿ ಪೊಲೀಸರ ಶ್ರಮ ಸಫಲವಾಗಿದೆ. ರೈಲನ್ನು ಧ್ವಂಸಗೊಳಿಸುವ ಮೊದಲು ಪ್ರತಿಭಟನಕಾರರು ರೈಲ್ವೆ ನಿಲ್ದಾಣದ ಆಸ್ತಿಯನ್ನು ಹಾನಿಗೊಳಿಸಿದ್ದಾರೆ ಮತ್ತು ಪೊಲೀಸರು ಅವರನ್ನು ಚದುರಿಸಲು ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಪ್ರತಿಭಟನಾಕಾರರ ಗುಂಪನ್ನು ಚದುರಿಸಲು ಪೊಲೀಸರ ಗುಂಪು ಸಜ್ಜಾದರೆ, ಇತ್ತ ಪೂರ್ವ ಉತ್ತರ ಪ್ರದೇಶದ ರೈಲ್ವೇ ನಿಲ್ದಾಣದ ಹೊರಗೆ ಬೀದಿಗಳಲ್ಲಿ ಪೊಲೀಸರೊಂದಿಗೆ ಕೆಲ ಪ್ರತಿಭಟನಕಾರರು ವಾಗ್ವಾದಕ್ಕಿಳಿದ್ದಿದ್ದಾರೆ.

“ನಾವು ಹಾನಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ” ಎಂದು ಬಲ್ಲಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್(District Magistrate) ಸೌಮ್ಯ ಅಗರ್ವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಹಾನಿ ಮಾಡಿದ ವ್ಯಕ್ತಿ ಯಾರು ಎಂದು ಗುರುತಿಸಲು ಪ್ರತಿಭಟನೆಯ ವೀಡಿಯೋಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಬಲ್ಲಿಯಾ ಪೊಲೀಸ್ ಮುಖ್ಯಸ್ಥ ರಾಜ್ ಕರಣ್ ನಯ್ಯರ್ ಹೇಳಿದ್ದಾರೆ. ಧ್ವಂಸ ಮಾಡಿದವರನ್ನು ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ನಯ್ಯರ್ ಹೇಳಿದ್ದಾರೆ.

ಬಿಹಾರದ(Bihar) ಹಲವಾರು ಭಾಗಗಳಲ್ಲಿ ಸೇನಾ ಆಕಾಂಕ್ಷಿಗಳು(Defence Job Seekers) ರೈಲು ಮತ್ತು ರಸ್ತೆ ಸಂಚಾರವನ್ನು ಅಡ್ಡಿಪಡಿಸಿದ ಒಂದು ದಿನದ ನಂತರವೇ ಸತತವಾಗಿ ಪ್ರತಿಭಟನೆ ನಡೆಸುವ ಮೂಲಕ ತಮ್ಮ ವಿರೋಧವನ್ನು ಪ್ರತಿಭಟನೆಯ ಮೂಲಕ ಮುಂದುವರೆಸುತ್ತಿದ್ದಾರೆ.

Exit mobile version